ADVERTISEMENT

ದೆಹಲಿ: ಕಾರ್ಗೊ ಕಂಟೇನರ್‌ಗೆ ಡಿಕ್ಕಿಯಾದ ಏರ್ ಇಂಡಿಯಾ ವಿಮಾನಕ್ಕೆ ಹಾನಿ

ಪಿಟಿಐ
Published 15 ಜನವರಿ 2026, 13:23 IST
Last Updated 15 ಜನವರಿ 2026, 13:23 IST
<div class="paragraphs"><p>ಎಕ್ಸ್ ಚಿತ್ರ</p></div>

ಎಕ್ಸ್ ಚಿತ್ರ

   

ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಮಂಜಿನ ನಡುವೆ ಕಾರ್ಗೊ ಕಂಟೇನರ್‌ಗೆ ಡಿಕ್ಕಿಯಾದ ಪರಿಣಾಮ ಏರ್ ಇಂಡಿಯಾ ವಿಮಾನದ ಬಲ ಎಂಜಿನ್‌ಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಏರ್ ಇಂಡಿಯಾ ಎ350 ವಿಮಾನ ಹಾನಿಗೊಳಗಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ADVERTISEMENT

ಈ ವಿಮಾನ ಕಾರ್ಯಾಚರಣೆ ನಡೆಸುವ ಮಾರ್ಗಗಳಲ್ಲಿ ಅಡಚಣೆ ಎದುರಾಗಬಹುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ದೆಹಲಿಯಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಎಐ101 ವಿಮಾನ, ಅನಿರೀಕ್ಷಿತವಾಗಿ ಇರಾನ್‌ ವಾಯುಪ್ರದೇಶ ಮುಚ್ಚಿದ್ದರಿಂದ ಸ್ವಲ್ಪ ಹೊತ್ತಲ್ಲೇ ದೆಹಲಿಗೆ ಹಿಂತಿರುಗಿತ್ತು. ಈ ಮಧ್ಯೆ ದಟ್ಟವಾದ ಮಂಜಿನ ನಡುವೆ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಕಾರ್ಗೊ ಕಂಟೇನರ್‌ವೊಂದಕ್ಕೆ ಡಿಕ್ಕಿಯಾಗಿದೆ. ಇದರಿಂದಾಗಿ ವಿಮಾನದ ಬಲ ಎಂಜಿನ್‌ ಹಾನಿಗೊಳಗಾಗಿದೆ ಎಂದು ಸಂಸ್ಥೆ ತಿಳಿಸಿದೆ.

ವಿಮಾನವನ್ನು ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದು, ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಪ್ರಯಾಣಿಕರಿಗೆ ಉಂಟಾಗಿರುವ ಅನಾನುಕೂಲತೆಗೆ ಸಂಸ್ಥೆಯು ವಿಷಾದ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.