ADVERTISEMENT

India-Pakistan Tensions | ವಿಡಿಯೊ: ಗಡಿಯಲ್ಲಿ ಪಾಕ್ ನೆಲೆಗಳ ಧ್ವಂಸದ ದೃಶ್ಯ

​ಪ್ರಜಾವಾಣಿ ವಾರ್ತೆ
Published 10 ಮೇ 2025, 7:42 IST
Last Updated 10 ಮೇ 2025, 7:42 IST

ಮೇ 8 ಹಾಗೂ 9ರ ನಡುವಿನ ರಾತ್ರಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ಮೇಲೆ ಡ್ರೋನ್ ದಾಳಿ ನಡೆಸುವ ಪಾಕಿಸ್ತಾನದ ದುಸ್ಸಾಹಸವನ್ನು ಭಾರತೀಯ ಸೇನೆ ಹೇಗೆ ಸಮರ್ಥವಾಗಿ ಹಿಮ್ಮೆಟ್ಟಿಸಿತು ಮತ್ತು ಪಾಕಿಸ್ತಾನದ ಟೆರರಿಸ್ಟ್ ಲಾಂಚ್‌ಪ್ಯಾಡ್‌ಗಳನ್ನು ಧ್ವಂಸಗೊಳಿಸಿತೆಂಬ ದೃಶ್ಯಗಳು ಇಲ್ಲಿವೆ. ಗಡಿ ನಿಯಂತ್ರಣ ರೇಖೆಯ ಸಮೀಪ ಇರುವ ಈ ಲಾಂಚ್‌ಪ್ಯಾಡ್‌ಗಳ ಮೂಲಕವೇ ಪಾಕಿಸ್ತಾನಿ ಉಗ್ರಗಾಮಿಗಳು ಭಾರತೀಯ ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿಯನ್ನು ಯೋಜಿಸುತ್ತಿದ್ದರು. ಈಗ ಭಾರತ ಸೇನೆಯ ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಉಗ್ರಗಾಮಿಗಳ ಮೂಲಸೌಕರ್ಯದ ವ್ಯವಸ್ಥೆಗೆ ಬಲವಾದ ಹೊಡೆತ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.