ADVERTISEMENT

IndiGo Crisis: ದೆಹಲಿ, ಮುಂಬೈಯಲ್ಲಿ 200ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

ಪಿಟಿಐ
Published 6 ಡಿಸೆಂಬರ್ 2025, 7:08 IST
Last Updated 6 ಡಿಸೆಂಬರ್ 2025, 7:08 IST
<div class="paragraphs"><p>ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ಲಗೇಜ್‌ಗಳನ್ನು ಹಿಡಿದುಕೊಂಡು ವಿಮಾನಕ್ಕಾಗಿ ಪ್ರಯಾಣಿಕರು ಕಾದು ಕೂತ ದೃಶ್ಯ ಕಂಡುಬಂದಿದ್ದು ಹೀಗೆ</p></div>

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ಲಗೇಜ್‌ಗಳನ್ನು ಹಿಡಿದುಕೊಂಡು ವಿಮಾನಕ್ಕಾಗಿ ಪ್ರಯಾಣಿಕರು ಕಾದು ಕೂತ ದೃಶ್ಯ ಕಂಡುಬಂದಿದ್ದು ಹೀಗೆ

   

–ಪಿಟಿಐ ಚಿತ್ರ

ನವದೆಹಲಿ: ಸತತ ಐದನೇ ದಿನವಾದ ಶನಿವಾರವೂ ಇಂಡಿಗೊ ಏರ್‌ಲೈನ್ಸ್‌ಗೆ ಸೇರಿದ ವಿಮಾನಗಳ ಹಾರಾಟದಲ್ಲಿ ತೀವ್ರ ವ್ಯತ್ಯಯವಾಗಿದ್ದು, ದೆಹಲಿ, ಮುಂಬೈ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡಿದ್ದಾರೆ.

ADVERTISEMENT

ಮುಂಬೈಯಲ್ಲಿ 109, ದೆಹಲಿಯಲ್ಲಿ 106 ವಿಮಾನಗಳ ಹಾರಾಟ ರದ್ದಾಗಿದೆ. ಸೋಮವಾರದಿಂದ ಈವರೆಗೆ 1,000ಕ್ಕೂ ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಡಿಸೆಂಬರ್‌ 10ರಿಂದ 15ರ ವೇಳೆಗೆ ಸಂಚಾರ ಸಹಜಸ್ಥಿತಿಗೆ ಬರಲಿದೆ’ ಎಂದು ಇಂಡಿಗೊದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪೀಟರ್‌ ಎಲ್ಬರ್ಸ್‌ ಶುಕ್ರವಾರ ತಿಳಿಸಿದ್ದರು.

‘ವಿಮಾನಗಳ ಹಾರಾಟ ರದ್ದುಗೊಂಡು ಪ್ರಯಾಣಿಕರಿಗೆ ಅಡಚಣೆ ಉಂಟಾದ ಕುರಿತು ವಿಡಿಯೊ ಸಂದೇಶದಲ್ಲಿ ಎಲ್ಬರ್ಸ್‌ ಕ್ಷಮೆಯಾಚಿಸಿದ್ದರು. ಜತೆಗೆ, ಕಳೆದ ಕೆಲವು ದಿನಗಳಿಂದ ನಾವು ತೆಗೆದುಕೊಂಡ ಕ್ರಮಗಳು ಸಾಕಾಗುವುದಿಲ್ಲ ಎಂದು ಸಾಬೀತಾಗಿದೆ. ಆದ್ದರಿಂದ, ಎಲ್ಲ ವ್ಯವಸ್ಥೆಗಳು ಹಾಗೂ ವೇಳಾಪಟ್ಟಿ ಯನ್ನು ಮರುನಿಗದಿಪಡಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದೂ ಹೇಳಿದ್ದರು.

ವಿಮಾನಗಳ ಹಾರಾಟ ಕಾರ್ಯಾಚರಣೆಯನ್ನು ಸಹಜಸ್ಥಿತಿಗೆ ತರುವ ನಿಟ್ಟಿನಲ್ಲಿ ವಿಮಾನ ಕರ್ತವ್ಯದ ಸಮಯದ ನೀತಿ (ಎಫ್‌ಡಿಟಿಎಲ್‌) ಅನುಷ್ಠಾನಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ತಾತ್ಕಾಲಿಕ ತಡೆ ನೀಡಿರುವುದು ದೊಡ್ಡಮಟ್ಟದ ಸಹಾಯವಾಗಿದೆ ಎಂದು ಎಲ್ಬರ್ಸ್‌ ತಿಳಿಸಿದ್ದರು.

ಏತನ್ಮಧ್ಯೆ, ಡಿಜಿಸಿಎ ಇಂಡಿಗೊಗೆ ನೀಡಿದ ಆಯ್ದ ಮತ್ತು ಅಸುರಕ್ಷಿತ ಪರಿಹಾರಕ್ಕೆ ಏರ್‌ಲೈನ್ಸ್ ಪೈಲಟ್‌ಗಳ ಸಂಘ (ಎಎಲ್‌ಪಿಎ) ಬಲವಾದ ಆಕ್ಷೇಪಣೆ ವ್ಯಕ್ತಪಡಿಸಿದೆ. ಡಿಜಿಸಿಎ ಕ್ರಮದಿಂದ ನಿಯಂತ್ರಕ ಸಮಾನತೆಯನ್ನು ನಾಶಪಡಿಸುವುದಲ್ಲದೆ, ಲಕ್ಷಾಂತರ ಪ್ರಯಾಣಿಕರನ್ನು ಹೆಚ್ಚಿನ ಅಪಾಯಕ್ಕೆ ಸಿಲುಕಿಸಿದೆ ಎಂದೂ ಕಿಡಿಕಾರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.