ADVERTISEMENT

ಕಾಳಿ ಮಾತೆಯ ಅವಹೇಳನ ವಿವಾದ: ನಿರ್ದೇಶಕಿ ಮಣಿಮೇಕಲೈ ವಿರುದ್ಧ ಲುಕ್‌ಔಟ್‌ ನೋಟಿಸ್‌

ಐಎಎನ್ಎಸ್
Published 8 ಜುಲೈ 2022, 2:37 IST
Last Updated 8 ಜುಲೈ 2022, 2:37 IST
 ಲೀನಾ ಮಣಿಮೇಕಲೈ
ಲೀನಾ ಮಣಿಮೇಕಲೈ   

ಭೋಪಾಲ್‌ (ಮಧ್ಯಪ್ರದೇಶ): ಹಿಂದೂ ದೇವತೆ ಕಾಳಿ ಧೂಮಪಾನ ಮಾಡುತ್ತಿರುವ ಮತ್ತು ಎಲ್‌ಜಿಬಿಟಿ ಧ್ವಜ ಹಿಡಿದಿರುವ ಪೋಸ್ಟರ್‌ನ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪೊಲೀಸರು ಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ಗುರುವಾರ ಲುಕ್‌ಔಟ್ ನೋಟಿಸ್‌ ಹೊರಡಿಸಿದ್ದಾರೆ.

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕೆನಡಾದ ಚಿತ್ರ ನಿರ್ದೇಶಕಿ ಮಣಿಮೇಕಲೈ ವಿರುದ್ಧ ಲುಕ್‌ಔಟ್ ಸುತ್ತೋಲೆ ಹೊರಡಿಸುವಂತೆ ಕೇಂದ್ರವನ್ನು ಒತ್ತಾಯಿಸುವುದಾಗಿ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆಯಾಗಿದೆ.

ಕಾಳಿ ಮಾತೆಯ ಅಪಮಾನ ಮಾಡುವುದೇ ಮಣಿಮೇಕಲೈ ಅವರ ಪೋಸ್ಟರ್‌ನ ಉದ್ದೇಶ ಎಂದು ಮಿಶ್ರಾ ಗುರುವಾರ ಆರೋಪಿಸಿದ್ದರು.

ADVERTISEMENT

ಮಹುವಾಗೂ ಅಂಟಿದ ವಿವಾದ

ಪ್ರತಿಯೊಬ್ಬ ವ್ಯಕ್ತಿ ದೇವರಿಗೆ ವಿಶಿಷ್ಟ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಕಾಳಿ ದೇವಿಯನ್ನು ಮಾಂಸ ತಿನ್ನುವ ಮತ್ತು ಮದ್ಯಸ್ವೀಕರಿಸುವ ದೇವತೆಯಾಗಿ ಕಲ್ಪಿಸಿಕೊಳ್ಳಲು ವ್ಯಕ್ತಿಯಾಗಿ ನನಗೆ ಎಲ್ಲ ಹಕ್ಕಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದಾಗಿ ವಿವಾದವು ಮತ್ತಷ್ಟು ಉಲ್ಬಣಗೊಂಡಿತು.

ಹೀಗಾಗಿ ಮಹುವಾ ಮೊಯಿತ್ರಾ ಅವರ ವಿರುದ್ಧವೂ ಭೋಪಾಲ್‌ನ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.