ADVERTISEMENT

ಶೀಘ್ರದಲ್ಲೇ ಬುಲೆಟ್ ರೈಲು; ಎರಡೇ ಗಂಟೆಯಲ್ಲಿ ಮುಂಬೈ–ಅಹಮದಾಬಾದ್ ಪ್ರಯಾಣ: ವೈಷ್ಣವ್

ಪಿಟಿಐ
Published 3 ಆಗಸ್ಟ್ 2025, 9:58 IST
Last Updated 3 ಆಗಸ್ಟ್ 2025, 9:58 IST
<div class="paragraphs"><p>ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌</p></div>

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌

   

ಕೃಪೆ: ಪಿಟಿಐ

ಭಾವನಗರ (ಗುಜರಾತ್‌): ದೇಶದ ಮೊದಲ ಬುಲೆಟ್‌ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ. ಇದರಿಂದ, ಮುಂಬೈ ಹಾಗೂ ಅಹಮದಾಬಾದ್‌ ನಡುವಣ ಪ್ರಯಾಣದ ಅವಧಿಯು ಎರಡು ಗಂಟೆ ಏಳು ನಿಮಿಷಕ್ಕೆ ಇಳಿಯಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭಾನುವಾರ ಹೇಳಿದ್ದಾರೆ.

ADVERTISEMENT

ಭಾವನಗರ ಟರ್ಮಿನಲ್‌ನಿಂದ ವರ್ಚುವಲ್‌ ಆಗಿ ಆಯೋಧ್ಯಾ ಎಕ್ಸ್‌ಪ್ರೆಸ್‌, ರೇವಾ–ಪುಣೆ ಎಕ್ಸ್‌ಪ್ರೆಸ್‌ ಮತ್ತು ಜಬಲ್‌ಪುರ–ರಾಯ್‌ಪುರ ಎಕ್ಸ್‌ಪ್ರೆಸ್‌ ರೈಲುಗಳಿಗೆ ಚಾಲನೆ ನೀಡಿದರು. ಅವರಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌, ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್‌ ಸಾಯ್‌ ಸಾಥ್‌ ನೀಡಿದರು.

ಬಳಿಕ ಮಾತನಾಡಿದ ವೈಷ್ಣವ್‌, 'ಮುಂಬೈನಿಂದ ಅಹಮದಾಬಾದ್‌ಗೆ ಮೊದಲ ಬುಲೆಟ್‌ ರೈಲು ಶೀಘ್ರದಲ್ಲೇ ಆರಂಭವಾಗಲಿದೆ. ಈ ಯೋಜನೆಯ ಕಾರ್ಯವು ಬಹಳ ವೇಗವಾಗಿ ನಡೆಯುತ್ತಿದೆ. ರೈಲು ಚಾಲನೆ ಪ್ರಾರಂಭವಾದಾಗ ಈ ಎರಡೂ ನಗರಗಳ ನಡುವಣ ಪ್ರಯಾಣಕ್ಕೆ ಕೇವಲ ಎರಡು ಗಂಟೆ, ಏಳು ನಿಮಿಷ ತೆಗೆದುಕೊಳ್ಳುತ್ತದೆ' ಎಂದು ತಿಳಿಸಿದ್ದಾರೆ.

ಬುಲೆಟ್‌ ರೈಲು, ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಿಂದ (ಬಿಕೆಸಿ) ಆರಂಭವಾಗಿ ಗುಜರಾತಿನ ವಾಪಿ, ಸೂರತ್‌, ಆನಂದ್‌, ವಡೋದರಾ ಮಾರ್ಗವಾಗಿ ಸಂಚರಿಸಿ ಅಹಮದಾಬಾದ್‌ ಸಂಪರ್ಕಿಸುತ್ತದೆ. ಈ ಮಾರ್ಗವಾಗಿ 508 ಕಿ.ಮೀ. ಸಂಚರಿಸುವ ಈ ರೈಲು, ಪ್ರತಿ ಗಂಟೆಗೆ ಗರಿಷ್ಠ 320 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.