ADVERTISEMENT

TOP 10 NEWS | ಈ ದಿನದ ಪ್ರಮುಖ 10 ಸುದ್ದಿಗಳು: 10 ನವೆಂಬರ್‌ 2023

ಪ್ರಜಾವಾಣಿ ವಿಶೇಷ
Published 10 ನವೆಂಬರ್ 2023, 13:06 IST
Last Updated 10 ನವೆಂಬರ್ 2023, 13:06 IST
<div class="paragraphs"><p>ರಾಜ್ಯ, ದೇಶ, ವಿದೇಶಕ್ಕೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p></div>

ರಾಜ್ಯ, ದೇಶ, ವಿದೇಶಕ್ಕೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

   

ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ, ಆರ್.ಡಿ. ಪಾಟೀಲ ಬಂಧನ, ಬಾಳೆಗೊನೆ ಉಡುಗೊರೆ ನೀಡಿದ ಎಚ್‌.ಡಿ.ಕುಮಾರಸ್ವಾಮಿ, ಗಾಜಾ ಆಸ್ಪತ್ರೆಗಳಲ್ಲಿ ಅರಿವಳಿಕೆ, ಔಷಧಗಳ ಕೊರತೆ, ಹರಿಣಗಳಿಗೆ ಗೆಲ್ಲಲು 245 ರನ್‌ಗಳ ಗುರಿ ನೀಡಿದ ಅಫ್ಗನ್ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು.

ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ: ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಸುಪ್ರೀಂ ಕೋರ್ಟ್

ADVERTISEMENT

ಸದನದಲ್ಲಿ ಅಂಗೀಕಾರಗೊಂಡಿರುವ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕುತ್ತಿಲ್ಲ ಎಂಬ ಪಂಜಾಬ್ ಸರ್ಕಾರದ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್‌, ‘ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ’ ಎಂದು ರಾಜ್ಯಪಾಲರಿಗೆ ಖಡಕ್ ಎಚ್ಚರಿಕೆ ನೀಡಿದೆ.

ಕೆಇಎ ಪರೀಕ್ಷೆ ಅಕ್ರಮ: ಮಹಾರಾಷ್ಟ್ರದಲ್ಲಿ ಆರ್.ಡಿ. ಪಾಟೀಲ ಬಂಧನ

ಆರ್.ಡಿ. ಪಾಟೀಲ

ಕೆಇಎ ಪರೀಕ್ಷಾ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ, ಕಿಂಗ್‌ಪಿನ್ ಆರ್.ಡಿ.ಪಾಟೀಲನನ್ನು ಕಲಬುರಗಿ ನಗರ ಪೊಲೀಸರು ಶುಕ್ರವಾರ ಮಧ್ಯಾಹ್ನ ಮಹಾರಾಷ್ಟ್ರದ ಅಕ್ಕಲಕೋಟ ಬಳಿ ಬಂಧಿಸಿದ್ದಾರೆ.

ಇಸ್ರೇಲ್ ಕಾನ್ಸುಲ್ ಜನರಲ್‌ಗೆ ಬಾಳೆಗೊನೆ ಉಡುಗೊರೆ ನೀಡಿದ ಎಚ್‌.ಡಿ.ಕುಮಾರಸ್ವಾಮಿ

ಟ್ಯಾಮಿ ಬೆನ್‌ಹೈಮ್‌ ಅವರಿಗೆ ಬಾಳೆಗೊನೆ ನೀಡಿದ ಎಚ್.ಡಿ.ಕುಮಾರಸ್ವಾಮಿ

ಪೋಕ್ಸೊ ಪ್ರಕರಣ: ಚಿತ್ರದುರ್ಗ ಮುರುಘಾ ಶರಣರ ಬಿಡುಗಡೆಯ ಆದೇಶ ನ.15ಕ್ಕೆ ಮುಂದೂಡಿಕೆ

ಶಿವಮೂರ್ತಿ ಮುರುಘಾ ಶರಣರ

ಪೋಕ್ಸೊ ಪ್ರಕರಣಕ್ಕೆ ಹೈಕೋರ್ಟ್ ನಲ್ಲಿ ಜಾಮೀನು ಪಡೆದಿರುವ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡುವ ಆದೇಶವನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ.15ಕ್ಕೆ ಮುಂದೂಡಿದೆ.

ಪುರಿ ಜಗನ್ನಾಥ ದೇವಾಲಯದಲ್ಲಿ ನೂಕುನುಗ್ಗಲು: 10 ಮಂದಿಗೆ ಗಾಯ

ಪುರಿ ಜಗನ್ನಾಥ ದೇವಾಲಯ (ಸಾಂದರ್ಭಿಕ ಚಿತ್ರ)

ಗಾಜಾ ಆಸ್ಪತ್ರೆಗಳಲ್ಲಿ ಅರಿವಳಿಕೆ, ಔಷಧಗಳ ಕೊರತೆ: ಗಾಯಾಳುಗಳ ನರಳಾಟ

ಗಾಯಗೊಂಡ ಪ್ಯಾಲೆಸ್ತೀನ್ ಬಾಲಕಿಗೆ ಗಾಜಾ ನಗರದ ಅಲ್‌ ಶಿಫಾ ಆಸ್ಪತ್ರೆಯಲ್ಲಿ ಅರಿವಳಿಕೆ ಇಲ್ಲದೆ ಹೊಲಿಗೆ ಹಾಕಿದ ವೈದ್ಯಕೀಯ ಸಿಬ್ಬಂದಿ

ಗಾಯಗೊಂಡ ಪುಟ್ಟ ಬಾಲಕಿಯ ತೆಲೆಗೆ ಹೊಲಿಗೆ ಹಾಕುತ್ತಿದ್ದ ವೇಳೆ ನೋವಿನಿಂದ ‘ಮಮ್ಮಿ’ ಎಂದು ಕೂಗುತ್ತಿರುವುದು ಕರುಳು ಕಿವುಚುವಂತಿತ್ತು. ಅದು ನನ್ನ ವೃತ್ತಿ ಜೀವನದ ಅತಿ ಕೆಟ್ಟ ಘಟನೆಯಾಗಿದೆ. ನಾವು ಕೂಡ ಅಸಹಾಯಕರು. ನಮ್ಮ ಬಳಿ ಅರಿವಳಿಕೆ ಖಾಲಿಯಾಗುವ ಹಂತ ತಲುಪಿದೆ, ಉಳಿದ ಔಷಧಗಳೂ ಕೆಲವೇ ದಿನಗಳಿಗಾಗುವಷ್ಟಿವೆ’ ಎನ್ನುತ್ತಾರೆ ಗಾಜಾದಲ್ಲಿನ ಅಲ್‌ ಶಿಫಾ ಆಸ್ಪತ್ರೆಯ ನರ್ಸ್‌ ಅಬು ಇಮಾದ್‌ ಹಸನೇನ್‌.

Ilaiyaraaja Biopic: ಸಂಗೀತ ಮಾಂತ್ರಿಕ ಇಳಯರಾಜ ಪಾತ್ರದಲ್ಲಿ ನಟ ಧನುಷ್

ಇಳಯರಾಜ ಅವರೊಂದಿಗೆ ನಟ ಧನುಷ್

 ಸಂಗೀತ ಮಾಂತ್ರಿಕ ಇಳಯರಾಜ ಅವರ ಜೀವನವನ್ನು (Biopic) ಆಧರಿಸಿದ ಸಿನಿಮಾ ಮಾಡಲು ಸಿದ್ದತೆ ನಡೆದಿದೆ. ಇಳಯರಾಜ ಪಾತ್ರದಲ್ಲಿ ತಮಿಳು ಸೂಪರ್‌ಸ್ಟಾರ್ ನಟ ಧನುಷ್ ಬಣ್ಣ ಹಚ್ಚಲಿದ್ದಾರೆ.

ಶುಭಮನ್ ಗಿಲ್–ಸಾರಾ ತೆಂಡೂಲ್ಕರ್ ಬೆನ್ನುಬಿದ್ದ ಡೀಪ್‌ಫೇಕ್‌!

ಶುಭಮನ್ ಗಿಲ್–ಸಾರಾ ತೆಂಡೂಲ್ಕರ್

ಇಂಟರ್‌ನೆಟ್ ಲೋಕದಲ್ಲಿ ಡೀಪ್‌ಫೇಕ್ ಎಂಬ ಮಾಯಾಜಾಲ ಇತ್ತೀಚಿಗೆ ಹೆಚ್ಚು ಸದ್ದು ಮಾಡುತ್ತಿದ್ದು, ನಟ–ನಟಿಯರಿಗೆ, ಸೆಲಿಬ್ರಿಟಿಗಳಿಗೆ, ಕ್ರಿಕೆಟ್ ಆಟಗಾರರಿಗೆ ಇದರಿಂದ ತುಂಬಾ ಮುಜುಗರವಾಗುತ್ತಿದೆ.

ಹೀರೊ ಕಂಪನಿ ಅಧ್ಯಕ್ಷ ಪವನ್ ಮುಂಜಾಲ್‌ಗೆ ಸೇರಿದ ₹24 ಕೋಟಿ ಮೊತ್ತದ ಆಸ್ತಿ ಜಪ್ತಿ

ಪವನ್ ಮುಂಜಾಲ್

 ಬೇರೆಯವರ ಹೆಸರಿನಲ್ಲಿ ನೀಡಲಾದ ವಿದೇಶಿ ಕರೆನ್ಸಿಯನ್ನು ತನ್ನ ವೈಯಕ್ತಿಕ ಬಳಕೆಗೆ ಬಳಸಿಕೊಂಡಿದ್ದು ಆರ್‌ಬಿಐ ನಿಯಮಗಳಿಗೆ ವಿರುದ್ಧವಾಗಿದ್ದು ಎಂದು ಆರೋಪಿಸಿರುವ ಜಾರಿ ನಿರ್ದೇಶನಾಲಯ (ED), ಹೀರೊ ಮೊಟೊಕಾರ್ಪ್‌ನ ಅಧ್ಯಕ್ಷ ಪವನ್ ಕಾಂತ್ ಮುಂಜಾಲ್‌ಗೆ ಸೇರಿದ ₹24.95 ಕೋಟಿ ಮೊತ್ತದ ಆಸ್ತಿಯನ್ನು ಜಪ್ತಿ ಮಾಡಿದೆ.

CWC 2023 | SA vs AFG: ಹರಿಣಗಳಿಗೆ ಗೆಲ್ಲಲು 245 ರನ್‌ಗಳ ಗುರಿ ನೀಡಿದ ಅಫ್ಗನ್

ಅಜ್ಮತ್‌ವುಲ್ಲಾ

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಅಫ್ಗಾನಿಸ್ತಾನ 245 ರನ್‌ಗಳ ಗೆಲುವಿನ ಗುರಿ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.