ADVERTISEMENT

ವಿಶ್ಲೇಷಣೆ | ಸ್ಪೀಕರ್ ನಿರ್ಧಾರದಿಂದ ಬಹುಮತ ಸಾಬೀತುಪಡಿಸಲು ಬಿಜೆಪಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 9:10 IST
Last Updated 28 ಜುಲೈ 2019, 9:10 IST
   

ಬೆಂಗಳೂರು: ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವ ಸ್ಪೀಕರ್ ನಿರ್ಧಾರದಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸೋಮವಾರ ಬಿಜೆಪಿ ಸುಲಭವಾಗಿ ಬಹುಮತ ಸಾಬೀತುಪಡಿಸಲಿದೆ ಎಂದು ಹೇಳಲಾಗುತ್ತಿದೆ.

ಸದನದ ಒಟ್ಟು ಸದಸ್ಯ ಬಲ 224,ಅನರ್ಹತೆಗೂ ಮುನ್ನ ಸದನದಲ್ಲಿ221 ಸದಸ್ಯರಿದ್ದರು. ಈ ಪೈಕಿ 17 ಮಂದಿಯ ಅನರ್ಹತೆಯ ನಂತರ ಒಟ್ಟು ಸದಸ್ಯ ಬಲವು 208ಕ್ಕೆ ಕುಸಿಯಿತು. ಸದ್ಯದ ಲೆಕ್ಕಾಚಾರಗಳ ಪ್ರಕಾರ ಬಹುಮತ ಸಾಬೀತುಪಡಿಸಲು 105 ಸದಸ್ಯರು ಸಾಕು. ಈಗಾಗಲೇ ಬಿಜೆಪಿಗೆ ಅಷ್ಟು ಸದಸ್ಯ ಬಲ ಇದೆ.

ADVERTISEMENT

ವಿಧಾನಸಭೆಯಲ್ಲಿಬಿಜೆಪಿಯ105, ಕಾಂಗ್ರೆಸ್‌ನ 63, ಜೆಡಿಎಸ್‌ನ 34ಸದಸ್ಯರಿದ್ದಾರೆ. ಓರ್ವ ಪಕ್ಷೇತರ ಶಾಸಕರಿದ್ದಾರೆ. ಸ್ಪೀಕರ್ ಅವರನ್ನು ಯಾವುದೇ ಪಕ್ಷದ ಪರ ಎಂದು ಗುರುತಿಸುವಂತಿಲ್ಲ.

ಶಾಸಕರನ್ನು ಅನರ್ಹಗೊಳಿಸಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಬೇಕಿದೆ. ನಂತರ ಮತ್ತೊಮ್ಮೆ ಬಿಜೆಪಿ ಬಹುಮತ ಸಾಬೀತುಪಡಿಸಬೇಕಾಗುತ್ತದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.