ADVERTISEMENT

ಮೋದಿ ಎಚ್ಚರಿಕೆಗೆ ಮಣಿದು ಪಾಕಿಸ್ತಾನ ಅಭಿನಂದನ್‍ರನ್ನು ಹಸ್ತಾಂತರಿಸಿದೆ: ಬಿಎಸ್‍ವೈ

ಪಿಟಿಐ
Published 1 ಮಾರ್ಚ್ 2019, 14:25 IST
Last Updated 1 ಮಾರ್ಚ್ 2019, 14:25 IST
   

ಬೆಂಗಳೂರು: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಧೈರ್ಯವನ್ನು ಶ್ಲಾಘಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ನರೇಂದ್ರ ಮೋದಿಯವರ ಎಚ್ಚರಿಕೆಗೆ ಮಣಿದು ಪಾಕಿಸ್ತಾನ ಅಭಿನಂದನ್‍ ಅವರ ಹಸ್ತಾಂತರ ಮಾಡಲು ಒಪ್ಪಿದೆ.ಅಭಿನಂದನ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಹಸ್ತಾಂತರಿಸದೇ ಇದ್ದರೆ ಅದಕ್ಕೆ ತಕ್ಕ ಬೆಲೆ ತೆರೆಬೇಕಾದೀತು ಎಂದು ಮೋದಿ ಎಚ್ಚರಿಕೆ ನೀಡಿದ್ದರು ಎಂದಿದ್ದಾರೆ ಯಡಿಯೂರಪ್ಪ.

ಶುಕ್ರವಾರ ಬಿಜೆಪಿಪ್ರಮುಖ್‍ರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಕರ್ನಾಟಕದಲ್ಲಿ 28 ಸೀಟುಗಳನ್ನು ಗೆಲ್ಲುವ ಮೂಲಕ ಲೋಕಸಭಾ ಚುನಾವಣೆಯಲ್ಲಿ 300 ಸೀಟು ಗೆಲ್ಲುವ ನರೇಂದ್ರ ಮೋದಿಯವರ ನಿರೀಕ್ಷೆಗಳನ್ನುಈಡೇರಿಸಲು ಶ್ರಮಿಸಿ ಎಂದು ರಾಜ್ಯದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300 ಸೀಟು ಗೆಲ್ಲಬೇಕಾದರೆ ಕರ್ನಾಟಕದಲ್ಲಿ ಬಿಜೆಪಿ ಎಲ್ಲ 28 ಸೀಟುಗಳನ್ನು ಗೆಲ್ಲಬೇಕಿದೆ. ಈ ಜವಾಬ್ದಾರಿ ನಮ್ಮೆಲ್ಲರದ್ದು. ಮೋದಿಯವರು ಸದಾ ಕಾರ್ಯ ನಿರತರಾಗಿರುವಂತೆ ಪಕ್ಷದ ಎಲ್ಲ ಕಾರ್ಯಕರ್ತರು ಕಾರ್ಯ ನಿರತರಾಗಬೇಕು.

ADVERTISEMENT

ಯಾವಾಗ ಬೇಕಾದರೂ ಚುನಾವಣಾ ದಿನಾಂಕ ಪ್ರಕಟವಾಗಬಹುದು ಎಂದ ಅವರು, ಕಳೆದ ನಾಲ್ಕೂವರೆ ವರ್ಷಗಳಲ್ಲಿ ನರೇಂದ್ರ ಮೋದಿ ಒಂದು ದಿನ ಕೂಡಾ ವಿಶ್ರಾಂತಿ ತೆಗೆದುಕೊಳ್ಳಲಿಲ್ಲ. ದೇಶ ಮತ್ತು ಪಕ್ಷವನ್ನು ಬಲಿಷ್ಠಗೊಳಿಸುವುದಕ್ಕಾಗಿ ಅವರು ಕಷ್ಟಪಟ್ಟು ದುಡಿಯುತ್ತಿದ್ದಾರೆ.ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದಿದ್ದಾರೆ.

ಇವನ್ನೂ ಓದಿ...
*ಅಭಿನಂದನ್ ಬಿಡುಗಡೆ ಮಾಡಲು ಪಾಕಿಸ್ತಾನ ವಿಳಂಬ ಮಾಡಿದ್ದು ಯಾಕೆ?
*ವಿಂಗ್ ಕಮಾಂಡರ್ ಅಭಿನಂದನ್‌ ಪಾಕ್ ಸೈನಿಕರ ವಶಕ್ಕೆ ಸಿಗುವ ಮುನ್ನಾ...
*ಸೇನೆಯ ಬಗ್ಗೆ ಗೌರವವಿದ್ದರೆ ಫೇಸ್‌ಬುಕ್‌ನಲ್ಲಿ ಈ 10 ನಿಯಮಗಳನ್ನು ಪಾಲಿಸಿ
*ಧೀರರ ಕುಟುಂಬ: ವಿಂಗ್ ಕಮಾಂಡರ್ ಅಭಿನಂದನ್ ಅವರ ಮೂರು ತಲೆಮಾರು ದೇಶಕ್ಕಾಗಿ ದುಡಿದಿದೆ
*ವಿಮಾನದಲ್ಲಿ ಅಭಿನಂದನ್‍ ಕುಟುಂಬಕ್ಕೆ ಎದ್ದು ನಿಂತು ಗೌರವ ಸೂಚಿಸಿದ ಪ್ರಯಾಣಿಕರು
*ಪಾಕ್‌ ಪ್ರಯಾಣಿಕರಿಗೆ ಆಹಾರ ವಿತರಿಸಿದ ಭಾರತದ ಪೊಲೀಸರು
*ವಾಘಾ- ಅಟ್ಟಾರಿ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್ ರದ್ದು ಮಾಡಿದ ಬಿಎಸ್‍ಎಫ್
*ಅಭಿನಂದನ್ ಕರೆತರಲು ವಿಮಾನ ಕಳಿಸಬೇಡಿ ಎಂದ ಪಾಕ್
*ವಿಂಗ್ ಕಮಾಂಡರ್ ಅಭಿನಂದನ್‌ ಸ್ವಾಗತಕ್ಕೆ ವಾಘಾ ಗಡಿಯಲ್ಲಿ ಸಿದ್ಧತೆ
*ಅಭಿನಂದನ್‌ ಕರೆತನ್ನಿ: ಕಾಳಜಿಯ ಕರೆ
*ಪಾಕಿಸ್ತಾನದ ವಶದಲ್ಲಿ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌? ವಿಡಿಯೊ ಬಿಡುಗಡೆ

*ಭಾರತ ವಾಯುಪಡೆ ಉರುಳಿಸಿದ ಪಾಕ್ ಯುದ್ಧವಿಮಾನದ ಮೊದಲ ಚಿತ್ರ ಬಹಿರಂಗ
*ಯಡಿಯೂರಪ್ಪ ಹೇಳಿಕೆಯನ್ನು ರಿಟ್ವೀಟ್ ಮಾಡಿ ವ್ಯಂಗ್ಯವಾಡಿದಪಾಕ್‌ ಪ್ರಧಾನಿಯ ಪಕ್ಷ​
*ಪೈಲಟ್‌ ಅಭಿನಂದನ್‌ ವಿಡಿಯೊ ಲಿಂಕ್ ತೆಗೆಯುವಂತೆ ಯುಟ್ಯೂಬ್‌ಗೆ ಐಟಿ ಸಚಿವಾಲಯ ಆಗ್ರಹ​
*ವಾಯುದಾಳಿಯು ಕರ್ನಾಟಕದಲ್ಲಿ 22 ಸ್ಥಾನಗಳನ್ನು ಗೆಲ್ಲಲು ನೆರವಾಗಲಿದೆ: ಯಡಿಯೂರಪ್ಪ​
*ನೀವು ನಿದ್ರೆ ಮಾಡ್ತೀರೋ ಇಲ್ವೋ; ಅಭಿನಂದನ್ ಅವರನ್ನು ಕರೆತನ್ನಿ: ನಟಿ ರಮ್ಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.