ADVERTISEMENT

90 ವಯಸ್ಸಿನ ಟಿಬೆಟಿಯನ್‌ ಧರ್ಮಗುರು ದಲೈ ಲಾಮಗೆ 'ಗ್ರ್ಯಾಮಿ ಪ್ರಶಸ್ತಿ' ಗೌರವ

ಪಿಟಿಐ
Published 2 ಫೆಬ್ರುವರಿ 2026, 7:21 IST
Last Updated 2 ಫೆಬ್ರುವರಿ 2026, 7:21 IST
<div class="paragraphs"><p>ದಲೈ ಲಾಮ</p></div>

ದಲೈ ಲಾಮ

   

(ಎಕ್ಸ್ ಚಿತ್ರ)

ಧರ್ಮಶಾಲಾ/ಲಾಸ್ ಏಂಜಲೀಸ್: ಟಿಬೆಟಿಯನ್‌ ಧರ್ಮಗುರು ದಲೈ ಲಾಮ ಅವರು ಇದೇ ಮೊದಲ ಬಾರಿಗೆ 'ಗ್ರ್ಯಾಮಿ ಪ್ರಶಸ್ತಿ' ಗೌರವಕ್ಕೆ ಭಾಜನರಾಗಿದ್ದಾರೆ. 'ಅತ್ಯುತ್ತಮ ಆಡಿಯೊ ಬುಕ್ ಪ್ರಸ್ತುತಿ'ಗಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ADVERTISEMENT

68ನೇ ಗ್ರ್ಯಾಮಿ ಪ್ರಶಸ್ತಿಯಲ್ಲಿ ದಲೈ ಲಾಮ ಅವರ 'ಮೆಡಿಟೇಷನ್ಸ್: ದಿ ರಿಫ್ಲೆಕ್ಷನ್ಸ್ ಆಫ್ ಹಿಸ್ ಹೋಲಿನೆಸ್ ದಿ ದಲೈ ಲಾಮ' ಎಂಬ ಆಡಿಯೊ ಬುಕ್‌ಗಾಗಿ ಪ್ರಶಸ್ತಿ ಸಂದಿದೆ.

ಪ್ರಶಸ್ತಿಗೆ ಅರ್ಹರಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸಿರುವ ದಲೈ ಲಾಮ, 'ಇದು ವೈಯಕ್ತಿಕ ಸಾಧನೆಯಲ್ಲ, ಜಾಗತಿಕ ಹೊಣೆಗಾರಿಕೆ ಹಾಗೂ ಸಹಾನುಭೂತಿಗೆ ಸಂದ ಮನ್ನಣೆ' ಎಂದು ಪ್ರತಿಕ್ರಿಯಿಸಿದ್ದಾರೆ.

'ಈ ಪ್ರಶಸ್ತಿಯನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ. ಶಾಂತಿ, ಸಹಾನುಭೂತಿ, ಪರಿಸರ ಬಗ್ಗೆ ಕಾಳಜಿ, ಮಾನವೀಯತೆಯ ಏಕತೆ ಮತ್ತು ಎಂಟು ಶತಕೋಟಿ ಜನರ ಯೋಗಕ್ಷೇಮ ಅತ್ಯಗತ್ಯ ಎಂದು ನಾನು ನಂಬಿಕೊಂಡಿದ್ದೇನೆ. ಈ ಸಂದೇಶವನ್ನು ಇನ್ನಷ್ಟು ಪಸರಿಸಲು ಗ್ರ್ಯಾಮಿ ಪ್ರಶಸ್ತಿ ಪ್ರೇರಣೆಯಾಗಲಿದೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.