ADVERTISEMENT

US-China Trade War | ಅಮೆರಿಕ ಸುಂಕದ ಅಂಕಿಯಾಟಕ್ಕೆ ಸೊಪ್ಪು ಹಾಕುವುದಿಲ್ಲ: ಚೀನಾ

ಏಜೆನ್ಸೀಸ್
Published 17 ಏಪ್ರಿಲ್ 2025, 1:54 IST
Last Updated 17 ಏಪ್ರಿಲ್ 2025, 1:54 IST
<div class="paragraphs"><p>ಅಮೆರಿಕ ಚೀನಾ ಸುಂಕ ಸಮರ</p></div>

ಅಮೆರಿಕ ಚೀನಾ ಸುಂಕ ಸಮರ

   

– ರಾಯಿಟರ್ಸ್ ಚಿತ್ರ

ಬೀಜಿಂಗ್: ಅಮೆರಿಕ ಸುಂಕದ ಅಂಕಿಯಾಟ ಮುಂದುವರಿಸಿದರೆ ಸೊಪ್ಪು ಹಾಕುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ.

ADVERTISEMENT

ಆ ಮೂಲಕ ಜಾಗತಿಕ ಎರಡು ದೈತ್ಯ ಆರ್ಥಿಕತೆಗಳ ವ್ಯಾಪಾರ ಯುದ್ಧ ಮತ್ತಷ್ಟು ಮತ್ತೊಂದು ಹಂತ ತಲುಪುವ ಸೂಚನೆ ಲಭಿಸಿದೆ.

ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ವಿಧಿಸುತ್ತಿದ್ದ ಸುಂಕವನ್ನು ಶೇ 245 ಏರಿಕೆ ಮಾಡಿದ ಬೆನ್ನಲ್ಲೇ ಚೀನಾದಿಂದ ಈ ಪ್ರತಿಕ್ರಿಯೆ ಬಂದಿದೆ.

ವ್ಯಾಪಾರ ಒಪ್ಪಂದಕ್ಕೆ ನಾವು ಸಿದ್ದವಿದ್ದು, ಚೀನಾವೇ ಮೊದಲ ಹೆಜ್ಜೆ ಇಡಬೇಕಿದೆ ಎಂದು ಅಮೆರಿಕ ಬುಧವಾರ ಹೇಳಿತ್ತು.

ಚೆಂಡು ಚೀನಾದ ಅಂಗಳದಲ್ಲಿದ್ದು, ಅವರು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ನಾವು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗಿಲ್ಲ. ಅಧ್ಯಕ್ಷ ಟ್ರಂಪ್ ಒಪ್ಪಂದಕ್ಕೆ ಮುಕ್ತರಾಗಿದ್ದಾರೆ ಎಂದು ಶ್ವೇತಭವನ ಬುಧವಾರ ಹೇಳಿತ್ತು.

ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ಬಳಿಕ ಎಲ್ಲಾ ರಾಷ್ಟ್ರಗಳಿಗೆ ಪ್ರತಿ ಸುಂಕ ಹೇರಿ ಆದೇಶಿಸಿದ್ದರು. ಆದರೆ ಚೀನಾ ಹೊರತುಪಡಿಸಿ ಉಳಿದ ದೇಶಗಳ ಮೇಲಿನ ಪ್ರತಿಸುಂಕ ಹೇರಿಕೆಗೆ 90 ದಿನಗಳ ತಡೆ ನೀಡಿದ್ದರು.

ಚೀನಾದಿಂದ ಆಮದಾಗುವ ಉತ್ಪನ್ನಗಳಿಗೆ ಅಮೆರಿಕ ಶೇ 145ರಷ್ಟು ಸುಂಕ ವಿಧಿಸಿರುವುದಕ್ಕೆ ಪ್ರತಿಯಾಗಿ ಅಮೆರಿಕದ ಆಮದು ಉತ್ಪನ್ನಗಳಿಗೆ ಚೀನಾ ಶೇ 125ರಷ್ಟು ಸುಂಕ ವಿಧಿಸಿತ್ತು. ಬುಧವಾರ ಅಮೆರಿಕ ಪ್ರತಿಸುಂಕವನ್ನು ಶೇ 245ಕ್ಕೆ ಏರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.