ADVERTISEMENT

ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನಲ್ಲಿ ಬಂದಿಳಿಯಲಿರುವ ಅಮೆರಿಕ ಮಿಲಿಟರಿ ವಿಮಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜನವರಿ 2026, 3:13 IST
Last Updated 20 ಜನವರಿ 2026, 3:13 IST
<div class="paragraphs"><p>ಅಮೆರಿಕ ಯುದ್ಧ ವಿಮಾನ</p></div>

ಅಮೆರಿಕ ಯುದ್ಧ ವಿಮಾನ

   

(ಪ್ರಾತಿನಿಧಿಕ ಚಿತ್ರ, ಕೃಪೆ:@NORADCommand)

ವಾಷಿಂಗ್ಟನ್: ದೀರ್ಘಕಾಲದ ಯೋಜಿತ ಚಟುವಟಿಕೆಗಳ ಭಾಗವಾಗಿ ಉತ್ತರ ಅಮೆರಿಕದ ಮಿಲಿಟರಿ ವಿಮಾನಗಳು ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನಲ್ಲಿ ಬಂದಿಳಿಯಲಿವೆ ಎಂದು ಅಮೆರಿಕ–ಕೆನಡಾ ಉತ್ತರ ಅಮೆರಿಕ ವಾಯು ರಕ್ಷಣಾ ಕಮಾಂಡ್‌ (ಎನ್‌ಒಆರ್‌ಎಡಿ) ತಿಳಿಸಿದೆ.

ADVERTISEMENT

ನಾರ್ತ್ ಅಮೆರಿಕ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ ಯುದ್ಧ ವಿಮಾನಗಳು ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನ ಪಿಟುಫಿಕ್ ನೆಲೆಯಲ್ಲಿ ಬಂದಿಳಿಯಲಿದೆ ಎಂದು ಅದು ಹೇಳಿದೆ.

ಈ ಚಟುವಟಿಕೆಗಳನ್ನು ಅಮೆರಿಕ, ಕೆನಡಾ ಹಾಗೂ ಕಿಂಗ್ಡಮ್ ಆಫ್ ಡೆನ್ಮಾರ್ಕ್‌ನೊಂದಿಗೆ ಸಂಯೋಜಿಸಲಾಗಿದೆ. ಈ ಕುರಿತು ಗ್ರೀನ್‌ಲ್ಯಾಂಡ್ ಸರ್ಕಾರಕ್ಕೂ ತಿಳಿಸಲಾಗಿದೆ ಎಂದು ಎನ್‌ಒಆರ್‌ಎಡಿ ಹೇಳಿದೆ.

ಸ್ವಾಯತ್ತ ಗ್ರೀನ್‌ಲ್ಯಾಂಡ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯ ಬೆನ್ನಲ್ಲೇ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.