'ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ'ಯೊಂದಿಗೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಹಾಗೂ ಭಾರತದ ನಾಯಕ ಶುಭಮನ್ ಗಿಲ್
ಕೃಪೆ: ರಾಯಿಟರ್ಸ್
ಲಂಡನ್: ಆತಿಥೇಯ ಇಂಗ್ಲೆಂಡ್ ವಿರುದ್ಧದ 'ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ' ಟೆಸ್ಟ್ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತ, ಕೈಜಾರಿದ್ದ ಗೆಲುವನ್ನು ಕೊನೇ ಕ್ಷಣದಲ್ಲಿ ಬಾಚಿಕೊಂಡಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 2–2 ಅಂತರದ ಸಮಬಲ ಸಾಧಿಸಿತು.
ಸಂಕ್ಷಿಪ್ತ ಸ್ಕೋರ್
ಮೊದಲ ಇನಿಂಗ್ಸ್
ಭಾರತ: 224 ರನ್ | ಇಂಗ್ಲೆಂಡ್: 247 ರನ್
ಎರಡನೇ ಇನಿಂಗ್ಸ್
ಭಾರತ: 396 ರನ್ | ಇಂಗ್ಲೆಂಡ್: 367 ರನ್
ಪಂದ್ಯ ಶ್ರೇಷ್ಠ: ಮೊಹಮ್ಮದ್ ಸಿರಾಜ್ (9 ವಿಕೆಟ್)
ಸರಣಿ ಶ್ರೇಷ್ಠ: ಶುಭಮನ್ ಗಿಲ್ (754 ರನ್), ಹ್ಯಾರಿ ಬ್ರೂಕ್ (481 ರನ್)
ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಶತಕ ಸಿಡಿಸಿದ ಸಂಭ್ರಮದಲ್ಲಿ ಯಶಸ್ವಿ ಜೈಸ್ವಾಲ್. ಅವರ ಆಟದ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ಗೆಲುವಿಗೆ 374 ರನ್ ಗುರಿ ನೀಡಿತ್ತು.
ಗುರಿ ಬೆನ್ನತ್ತಿದ ಇಂಗ್ಲೆಂಡ್ 367 ರನ್ ಗಳಿಸಿ ಆಲೌಟ್ ಆಯಿತು.
ಬೆನ್ ಡಕೆಟ್ ಅವರನ್ನು ಔಟ್ ಮಾಡಿ 'ಸೆಂಡ್‌ಅಪ್' ನೀಡಿದ ಆಕಾಶ್ ದೀಪ್
ಕಠಿಣ ಗುರಿ ಎದುರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಮತ್ತು ಜೋ ರೂಟ್
6 ರನ್ ಅಂತರದ ಜಯ ಸಾಧಿಸಿದ ಗಿಲ್ ಪಡೆ
ಅಭಿಮಾನಿಗಳತ್ತ ಕೈ ಬೀಸಿದ ಭಾರತ ತಂಡದ ಆಟಗಾರರು
ಪಂದ್ಯ ವೀಕ್ಷಿಸಲು ಬಂದಿದ್ದ ಕ್ರೀಡಾಭಿಮಾನಿಗಳು
ಟೀಂ ಇಂಡಿಯಾ ಗೆಲುವಿಗೆ ಕಾರಣರಾದ ಮೊಹಮ್ಮದ್ ಸಿರಾಜ್, 9 ವಿಕೆಟ್ ಪಡೆಯುವ ಮೂಲಕ 'ಪಂದ್ಯಶ್ರೇಷ್ಠ' ಎನಿಸಿದರು.
'ಸರಣಿ ಶ್ರೇಷ್ಠ' ಪ್ರಶಸ್ತಿ ಪಡೆದ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್
ಕ್ರೀಡಾಂಗಣದಲ್ಲಿ ಭಾರತ ತಂಡದ ಅಭಿಮಾನಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.