
ಕ್ರೀಡಾಂಗಣಕ್ಕಿಳಿದ ಸಿಎಸ್‌ಕೆ ಆಟಗಾರರು
ಪಿಟಿಐ ಚಿತ್ರ
ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಪ್ರಭಾವಶಾಲಿ ತಂಡಗಳಲ್ಲಿ ಒಂದಾಗಿರುವ, 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅಳೆದು ತೂಗಿ ಭವಿಷ್ಯದ ದೃಷ್ಟಿಯಿಂದ ಸಮತೋಲನ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ.
ಐಪಿಎಲ್ ಮಿನಿ ಹರಾಜಿಗೂ ಮುನ್ನ ನೇರ ವಹಿವಾಟಿನ ಮೂಲಕ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಿರುವ ಸಿಎಸ್‌ಕೆ ಮಿನಿ ಹರಾಜಿನಲ್ಲಿ ಯುವ ಆಟಗಾರರಾದ ಪ್ರಶಾಂತ್ ವೀರ್ ಹಾಗೂ ಕಾರ್ತಿಕ್ ಶರ್ಮಾ ಅವರಿಗೆ ತಲಾ ₹14.20 ಕೋಟಿ ನೀಡಿ ಖರೀದಿಸಿದೆ.
ಈಗಾಗಲೇ ಜಡೇಜಾ ಅವರನ್ನು ರಾಜಸ್ಥಾನ ರಾಯಲ್ಸ್‌ಗೆ ಬಿಟ್ಟುಕೊಟ್ಟಿರುವ ಸಿಎಸ್‌ಕೆ ಅವರ ಜಾಗಕ್ಕೆ ಯುವ ಆಲ್‌ರೌಂಡರ್ ಪ್ರಶಾಂಂತ್ ವೀರ್ ಅವರನ್ನು ಆಯ್ಕೆ ಮಾಡಿದೆ. ಇನ್ನೂ ಎಂ.ಎಸ್. ಧೊನಿಯವರಿಗೆ ಕೂಡ ವಯಸ್ಸಾಗಿದ್ದು, ಅವರ ಸ್ಥಾನ ತುಂಬಲು ಯುವ ವಿಕೆಟ್ ಕೀಪರ್ ಬ್ಯಾಟರ್ ಕಾರ್ತಿಕ್ ಶರ್ಮಾರನ್ನು ಖರೀದಿಸಿದೆ.
ಮಿನಿ ಹರಾಜಿನಲ್ಲಿ ಖರೀದಿಸಿದ ಆಟಗಾರರು
ಪ್ರಶಾಂತ್ ವೀರ್ (ಭಾರತ, ಆಲ್-ರೌಂಡರ್) - ₹14.20 ಕೋಟಿ
ಕಾರ್ತಿಕ್ ಶರ್ಮಾ (ಭಾರತ, ಆಲ್-ರೌಂಡರ್) - ₹14.20 ಕೋಟಿ
ಅಕೀಲ್ ಹೊಸೈನ್ (ವೆಸ್ಟ್ ಇಂಡೀಸ್, ಬೌಲರ್) - ₹. 2 ಕೋಟಿ
ಮ್ಯಾಥ್ಯೂ ಶಾರ್ಟ್ (ಆಸ್ಟ್ರೇಲಿಯಾ, ಆಲ್-ರೌಂಡರ್) -₹1.50 ಕೋಟಿ
ಅಮನ್ ಖಾನ್ (ಭಾರತ, ಆಲ್-ರೌಂಡರ್) - ₹ 40 ಲಕ್ಷ
ಸರ್ಫರಾಜ್ ಖಾನ್ (ಭಾರತ, ಬ್ಯಾಟರ್) - ₹75 ಲಕ್ಷ
ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್, ಬೌಲರ್) - ₹2 ಕೋಟಿ
ಋತುರಾಜ್ ಗಾಯಕ್ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂ.ಎಸ್. ಧೋನಿ, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮೀ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹಮದ್, ಖಲೀಲ್ ಅಹಮದ್, ಅನ್ಶುಲ್ ಕಾಂಬೋಜ್, ಗುರ್ಜನ್‌ಪೀತ್, ಶ್ರೇಯಸ್ ಗೋಪಾಲ್, ಮುಖೇಶ್ ಚೌದರಿ, ನಾಥನ್ ಎಲ್ಲಿಸ್, ಸಂಜು ಸ್ಯಾಮ್ಸನ್ (ಆರ್‌ಆರ್‌ನಿಂದ ಖರೀದಿ), ಕಾರ್ತಿಕ್ ಶರ್ಮಾ, ಪ್ರಶಾಂತ್ ವೀರ್, ರಾಹುಲ್ ಚಾಹರ್, ಅಕೇಲ್ ಹೊಸೈನ್, ಮ್ಯಾಟ್ ಹೆನ್ರಿ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಜ್ ಖಾನ್, ಝಕರಿ ಫೋಲ್ಕ್ಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.