ಬಸ್‌ಪ್ರೀತ್ ಬೂಮ್ರಾ
ಪಿಟಿಐ ಚಿತ್ರ
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್–ಗವಾಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿರುವ ಭಾರತದ ಜಸ್‌ಪ್ರೀತ್ ಬೂಮ್ರಾ, ಒಂದೇ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಟೂರ್ನಿಯಲ್ಲಿ ಒಟ್ಟು 151.2 ಓವರ್ ಬೌಲಿಂಗ್ ಮಾಡಿರುವ ಅವರು, 418 ರನ್ ಬಿಟ್ಟುಕೊಟ್ಟಿದ್ದರೂ, 13.06ರ ಸರಾಸರಿಯಲ್ಲಿ ವಿಕೆಟ್ ಕಬಳಿಸಿದ್ದಾರೆ. ಎರಡು ಬಾರಿ 4 ವಿಕೆಟ್ ಮತ್ತು ಮೂರು ಸಲ ಐದು ವಿಕೆಟ್ ಗೊಂಚಲು ಸಾಧನೆ ಮಾಡಿರುವ ಅವರು ಒಟ್ಟು 32 ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ.
ಒಂದೇ ಆವೃತ್ತಿಯ ಬಿಜಿಟಿಯಲ್ಲಿ ಹೆಚ್ಚು ವಿಕೆಟ್ ಪಡೆದ ಐವರು ಬೌಲರ್‌ಗಳ ಪಟ್ಟಿ ಇಲ್ಲಿದೆ...
ಬೆನ್ ಹಿಲ್ಫೆನ್ಹಾಸ್ (ಆಸ್ಟ್ರೇಲಿಯಾ): 2011–12ರಲ್ಲಿ 27 ವಿಕೆಟ್
ಅನಿಲ್ ಕುಂಬ್ಳೆ (ಭಾರತ): 2004ರಲ್ಲಿ 27 ವಿಕೆಟ್
ರವಿಚಂದ್ರನ್ ಅಶ್ವಿನ್ (ಭಾರತ): 2013ರಲ್ಲಿ 29 ವಿಕೆಟ್
ಹರ್ಭಜನ್ ಸಿಂಗ್ (ಭಾರತ): 2001ರಲ್ಲಿ 31 ವಿಕೆಟ್
ಬಸ್‌ಪ್ರೀತ್ ಬೂಮ್ರಾ (ಭಾರತ): 2024–25ರಲ್ಲಿ 32 ವಿಕೆಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.