ಪ್ರಾತಿನಿಧಿಕ ಚಿತ್ರ
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಣ ಐಪಿಎಲ್ ಫೈನಲ್ ಪಂದ್ಯದ ವೀಕ್ಷಣೆಯು ಡಿಜಿಟಲ್ ವೇದಿಕೆಯಲ್ಲಿ ಹೊಸ ದಾಖಲೆ ಬರೆದಿದ್ದು, ಜಿಯೊ ಹಾಟ್‌ಸ್ಟಾರ್‌ನಲ್ಲಿ ಸುಮಾರು 67.8 ಕೋಟಿಗೂ ಹೆಚ್ಚು ವೀಕ್ಷಣೆಯಾಗಿದೆ ಎಂದು ವರದಿಯಾಗಿದೆ.
ಇದು ಈ ವರ್ಷ ಫೆಬ್ರವರಿಯಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ–ಪಾಕಿಸ್ತಾನ ನಡುವಣ ಪಂದ್ಯದ ವೀಕ್ಷಣೆಯ ದಾಖಲೆಯನ್ನು ಮುರಿದಿದೆ. ಚಾಂಪಿಯನ್ಸ್ ಟ್ರೋಫಿ 60 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿತ್ತು.
ಟಾಸ್ ಸೋತ ಆರ್‌ಸಿಬಿ ಬ್ಯಾಟಿಂಗ್ ಆರಂಭಿಸಿದಾಗ ಡಿಜಿಟಲ್ ವೇದಿಕೆಯಲ್ಲಿ 4.3 ಕೋಟಿ ವೀಕ್ಷಣೆ ದಾಖಲಾಗಿದ್ದು, ಫಿಲ್ ಸಾಲ್ಟ್ ಸಿಕ್ಸರ್ ಚಚ್ಚುತ್ತಿದ್ದಂತೆ ವೀಕ್ಷಣೆಯ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. 11 ನೇ ಓವರ್‌ನ ಹೊತ್ತಿಗೆ, ವೀಕ್ಷಣೆಯು 11 ಕೋಟಿಗೂ ಹೆಚ್ಚು ತಲುಪಿತ್ತು.
ವಿರಾಟ್ ಕೊಹ್ಲಿ ಔಟ್ ಆಗುವ ವೇಳೆ ವೀಕ್ಷಣೆಯು 26.5 ಕೋಟಿ ತಲುಪಿದ್ದು, ಆರ್‌ಸಿಬಿ ಇನ್ನಿಂಗ್ಸ್ ಅಂತ್ಯದ ವೇಳೆಗೆ ವೀಕ್ಷಣೆಯ ಸಂಖ್ಯೆ 35 ಕೋಟಿ ತಲುಪಿತ್ತು.
ಪಂಜಾಬ್ ಇನ್ನಿಂಗ್ಸ್ ಪ್ರಾರಂಭಿಸುವ ವೇಳೆ ವೀಕ್ಷಣೆಯ ಸಂಖ್ಯೆ 37.2 ಕೋಟಿ ಇದ್ದು, ಪ್ರಭಸಿಮ್ರನ್ ಔಟ್ ಆಗುವ ವೇಳೆಗೆ ವೀಕ್ಷಣೆ ಸಂಖ್ಯೆ 50 ಕೋಟಿಗೆ ಹತ್ತಿರವಾಗಿತ್ತು.
14ನೇ ಓವರ್ ನಂತರ ವೀಕ್ಷಣೆಯ ಸಂಖ್ಯೆ ಒಮ್ಮೆಲೆ ಏರಿಕೆಯಾಗಿದ್ದು, ಸುಮಾರು 55 ಕೋಟಿ ವೀಕ್ಷಣೆಯಾಗಿದೆ. ಆರ್‌ಸಿಬಿ ಕಪ್ ಗೆಲ್ಲುವ ಭರವಸೆಯು ಈ ಸಂಖ್ಯೆಯನ್ನು ಇಮ್ಮಡಿಗೊಳಿಸಿದ್ದು, ಸುಮಾರು 63 ಕೋಟಿ ತಲುಪಿತ್ತು.
ಪಂದ್ಯದ ಅಂತ್ಯದ ವೇಳೆ ವೀಕ್ಷಣೆಯ ಸಂಖ್ಯೆ 67.8 ಕೋಟಿ ದಾಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.