ADVERTISEMENT

Test | ಭಾರತ ಪರ ಹೆಚ್ಚು ಸಿಕ್ಸ್: ಪಂತ್ ದಾಖಲೆ, ಟಾಪ್ 5 ಪಟ್ಟಿಯಲ್ಲಿ ಯಾರ್ಯಾರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜುಲೈ 2025, 16:14 IST
Last Updated 24 ಜುಲೈ 2025, 16:14 IST
<div class="paragraphs"><p>ರಿಷಭ್‌ ಪಂತ್‌</p></div>

ರಿಷಭ್‌ ಪಂತ್‌

   

ಪಿಟಿಐ ಚಿತ್ರ

ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ 4ನೇ ಪಂದ್ಯದಲ್ಲಿ ಅಮೋಘ ಅರ್ಧಶತಕ ಬಾರಿಸಿದ ಭಾರತದ ರಿಷಭ್‌ ಪಂತ್‌, ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ದೀರ್ಘ ಮಾದರಿಯಲ್ಲಿ ಟೀಂ ಇಂಡಿಯಾ ಪರ ಹೆಚ್ಚು ಸಿಕ್ಸ್‌ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 'ಡ್ಯಾಶಿಂಗ್‌ ಓಪನರ್‌' ಖ್ಯಾತಿಯ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ADVERTISEMENT

ಈ ಇಬ್ಬರೂ ತಲಾ 90 ಬಾರಿ ಚೆಂಡನ್ನು ಬೌಂಡರಿಯಾಚೆಗೆ ಬಾರಿಸಿದ್ದಾರೆ. ಇದಕ್ಕಾಗಿ ಸೆಹ್ವಾಗ್‌ 178 ಇನಿಂಗ್ಸ್‌ ತೆಗೆದುಕೊಂಡರೆ, ಪಂತ್‌ಗೆ ಕೇವಲ 82 ಇನಿಂಗ್ಸ್‌ ಸಾಕಾಗಿದೆ.

ಒಟ್ಟಾರೆಯಾಗಿ ಈ ಮಾದರಿಯಲ್ಲಿ ಅತಿಹೆಚ್ಚು ಸಿಕ್ಸ್‌ ಬಾರಿಸಿದ ದಾಖಲೆ ಇರುವುದು ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್ ಹೆಸರಲ್ಲಿ. ಅವರು 115 ಪಂದ್ಯಗಳ 205 ಇನಿಂಗ್ಸ್‌ಗಳಲ್ಲಿ 133 ಸಿಕ್ಸ್‌ ಸಿಡಿಸಿದ್ದಾರೆ. ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಬ್ರೆಂಡನ್‌ ಮೆಕಲಂ (107), ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯಡಂ ಗಿಲ್‌ಕ್ರಿಸ್ಟ್‌ (100) ನಂತರದ ಸ್ಥಾನಗಳಲ್ಲಿ ಇದ್ದಾರೆ. ಸದ್ಯ ಈ ಮೂವರಷ್ಟೇ ಟೆಸ್ಟ್‌ನಲ್ಲಿ ನೂರಕ್ಕಿಂತ ಹೆಚ್ಚು ಸಿಕ್ಸ್‌ ಸಿಡಿಸಿದವರು.

ಭಾರತ ಪರ ಹೆಚ್ಚು ಸಿಕ್ಸ್‌ ಸಿಡಿಸಿದ ಅಗ್ರ ಐವರು ಬ್ಯಾಟರ್‌ಗಳು ಯಾರು ಇಲ್ಲಿ ನೋಡೋಣ..

5. ರವೀಂದ್ರ ಜಡೇಜ (84 ಪಂದ್ಯಗಳ 125 ಇನಿಂಗ್ಸ್‌ಗಳಲ್ಲಿ 74 ಸಿಕ್ಸ್‌)

4. ಎಂ.ಎಸ್. ಧೋನಿ (90 ಪಂದ್ಯಗಳ 144 ಇನಿಂಗ್ಸ್‌ಗಳಲ್ಲಿ 78 ಸಿಕ್ಸ್‌)

3. ರೋಹಿತ್‌ ಶರ್ಮಾ (67 ಪಂದ್ಯಗಳ 116 ಇನಿಂಗ್ಸ್‌ಗಳಲ್ಲಿ 88 ಸಿಕ್ಸ್‌)

2. ವೀರೇಂದ್ರ ಸೆಹ್ವಾಗ್‌ (103 ಪಂದ್ಯಗಳ 178 ಇನಿಂಗ್ಸ್‌ಗಳಲ್ಲಿ 90 ಸಿಕ್ಸ್‌)

1. ರಿಷಭ್‌ ಪಂತ್‌ (47 ಪಂದ್ಯಗಳ 82 ಇನಿಂಗ್ಸ್‌ಗಳಲ್ಲಿ 90 ಸಿಕ್ಸ್‌) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.