ADVERTISEMENT

T20 WC | ಭಾರತ–ಜಿಂಬಾಬ್ವೆ ಪಂದ್ಯದಲ್ಲಿ ಪತನವಾದ 3 ದಾಖಲೆಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2022, 7:42 IST
Last Updated 7 ನವೆಂಬರ್ 2022, 7:42 IST
   

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ–20 ವಿಶ್ವಕ‍ಪ್‌ನ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಭರ್ಜರಿ 71 ರನ್‌ಗಳ ಜಯ ಗಳಿಸಿದೆ. ಆ ಮೂಲಕ ಗ್ರೂಪ್‌ 2 ನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಕೆ.ಎಲ್‌ ರಾಹುಲ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಭರ್ಜರಿ ಅರ್ಧ ಶತಕ ಗಳಿಸಿ ಗೆಲುವಿನ ರೂವಾರಿಗಳಾಗಿ ಹೊರ ಹೊಮ್ಮಿದ್ದರು.

ಇನ್ನು ಈ ಪಂದ್ಯ ಮೂರು ವಿಶೇಷ ದಾಖಲೆಗೆ ಸಾಕ್ಷಿಯಾಯ್ತು.

ADVERTISEMENT

100 ಟಿ–20 ಪಂದ್ಯ ಗೆಲುವಿನಲ್ಲಿ ಭಾಗಿಯಾದ ಮೊದಲ ಕ್ರಿಕೆಟಿಗ ರೋಹಿತ್ ಶರ್ಮಾ

ಜಿಂಬಾಬ್ವೆ ವಿರುದ್ಧದ ಪ‍ಂದ್ಯದಲ್ಲಿ ರೋಹಿತ್ ಶರ್ಮಾ ವಿಫಲರಾದರೂ, ಎರಡು ವಿಶೇಷ ದಾಖಲೆಗೆ ಅವರು ಪಾತ್ರರಾದರು.

ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ, ತಂಡದ 100 ಗೆಲುವುಗಳಲ್ಲಿ ಪಾಲು ಪ‍ಡೆದ ಭಾರತ ಏಕೈಕ ಭಾರತೀಯ ಆಟಗಾರ ಎನ್ನುವ ದಾಖಲೆ ಅವರದ್ದಾಗಿದೆ. ಒಟ್ಟು 147 ‌ಟಿ–20ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಎರಡನೇ ಸ್ಥಾನದಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ಶೋಯಬ್ ಮಲಿಕ್ ಇದ್ದು, ಅವರು ಪಾಕಿಸ್ತಾನ ತಂಡದ 87 ಟಿ–20 ಪಂದ್ಯಗಳ ಗೆಲುವಿನಲ್ಲಿ ಪಾಲು ಪ‍ಡೆದಿದ್ದಾರೆ.

ಇನ್ನು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ ವರ್ಷವೊಂದರಲ್ಲಿ ಅತೀ ಹೆಚ್ಚು ಟಿ–20 ಅಂತರರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ನಾಯಕ ಎನ್ನುವ ಹೆಗ್ಗಳಿಕೆ ರೋಹಿತ್ ಶರ್ಮಾ ಪಾಲಾಗಿದೆ. ಈ ವರ್ಷದಲ್ಲಿ (2022) ನಾಯಕನಾಗಿ ಅವರು ಒಟ್ಟು 21 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. 20 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಪಾಕಿಸ್ತಾನ ನಾಯಕ ಬಾಬರ್ ಅಜಂ ಅವರ ದಾಖಲೆ ಪತನವಾಗಿದೆ.

ವಿಶಿಷ್ಟ ದಾಖಲೆ ಬರೆದ ಭುವನೇಶ್ವರ್ ಕುಮಾರ್‌

ಸದ್ಯ ನಡೆಯುತ್ತಿರುವ ವಿಶ್ವಕಪ್‌ ಕೂಟದಲ್ಲಿ ಗಮ‌ನಾರ್ಹ ಪ್ರದರ್ಶನ ನೀಡುತ್ತಿರುವಬೌಲರ್‌ ಭುವನೇಶ್ವರ್ ಕುಮಾರ್‌ 5.5ರ ಸರಾಸರಿಯಲ್ಲಿ ಬೌಲಿಂಗ್‌ ಮಾಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೊದಲ ಬಾಲ್‌ನಲ್ಲಿಯೇ ವಿಕೆಟ್‌ ಕಿತ್ತು ಗೆಲುವಿಗೆ ಮುನ್ನುಡಿ ಬರೆದಿದ್ದರು.

ಈ ಪಂದ್ಯದಲ್ಲಿ ಮೂರು ಓವರ್ ಮಾಡಿದ್ದ ಭುವನೇಶ್ವರ್‌ ಕುಮಾರ್‌ 11 ರನ್‌ ನೀಡಿ ಒಂದು ವಿಕೆಟ್‌ ಪ‍ಡೆದುಕೊಂಡಿದ್ದರು. ಇದರಲ್ಲಿ ಒಂದು ಮೇಡನ್‌ ಓವರ್‌ ಕೂಡ ಇತ್ತು. ಆ ಮೂಲಕ ಅಂತರರಾಷ್ಟ್ರೀಯ ಟಿ–20 ಮಾದರಿಯಲ್ಲಿಅತೀ ಹೆಚ್ಚು ಅಂದರೆ 10 ಮೇಡನ್‌ ಓವರ್‌ ಮಾಡಿದ ಮೊದಲ ಬೌಲರ್‌ ಎನ್ನುವ ದಾಖಲೆ ಅವರದ್ದಾಯ್ತು. 9 ಮೇಡನ್‌ ಓ‌ವರ್‌ ಮಾಡಿದ್ದ ಜಸ್ಪ್ರಿತ್‌ ಬುಮ್ರಾ ದಾಖಲೆ ಪತನವಾಯ್ತು.

ಸೂರ್ಯಕುಮಾರ್ ರನ್‌ ಮಳೆ ದಾಖಲೆ

ವಿಶ್ವಕಪ್‌ ಟೂರ್ನಿಯಲ್ಲಿ ಸ್ಫೋಟಕ ಪ್ರದರ್ಶನ ನೀಡುತ್ತಿರುವ ಟಿ–20 ಕ್ರಿಕೆಟ್‌ನ ಅಗ್ರ ಬ್ಯಾಟರ್ಸೂರ್ಯಕುಮಾರ್‌ ಯಾದವ್‌ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಟಿ–20 ಪಂದ್ಯದಲ್ಲಿ 1000 ರನ್‌ ಪೂರೈಸಿದ ಏಕೈಕ ಭಾರತೀಯ ಆಟಗಾರ ಎನ್ನುವ ವಿಶೇಷ ದಾಖಲೆ ಬರೆದರು.

ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದ ಸೂರ್ಯಕುಮಾರ್‌ ಯಾದವ್‌ ಕೇವಲ 25 ಎಸೆತ‌ಗಳಲ್ಲಿ 61 ರನ್‌ ಸಿಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.