
ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ
ಮುಂಬೈ: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಐಸಿಸಿ ಏಕದಿನ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತ ತಂಡ 52 ರನ್‌ಗಳ ರೋಚಕ ಜಯ ಸಾಧಿಸಿ, ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿದೆ. ಪಂದ್ಯದ ಪ್ರತಿ ಕ್ಷಣವೂ ರೋಚಕತೆಯಿಂದ ಕೂಡಿದ್ದು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿತು.
ಪಂದ್ಯದ ಪ್ರಮುಖ ಘಟ್ಟಗಳ ದೃಶ್ಯ ವೈಭವ ಹೀಗಿದೆ...
ಫೈನಲ್ ಪಂದ್ಯದ ಪ್ರಮುಖ ಘಟನಾವಳಿಗಳ ಹೈಲೈಟ್ಸ್
ವಿಶ್ವಕಪ್‌ಗೆ ಮುತ್ತಿಕ್ಕಿದ ನಾಯಕಿ ಹರ್ಮನ್‌ಪ್ರೀತ್ ಕೌರ್ ಓಡಿ ಪಡೆದ ಕ್ಯಾಚ್
ಭಾರತ ವಿರುದ್ಧ ಆಲ್‌ಔಟ್ ಆದ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿಕೆಟ್‌ಗಳು ಉರುಳಿದ ಕ್ಷಣ
ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ 87 ರನ್ ಹಾಗೂ 36 ರನ್ ನೀಡಿ 2 ವಿಕೆಟ್ ಪಡೆದು ಉತ್ತಮ ಪ್ರದರ್ಶನ ತೋರಿದ ಶಫಾಲಿ ವರ್ಮಾ ಅವರ ಬಿರುಸಿನ ಆಟದ ಮನಮೋಹಕ ಕ್ಷಣಗಳು
ದಕ್ಷಿಣ ಆಫ್ರಿಕಾ ತಂಡವನ್ನು 246 ರನ್‌ಗಳಿಗೆ ಆಲ್‌ಔಟ್ ಮಾಡುವಲ್ಲಿ 39 ರನ್ ನೀಡಿ 5 ವಿಕೆಟ್ ಕಬಳಿಸಿದ ದೀಪ್ತಿ ಶರ್ಮಾ ಅವರ ಆಟದ ಅದ್ಭುತ ರೋಚಕ ಕ್ಷಣಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.