
2026ನೇ ವರ್ಷ ಕ್ರೀಡಾ ದೃಷ್ಟಿಯಿಂದ ಅತ್ಯಂತ ಮಹತ್ವದ ವರ್ಷವಾಗಿದೆ. ಈ ವರ್ಷ ಅನೇಕ ಕ್ರೀಡಾಕೂಟಗಳು ನಿಮ್ಮನ್ನು ರಂಜಿಸಲು ಸಿದ್ಧಗೊಂಡಿವೆ. ಅವುಗಳ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. ಭಾರತ ಹಾಗೂ ಶ್ರೀಲಂಕಾದಲ್ಲಿ T20 ವಿಶ್ವಕಪ್, ಯುಎಸ್‌ಎ, ಮೆಕ್ಸಿಕೊ ಹಾಗೂ ಕೆನಡಾದಲ್ಲಿ ನಡೆಯಲಿರುವ FIFA ವಿಶ್ವಕಪ್ 2026ರ ಪ್ರಮುಖ ಆಕರ್ಷಣೆಯಾಗಿವೆ.
ಕ್ರಿಕೆಟ್:
ಕ್ರಿಕೆಟ್ ಭಾರತೀಯರ ನೆಚ್ಚಿನ ಕ್ರೀಡೆಗಳಲ್ಲಿ ಒಂದಾಗಿದೆ. ಜನವರಿ 9ರಿಂದ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಬಳಿಕ ಜನವರಿ 11ರಿಂದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಏಕದಿನ ಮತ್ತು ಟಿ20 ಪಂದ್ಯಗಳು, ಜನವರಿ 15ರಿಂದ 19 ವರ್ಷದೊಳಗಿನವರ ಐಸಿಸಿ ಏಕದಿನ ವಿಶ್ವಕಪ್, ಫ್ರಬ್ರುವರಿ ಹಾಗೂ ಮಾರ್ಚ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್, ಮಾರ್ಷ್ ಹಾಗೂ ಮೇ ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯಲಿದೆ.
2026ರ ಜೂನ್‌ನಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಇದಾದ ಬಳಿಕ ಭಾರತ ತಂಡ ಜುಲೈಯಲ್ಲಿ ಇಂಗ್ಲೆಂಡ್ ಪ್ರವಾಸ, ಆಗಸ್ಟ್‌ನಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಪ್ರವಾಸ, ಅಕ್ಟೋಬರ್-ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ.
ಫುಟ್ಬಾಲ್:
FIFA ವಿಶ್ವಕಪ್ 2026 (ಜೂನ್ 12-ಜುಲೈ 26)
ಟೆನಿಸ್:
ಆಸ್ಟ್ರೇಲಿಯನ್ ಓಪನ್ (ಜನವರಿ 12ರಿಂದ ಫೆಬ್ರುವರಿ1), ಫ್ರೆಂಚ್ ಓಪನ್ (ಮೇ-ಜೂನ್), ವಿಂಬಲ್ಡನ್ (ಜೂನ್-ಜುಲೈ), ಯುಎಸ್ ಓಪನ್ (ಆಗಸ್ಟ್-ಸೆಪ್ಟೆಂಬರ್) ಮತ್ತು ಎಟಿಪಿ ಫೈನಲ್ಸ್ 2026 (ನವೆಂಬರ್)
ಅಥ್ಲೆಟಿಕ್ಸ್:
ದೋಹಾ ಡೈಮಂಡ್ ಲೀಗ್ (ಮೇ)
ಬ್ಯಾಡ್ಮಿಂಟನ್:
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ (ಜುಲೈ)
ಹಾಕಿ:
ಎಫ್‌ಐಎಚ್ ಹಾಕಿ ವಿಶ್ವಕಪ್ (ಆಗಸ್ಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.