
ನವದೆಹಲಿ: ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಭಾನುವಾರ ನಡೆದ ಮಿನಿ ಕ್ವಾಲಿಫೈಯರ್ ಪಂದ್ಯದಲ್ಲಿ ತೆಲುಗು ಟೈಟನ್ಸ್ ಎದುರು ಮಣಿಯಿತು.
ತ್ಯಾಗರಾಜ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೈಟನ್ಸ್ ತಂಡವು 37–32ರಿಂದ ಬುಲ್ಸ್ ಬಳಗವನ್ನು ಮಣಿಸಿತು. ಬೆಂಗಳೂರು ತಂಡವು ಸೋಮವಾರ ಎಲಿಮಿನೇಟರ್ (2) ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ಎದುರು ಸೆಣಸಲಿದೆ. ಒಂದೊಮ್ಮೆ ಆ ಪಂದ್ಯದಲ್ಲಿ ಸೋತರೆ ಟೂರ್ನಿಯಿಂದ ಹೊರಬೀಳಲಿದೆ.
ಅಂಕಪಟ್ಟಿಯಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದ್ದ ಬುಲ್ಸ್ ಹಾಗೂ ಟೈಟನ್ಸ್ ತಂಡಗಳು ಮಿನಿ ಕ್ವಾಲಿಫೈಯರ್ ನಲ್ಲಿ ಮುಖಾಮುಖಿಯಾದವು.
ಬುಲ್ಸ್ ತಂಡದ ವಿಜಯ್ ಮಲೀಕ್ 10 ಹಾಗೂ ಭರತ್ ಅವರು 12 ಅಂಕ ಗಳಿಸಿ ತಮ್ಮ ತಂಡದ ಗೆಲುವಿಗೆ ಕಾರಣರಾದರು.
ಬೆಂಗಳೂರು ತಂಡವೂ ದಿಟ್ಟ ಹೋರಾಟ ನಡೆಸಿತು. ಆಲ್‌ರೌಂಡರ್ ಅಲಿರೇಜಾ ಮಿರ್ಝಾನ್ 11 ಹಾಗೂ ಆಶಿಶ್ ಮಲಿಕ್ 5 ಅಂಕ ಗಳಿಸಿದರು.
ಪಂದ್ಯದ ಮೊದಲಾರ್ಧದಲ್ಲಿ ಬೆಂಗಳೂರು ತಂಡವು 14–16ರಿಂದ ಹಿನ್ನಡೆಯಲ್ಲಿತ್ತು. ಟೈಟನ್ಸ್ ತಂಡವು ವಿರಾಮದ ನಂತರವೂ ತನ್ನ ಹಿಡಿತ ಸಡಿಲಿಸಲಿಲ್ಲ. ಟೈಟನ್ಸ್ ಈ ಅವಧಿಯಲ್ಲಿ 21–18 ಮುನ್ನಡೆ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.