ADVERTISEMENT

Google | ದೇಶದಲ್ಲೇ ಅತಿ ದೊಡ್ಡ ಗೂಗಲ್ ಕ್ಯಾಂಪಸ್ ಬೆಂಗಳೂರಿನಲ್ಲಿ ಕಾರ್ಯಾರಂಭ

ರೋಹಿತ್‌ ಕೆವಿಎನ್‌
Published 19 ಫೆಬ್ರುವರಿ 2025, 11:21 IST
Last Updated 19 ಫೆಬ್ರುವರಿ 2025, 11:21 IST
<div class="paragraphs"><p>ಬೆಂಗಳೂರಿನ ಗೂಗಲ್ ಅನಂತ ಕ್ಯಾಂಪಸ್</p></div>

ಬೆಂಗಳೂರಿನ ಗೂಗಲ್ ಅನಂತ ಕ್ಯಾಂಪಸ್

   

ಚಿತ್ರ ಕೃಪೆ: ರೋಹಿತ್ ಕೆವಿಎನ್

ಬೆಂಗಳೂರು: ಸರ್ಚ್ ಎಂಜಿನ್ ದೈತ್ಯ ಗೂಗಲ್ ಇಂಡಿಯಾ, ದೇಶದಲ್ಲೇ ಅತಿ ದೊಡ್ಡ ಕ್ಯಾಂಪಸ್ ಅನ್ನು ಬೆಂಗಳೂರಿನಲ್ಲಿ ಆರಂಭಿಸಿದೆ.

ADVERTISEMENT

ಕಂಪನಿಯ ಅತಿ ದೊಡ್ಡ ಕಚೇರಿಗಳಲ್ಲಿ 'ಗೂಗಲ್ ಅನಂತ' ಒಂದಾಗಿದೆ ಎಂದು ಕಂಪನಿ ಹೇಳಿದೆ.

ಮಹದೇವಪುರದಲ್ಲಿ ಗೂಗಲ್ ಅನಂತ ಕ್ಯಾಂಪಸ್, 16 ಲಕ್ಷ ಚದರ ಅಡಿಗಳಷ್ಟು ವಿಸ್ತಾರದಲ್ಲಿ ಹರಡಿದೆ.

ಬೆಂಗಳೂರಿನಲ್ಲಿ ಅನಂತ ಕ್ಯಾಂಪಸ್ ಸ್ಥಾಪನೆಯ ಮೂಲಕ ಗೂಗಲ್ ನೂತನ ಮೈಲಿಗಲ್ಲು ಸ್ಥಾಪಿಸಿದೆ. ಈ ಕ್ಯಾಂಪಸ್‌ ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ.

ಗೂಗಲ್‌ನ ಅನಂತ ಕ್ಯಾಂಪಸ್ ಪರಿಸರ ಸ್ನೇಹಿ ಎನಿಸಿಕೊಂಡಿದೆ. ತ್ಯಾಜ್ಯ ನೀರನ್ನು ಮರುಬಳಕೆ ಮಾಡಲಾಗುತ್ತದೆ. ಮಳೆ ನೀರು ಕೊಯ್ಲು ಸೌಲಭ್ಯ ಸಹ ಇರಲಿದೆ.

ವಿದ್ಯುತ್ ಬಳಕೆ ಕಡಿಮೆ ಮಾಡಲು ಕಟ್ಟಡದ ಮೇಲೆ ಸ್ಮಾರ್ಟ್ ಎಲೆಕ್ಟ್ರೊ-ಕ್ರೋಮಿಕ್ ಗ್ಲಾಸ್ ಆಳವಡಿಸಲಾಗಿದೆ. ಕಚೇರಿಯ ಒಳಭಾಗದಲ್ಲೂ ದೇಶೀಯ ವಸ್ತುಗಳಿಂದ ಅಲಂಕರಿಸಲಾಗಿದೆ.

'ಚೈಲ್ಡ್ ಡೇ ಕೇರ್' ಕೇಂದ್ರ ಕೂಡ ಇರಲಿದೆ. ದೈಹಿಕ ವ್ಯಾಯಾಮ, ಆಟದ ಕೇಂದ್ರ, ಜಾಗಿಂಗ್ ಪ್ರದೇಶ, ಬ್ಯಾಡ್ಮಿಂಟನ್ ಕೋರ್ಟ್, ವಾಲಿಬಾಲ್, ಕ್ರಿಕೆಟ್ ಆಡಲು ಸೌಲಭ್ಯಗಳು ಇರಲಿವೆ.

11 ಅಂತಸ್ತಿನ ಅನಂತ ಕ್ಯಾಪಸ್ ಬೆಂಗಳೂರಿನಲ್ಲಿ ಗೂಗಲ್‌ನ ನಾಲ್ಕನೇ ಕಚೇರಿಯಾಗಿದೆ. 5,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸುತ್ತದೆ.

ಗೂಗಲ್ ಸರ್ಚ್, ಎಐ, ಮ್ಯಾಪ್, ಆಂಡ್ರಾಯ್ಡ್, ಗೂಗಲ್ ಪ್ಲೇ, ಕೌಲ್ಡ್ ಸೇರಿದಂತೆ ವಿವಿಧ ವಿಭಾಗಗಳು ಕಾರ್ಯಾಚರಿಸಲಿವೆ.

ಬೆಂಗಳೂರಿನ ಗೂಗಲ್ ಅನಂತ ಕ್ಯಾಂಪಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.