
ಕೃಪೆ: ಇನ್ಸ್ಟಾಗ್ರಾಮ್
ಅನೇಕರು ತಮ್ಮ ಸಂಗತಿಗೆ ನಾನಾ ರೂಪದಲ್ಲಿ ಪ್ರೀತಿ ತೋರುತ್ತಾರೆ. ಅದೇ ರೀತಿ ಇಲ್ಲೊಬ್ಬರು ಇಳಿವಯಸ್ಸಿನಲ್ಲೂ 30 ಪುಶ್ಅಪ್‌ಗಳನ್ನು ಮಾಡಿ ತಮ್ಮ ಪತ್ನಿಗೆ ಕಿವಿಯೋಲೆ ಖರೀದಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಟ್ರೇಂಡ್ ಸೃಷ್ಠಿ ಮಾಡಿದೆ.
‘ಶಾಪ್ ಒಂದರ ಮುಂಭಾಗದಲ್ಲಿ 30 ಪುಶ್ಅಪ್‌ಗಳನ್ನು ಮಾಡಿ ನಿಮ್ಮ ಇಚ್ಛೆಯ ಕಿವಿಯೋಲೆಗಳನ್ನು ಪ್ರೀತಿ ಪಾತ್ರರಿಗೆ ನೀಡಿ ಎಂಬ ಬೋರ್ಡ್ ಹಾಕಲಾಗಿತ್ತು.
ಅದರಂತೆಯೇ ಇಳಿವಯಸ್ಸಿನ ಒಬ್ಬರು ಆ ಶಾಪ್‌ನ ಚಾಲೆಂಜ್ ಸ್ವೀಕರಿಸಿ, ಅಂಗಡಿ ಮುಂಭಾಗ ಹಾಕಲಾಗಿದ್ದ ಕೆಂಪು ಮ್ಯಾಟ್ ಮೇಲೆ ಪುಶ್ಅಪ್ ಮಾಡಲು ಆರಂಭಿಸಿದರು.
ಪತಿಯ ಪುಶ್ಅಪ್‌ಗಳನ್ನು ನೋಡಲು ನೆರೆದಿದ್ದ ಜನರನ್ನು ನೋಡಿ ಪತ್ನಿಯು ಮುಗುಳು ಬೀರುತ್ತಿದ್ದಾರೆ.
30 ಪುಶ್ಅಪ್‌ಗಳನ್ನು ಮಾಡಿ ಗೆದ್ದು, ತಮ್ಮ ಪತ್ನಿಯ ಇಚ್ಛೆಯ ಕಿವಿಯೋಲೆಗಳನ್ನು ಖರೀದಿಸಿದ್ದಾರೆ.
ಇಳಿವಯಸ್ಸಿನ ಈ ಜೋಡಿಯ ಪ್ರೀತಿಗೆ ಮನಸೋತ ನೆಟ್ಟಿಗರು, ‘ನೋಡಿದ ಉತ್ತಮ ವಿಡಿಯೊ’, ‘ಮಾದರಿ ಜೋಡಿ, ‘ನಿಮ್ಮ ದಾಂಪತ್ಯ ಹೀಗೆ ಇರಲಿ’ ಎಂದು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.