ADVERTISEMENT

ಚಳಿಗಾಲದಲ್ಲೂ ಕಾಂತಿಯುತ ತ್ವಚ್ಛೆ ನಿಮ್ಮದಾಗಬೇಕೆ? ಮನೆಯಲ್ಲಿಯೇ ಹೀಗೆ ಮಾಡಿ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2025, 13:41 IST
Last Updated 12 ಡಿಸೆಂಬರ್ 2025, 13:41 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹೀಗಂತೂ ಚಳಿಗಾಲ.. ತ್ವಚ್ಛೆಯ ಆರೈಕೆಯೇ ಸವಾಲು, ಎಷ್ಟೇ ಕಾಳಜಿ ಮಾಡಿದರೂ ಕಡಿಮೆ. ಯಾವಾಗಲೂ ನಿಮ್ಮ ಮುಖ ಕಾಂತಿಯುತವಾಗಿ ಕಾಣಲು ಮನೆಯಲ್ಲಿಯೇ ಸಿಗುವ ಪದಾರ್ಥವನ್ನು ಬಳಸಿ ಈ ರೀತಿ ಮಾಡಿನೋಡಿ.

ನಿಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಹಿಟ್ಟನ್ನು ಬಜ್ಜಿ–ಬೋಂಡಾ ಮಾಡಲಷ್ಟೇ ಅಲ್ಲದೆ, ಮುಖದ ಕಾಂತಿ ಹೆಚ್ಚಿಸಿಕೊಳ್ಳಲ್ಲೂ ಬಳಸಬಹುದು. ಇದರಿಂದ ನಿಮ್ಮ ತ್ವಚ್ಛೆ ಕಂಗೊಳಿಸುತ್ತದೆ.

ADVERTISEMENT

ಅನುಸರಿಸಬೇಕಾದ ಸರಳ ವಿಧಾನಗಳು:

* ಮೊದಲು 2 ಚಮಚ ಕಡಲೆ ಹಿಟ್ಟಿನ ಜತೆ 1/4 ಚರ್ಮ ಕಸ್ತೂರಿ ಅರಿಸಿನ ಪುಡಿ, ನೀರು ಬೇರಸಿ ಮುಖಕ್ಕೆ ಹಚ್ಚಿಕೊಳ್ಳಿ. ಕೈ–ಕಾಲಿಗೂ ಹಚ್ಚಿಕೊಳ್ಳಬಹುದು. ಸನ್‌ ಟ್ಯಾನ್‌ ಆಗಿದ್ದರೆ ಇದರಿಂದ ಪರಿಹಾರ ಸಿಗುತ್ತದೆ.

* ಕಡಲೆ ಹಿಟ್ಟಿನ ಜತೆ ಮೊಸರು, ಸ್ವಲ್ಪ ಅರಿಶಿನ ಬೇರಸಿ ಪೇಸ್ಟ್‌ ಮಾಡಿಕೊಂಡು ಮುಖಕ್ಕೆ ಹಚ್ಚಿ. 15 ನಿಮಿಷ ಒಣಗಲು ಬಿಟ್ಟು ನಂತರ ಫೇಸ್‌ ವಾಶ್‌ ಮಾಡಿ. ಇದರಿಂದ ತ್ವಚ್ಛೆ ಮೃದುತ್ವದಿಂದ ಕೂಡಿರುತ್ತದೆ.

* ಎಣ್ಣೆಯುಕ್ತ ಚರ್ಮ ಹೊಂದಿರುವವರು ಕಡಲೆ ಹಿಟ್ಟಿನ ಜತೆ ರೋಸ್‌ ವಾಟರ್‌ ಬಳಸಿ ಮುಖಕ್ಕೆ ಹಚ್ಚಿ ಕ್ರಮೇಣ ನಿಮ್ಮ ಚರ್ಮ ಸಾಮಾನ್ಯ ಸ್ಥಿತಿಗೆ ಮರಳುತ್ತದೆ.

*ಕಡಲೆ ಹಿಟ್ಟು, ಮುಲ್ತಾನಿ ಮೆಟ್ಟಿ, ರೋಸ್‌ ವಾಟರ್‌, ಸ್ವಲ್ಪ ಅರಿಸಿನ ಬೇರಸಿ ಕೂಡ ಮುಖಕ್ಕೆ ಹಚ್ಚಿಕೊಳ್ಳುವುದು ಮಾಡಬಹುದು. ಇದು ಸಹ ತ್ವಚ್ಛೆಯ ಸೌಂದರ್ಯವನ್ನು ವೃದ್ಧಿಸುತ್ತದೆ.

* ಕಡಲೆ ಹಿಟ್ಟು, ಹಾಲು, ಅರಿಸಿನ ಜತೆಗೆ ಸ್ವಲ್ಪ ಗುಲಾಬಿ ದಳಗಳನ್ನು ಸೇರಿಸಿ ಪೇಸ್ಟ್‌ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬಹುದು. ಇದು ಸಹ ಉತ್ತಮ ಫೇಸ್‌ ಪ್ಯಾಕ್‌.

* ಸೋಪಿನ ಬದಲು ಕಡಲೆ ಹಿಟ್ಟಿನ ಬಳಕೆಯೂ ಉತ್ತಮ.

* ತುಂಬಾ ಮೊಡವೆ ಇರುವವರು, ಸೂಕ್ಷ್ಮ ತ್ವಚ್ಛೆ (ಸೆನ್ಸಿಟಿವ್ ಸ್ಕಿನ್) ಹೊಂದಿರುವವರು ಇಂತಹ ಫೇಸ್‌ ಪ್ಯಾಕ್‌ ಹಚ್ಚಿ ಮಾಡುವ ಮುನ್ನ ಪ್ಯಾಚ್‌ ಟೆಸ್ಟ್‌ (ಕೈ ಮೇಲೆ ಹಚ್ಚಿ ತ್ವಚ್ಛೆಗೆ ಸೂಕ್ತವೇ ಎಂಬುವುದನ್ನು ಪರೀಕ್ಷಿಸಿಕೊಳ್ಳಿ) ಮಾಡಿಕೊಳ್ಳುವುದು ಉತ್ತಮ. ಕೆಲವರಿಗೆ ಇದು ಸರಿಹೊಂದುವುದಿಲ್ಲ.

ಮದುವೆಗೆ ಕೆಲ ತಿಂಗಳು ಬಾಕಿ ಇದೆ ಎನ್ನುವ ಹೆಣ್ಣು ಮಕ್ಕಳು ಸಹ ಇಂತಹ ನೈಸರ್ಗಿಕ ಮನೆಮದ್ದುಗಳನ್ನು ಯಾವುದೇ ಖರ್ಚಿಲ್ಲದೇ ಉಪಯೋಗಿಸಬಹುದು. ಬ್ಯೂಟಿ ‍ಪಾರ್ಲರ್‌ನಲ್ಲಿ ದುಬಾರಿ ಫೇಶಿಯಲ್‌ ಮಾಡಿಸಿಕೊಳ್ಳುವ ಬದಲು ಹೀಗೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.