ADVERTISEMENT

Budget 2025 LIVE: ರಕ್ಷಣಾ ಕ್ಷೇತ್ರಕ್ಕೆ ಗರಿಷ್ಠ; ವಿಜ್ಞಾನ ಕ್ಷೇತ್ರಕ್ಕೆ ಕನಿಷ್ಠ ಅನುದಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2025, 12:26 IST
Last Updated 1 ಫೆಬ್ರುವರಿ 2025, 12:26 IST
<div class="paragraphs"><p>ನಿರ್ಮಲಾ ಸೀತಾರಾಮನ್</p></div>

ನಿರ್ಮಲಾ ಸೀತಾರಾಮನ್

   

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ ಎಂಟನೇ ಬಾರಿಗೆ ಬಜೆಟ್‌ ಮಂಡಿಸಿ ಚಾರಿತ್ರಿಕ ದಾಖಲೆ ಬರೆಯಲು ಅಣಿಯಾಗಿದ್ದಾರೆ. ಇಂದು ಬೆಳಿಗ್ಗೆ 11ಗಂಟೆಗೆ ಸಂಸತ್‌ನಲ್ಲಿ 2025–26ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸಲಿದ್ದಾರೆ.

ಆರ್ಥಿಕತೆಗೆ ವೇಗ ನೀಡುವ ಸವಾಲು

ಮಧ್ಯಮ ವರ್ಗದ ಜನರ ಮೇಲಿನ ತೆರಿಗೆ ಭಾರ ಇಳಿಸುವ ಹಾಗೂ ಮಂದಗತಿಯ ಆರ್ಥಿಕತೆಗೆ ವೇಗ ನೀಡುವ ಜಟಿಲ ಸವಾಲಿನ ನಡುವೆಯೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ ಎಂಟನೇ ಬಾರಿಗೆ ಬಜೆಟ್‌ ಮಂಡಿಸಿ ಚಾರಿತ್ರಿಕ ದಾಖಲೆ ಬರೆಯಲು ಅಣಿಯಾಗಿದ್ದಾರೆ.

ಆದಾಯ ತೆರಿಗೆಯ ಹೊರೆ ಇಳಿಸಲಿದ್ದಾರೆಯೇ?

ಸದ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಮತ್ತೊಂದೆಡೆ ಜಿಎಸ್‌ಟಿ ಏರಿಕೆಯಿಂದ ಮಧ್ಯಮ ವರ್ಗ ಬಸವಳಿದಿದೆ. ಹಾಗಾಗಿ, ಈ ಬಾರಿಯಾದರೂ ನಿರ್ಮಲಾ ಅವರು ಆದಾಯ ತೆರಿಗೆಯ ಹೊರೆ ಇಳಿಸಲಿದ್ದಾರೆಯೇ ಎಂದು ವೈಯಕ್ತಿಕ ತೆರಿಗೆದಾರರು ಬಜೆಟ್‌ನತ್ತ ಕುತೂಹಲ ನೆಟ್ಟಿದ್ದಾರೆ.

ADVERTISEMENT

ಮಹಿಳೆ, ಮಧ್ಯಮ ವರ್ಗಕ್ಕೆ ಸಿಹಿ: ಪ್ರಧಾನಿ ಮೋದಿ

ಈ ಬಾರಿಯ ಬಜೆಟ್‌ನಲ್ಲಿ ಬಡವರು, ಮಧ್ಯಮ ವರ್ಗದವರು ಮತ್ತು ಮಹಿಳೆಯರಿಗೆ ಕೆಲವು ವಿಶೇಷ ಕೊಡುಗೆಗಳನ್ನು ಘೋಷಿಸುವ ಸುಳಿವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ.

ಬಜೆಟ್‌ ಮಂಡನೆಗೆ ಮುನ್ನಾ ದಿನವಾದ ಶುಕ್ರವಾರ ಮಾತನಾಡಿದ ಅವರು, ‘ನಾನು ಸಮೃದ್ಧಿಯ ದೇವತೆ ಲಕ್ಷ್ಮಿಯನ್ನು ಪ್ರಾರ್ಥಿಸಿದ್ದೇನೆ. ಬಡವರು ಮತ್ತು ಮಧ್ಯಮ ವರ್ಗದವರ ಮೇಲೆ ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹ ಇರಲಿ ಎಂದೂ ಪ್ರಾರ್ಥಿಸಿದ್ದೇನೆ’ ಎಂದು ಹೇಳಿದರು.

ಕೆಲವೊಂದು ಪ್ರಮುಖ ನಿರ್ಧಾರ ಸಾಧ್ಯತೆ

ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ಮಹತ್ವವನ್ನು ಒತ್ತಿ ಹೇಳಿದ ಅವರು, ಬಜೆಟ್ ಅಧಿವೇಶನ ದಲ್ಲಿ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದು ಕೊಳ್ಳಲಾಗುವುದು ಎಂದರು. 

ಈ ಬಜೆಟ್‌ ಅಧಿವೇಶನ ದಲ್ಲಿ ಹಲವಾರು ಐತಿಹಾಸಿಕ ಮಸೂದೆಗಳು ಮತ್ತು ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು. ಇವುಗಳು ಮುಂದೆ ರಾಷ್ಟ್ರವನ್ನು ಬಲಪ‍ಡಿಸುವಂತಹ ಕಾನೂನುಗಳಾಗಲಿವೆ ಎಂದು ತಿಳಿಸಿದರು.

ಅಂತಿಮ ಸಿದ್ಧತೆ 

ಕೇಂದ್ರ ಬಜೆಟ್‌ಗೆ ಅಂತಿಮ ರೂಪುರೇಷೆ ನೀಡಿದ ಬಳಿಕ ನಿರ್ಮಲಾ ಸೀತಾರಾಮನ್ ಅವರು ಗ್ರೂಪ್ ಫೋಟೊ ಕ್ಲಿಕ್ಕಿಸಿದರು.

ಜಿಡಿಪಿ ಮತ್ತೆ ಮಂದಗತಿ

2025–26ನೇ ಆರ್ಥಿಕ ಸಾಲಿನಲ್ಲಿಯೂ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆಯು ಮಂದಗತಿಯಲ್ಲಿಯೇ ಇರಲಿದೆ ಎಂದು ಸಂಸತ್‌ನಲ್ಲಿ ಮಂಡನೆಯಾದ 2024–25ನೇ ಸಾಲಿನ ಆರ್ಥಿಕ ಸಮೀಕ್ಷೆ ಹೇಳಿದೆ.

ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಈ ಸಮೀಕ್ಷೆ ಮಂಡಿಸಿದರು. 2024–25ನೇ ಆರ್ಥಿಕ ವರ್ಷದಲ್ಲಿ ಜಿಡಿಪಿಯು ಶೇ 6.4ರಷ್ಟು ಹಾಗೂ 2025–26 ರಲ್ಲಿ ಶೇ 6.3ರಿಂದ ಶೇ 6.8ರಷ್ಟು ‍ಪ್ರಗತಿ ಕಾಣಲಿದೆ ಎಂದು ಸಮೀಕ್ಷೆ ಹೇಳಿದೆ.

ಕೇಂದ್ರ ಹಣಕಾಸು ಸಚಿವಾಲಯದ ಹೊರಗಿದ ದೃಶ್ಯಗಳು...

ಬಜೆಟ್ ನಿರೀಕ್ಷೆಗಳೇನು? ಜನಸಾಮಾನ್ಯರ ಅಭಿಪ್ರಾಯ

ಕೇಂದ್ರ ಬಜೆಟ್ ನೇರಪ್ರಸಾರ ವೀಕ್ಷಣೆ ಎಲ್ಲಿ ? ಇಲ್ಲಿದೆ ಮಾಹಿತಿ

ಸಂಸತ್ತಿಗೆ ತಲುಪಿದ ಬಜೆಟ್ ದಾಖಲೆಗಳು 

ಬಜೆಟ್ ದಾಖಲೆಗಳನ್ನು ಹೊಂದಿದ ಟ್ಯಾಬ್ಲೆಟ್ ಪ್ರದರ್ಶಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಬಜೆಟ್ ಮಂಡನೆಗೂ ಮುನ್ನ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ನಿರ್ಮಲಾ

ಈ ಬಾರಿಯೂ ಕಾಗದ ರಹಿತ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ನಿರ್ಮಲಾ ಸೀತಾರಾಮನ್

Union Budget: ವಿಶೇಷ ಸೀರೆ ಧರಿಸಿ ಸಂಸತ್ತಿನತ್ತ ಹೆಜ್ಜೆ ಇಟ್ಟ ನಿರ್ಮಲಾ - ಇಲ್ಲಿದೆ ವಿವರ

2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ಆಗಮಿಸಿದ್ದಾರೆ.  

ನಿರ್ಮಲಾ ಸೀತಾರಾಮನ್ ಅವರಿಗೆ 'ದಹಿ-ಚೀನಿ' ತಿನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

2019, 2020, 2021, 2022, 2023, 2024, 2025 ಮತ್ತು 2025-26 ಬಜೆಟ್ ಮಂಡನೆ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತೊಟ್ಟ ಬಗೆಬಗೆಯ ಸೀರೆಗಳು

ಕೇಂದ್ರ ಬಜೆಟ್‌ಗೆ ಸಂಪುಟ ಅನುಮೋದನೆ ನೀಡಿದೆ.

22025–26ನೇ ಸಾಲಿನ ಬಜೆಟ್ ಮಂಡನೆಗೂ ಮೊದಲು ರಾಷ್ಟ್ರಪತಿ ಅನುಮೋದನೆ ಪಡೆದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಂಪ್ರದಾಯದಂತೆ ದ್ರೌಪದಿ ಮುರ್ಮು ಅವರು ಮೊಸರು ಹಾಗೂ ಸಕ್ಕರೆಯನ್ನು ತಿನ್ನಿಸಿ ಶುಭಹಾರೈಸಿದರು

ಬಜೆಟ್ ಮಂಡನೆಗೆ ಮುಂದಾದ ನಿರ್ಮಲಾ ಸೀತಾರಾಮನ್ ಅವರಿಗೆ ವಿರೋಧ ಪಕ್ಷಗಳ ವಿರೋಧ. ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಓಂ ಬಿರ್ಲಾ ಮನವಿ. ಗದ್ದಲದ ನಡುವೆಯೇ ಬಜೆಟ್ ಮಂಡನೆ ಆರಂಭಿಸಿದ ವಿತ್ತ ಸಚಿವೆ.

ಯುವಜನತೆ, ದಲಿತರು, ಅನ್ನದಾತರು ಮತ್ತು ಮಹಿಳೆಯರನ್ನು ಉದ್ದೇಶವಾಗಿಟ್ಟುಕೊಂಡು ಬಜೆಟ್ ಮಂಡಿಸಲಾಗುತ್ತಿದೆ– ನಿರ್ಮಲಾ ಸೀತಾರಾಮನ್

ಮುಂದಿನ ಐದು ವರ್ಷಗಳ ಅಭಿವೃದ್ಧಿಯನ್ನು ಗಮದಲ್ಲಿಟ್ಟುಕೊಂಡು ಆರು ಅಂಶಗಳನ್ನು ಗಮದಲ್ಲಿಟ್ಟುಕೊಂಡು ಕೃಷಿ, ಕೈಗಾರಿಕೆ, ಗಣಿಗಾರಿಕೆ, ಆರ್ಥಿಕತೆ, ಇಂಧನಗಳಿಗೆ ಒತ್ತು

₹60 ಸಾವಿರ ಕೋಟಿ ರಫ್ತು ವಹಿವಾಟು ಹೊಂದಿರುವ ಮೀನುಗಾರಿಕೆಯಲ್ಲಿ ಅಂಡಮಾನ್ ನಿಕೋಬಾರ್‌ ಹಾಗೂ ಲಕ್ಷ್ಯದ್ವೀಪಗಳನ್ನು ಗುರಿಯಾಗಿಸಿಕೊಂಡು ಒತ್ತು ನೀಡಲಾಗುವುದು. ಇದಕ್ಕಾಗಿ ವಿಶೇಷ ವಲಯ ನಿರ್ಮಿಸಲಾಗುವುದು. ಪೌಷ್ಟಿಕತೆಯಲ್ಲಿ ಹೆಚ್ಚು ಬೇಡಿಕೆ ಇರುವ ತಾವರೆ ಬೀಜ (ಮಕಾನಾ) ಬೆಳೆಗೆ ಒತ್ತು ನೀಡಲಾಗುವುದು.

ಆತ್ಮನಿರ್ಭರ ಭಾರತ ಮೂಲಕ ಸ್ಟಾರ್ಟ್‌ಅಪ್‌ಗಳಿಗೆ ₹10ಕೋಟಿಯಿಂದ ₹20ಕೋಟಿವರೆಗೂ ಕಡಿಮೆ ಬಡ್ಡಿ ಸಾಲ. ಮೈಕ್ರೊ ಕಂಪನಿಗಳಿಗೆ ₹5 ಲಕ್ಷವರೆಗಿನ ಕ್ರೆಡಿಟ್‌ ಕಾರ್ಡ್‌ ವಿತರಣೆ ಹಾಗೂ ಇಂಥ 10 ಲಕ್ಷ ಕಾರ್ಡ್‌ ಮೊದಲ ಹಂತದಲ್ಲಿ ಹಂಚಿಕೆ

ಉದ್ಯಮ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರನ್ನು ಉತ್ತೇಜಿಸುವ ಸಲುವಾಗಿ ಹೊಸ ಯೋಜನೆ ಜಾರಿಗೊಳಿಸಲಾಗುವುದು. 22 ಲಕ್ಷ ಉದ್ದಿಮೆದಾರರಿಗೆ ಅನುಕೂಲವಾಗಲಿದೆ. ಚರ್ಮೋದ್ಯವನ್ನು ಉತ್ತೇಜಿಸಿ ರಫ್ತು ಹೆಚ್ಚಿಸುವತ್ತ ಗಮನ ಹರಿಸಲಾಗುವುದು. ಆ ಮೂಲಕ ಮೇಡ್‌ ಇನ್ ಇಂಡಿಯಾ ಬ್ರ್ಯಾಂಡ್ ಉತ್ತೇಜಿಸಲಾಗುವುದು

ಮೇಕ್‌ ಇನ್ ಇಂಡಿಯಾ ಯೋಜನೆಯಡಿಯಲ್ಲಿ ರಾಷ್ಟ್ರೀಯ ತಯಾರಿಕಾ ವಲಯವನ್ನು ರಚಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಇದನ್ನು ಜಾರಿಗೊಳಿಸಲಾಗುವುದು. ಸೌರ, ಇವಿ ಬ್ಯಾಟರಿ, ಮೋಟಾರ್‌ಗಳು ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಕೆ ಹಾಗೂ ಹೂಡಿಕೆಯನ್ನು ಉತ್ತೇಜಿಸಲಾಗುವುದು.

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮೂರು ನಾವಿನ್ಯತೆ ಸಂಸ್ಥೆಗಳ ಸ್ಥಾಪನೆ 23 ಐಐಟಿಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಿಸಲಾಗಿದೆ. 60 ಸಾವಿರದಿಂದ 1.35 ಲಕ್ಷಕ್ಕೆ ಹೆಚ್ಚಳ. ಪಟ್ನಾ ಐಐಟಿ ವಿಸ್ತರಣೆ. ವೈದ್ಯಕೀಯ ಕಾಲೇಜುಗಳ ಸೀಟುಗಳನ್ನು 10 ವರ್ಷಗಳಲ್ಲಿ ಶೇ 100ರಷ್ಟು ಹೆಚ್ಚಳ ಮಾಡಲಾಗುವುದು

ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ₹1ಲಕ್ಷ ಕೋಟಿ ಮೀಸಲಿಡಲಾಗುವುದು. ಇದು ಕುಡಿಯುವ ನೀರು, ನೈರ್ಮಲ್ಯಕ್ಕೆ ಒತ್ತು ನೀಡಲು ವಿನಿಯೋಗಿಸಲಾಗುವುದು. 

ಗಿಗ್‌ ಕಾರ್ಮಿಕರಿಗೆ ಆರೋಗ್ಯ ವಿಮೆ ಸೌಲಭ್ಯ ವಿಸ್ತರಣೆ; 1 ಕೋಟಿ ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದರಿಗೆ ವಿಶೇಷ ಯೋಜನೆ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಉಡಾನ್‌ ಯೋಜನೆಗೆ ಹೆಚ್ಚಿನ ಉತ್ತೇಜನ. ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒತ್ತು; ಮುಂದಿನ ಹತ್ತು ವರ್ಷಗಳಲ್ಲಿ  ಈಗಿರುವುದಕ್ಕಿಂತ 4 ಕೋಟಿ ಹೆಚ್ಚುವರಿ ಪ್ರಯಾಣಿಕರ ಗುರಿ

ಬಿಹಾರಕ್ಕೆ ಗ್ರೀನ್‌ ಫೀಲ್ಡ್ ವಿಮಾನ ನಿಲ್ದಾಣ ಮಂಜೂರು; ಪಟ್ನಾ ಐಐಟಿ ವಿಸ್ತರಣೆಗೆ ಅನುದಾನ ಘೋಷಣೆ. ಬಿಹಾರದ 500 ಹೆಕ್ಟೇರ್ ಜಮೀನಿಗೆ ನೀರಾವರಿ ಯೋಜನೆ– ವಿರೋಧ ಪಕ್ಷಗಳ ಇತರ ರಾಜ್ಯಗಳ ಸಂಸದರ ಆಕ್ರೋಶ

ಪ್ರವಾಸೋಧ್ಯಮಕ್ಕೆ ಒತ್ತು– ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ 50 ಪ್ರವಾಸಿ ತಾಣಗಳ ಉತ್ತೇಜನ. ಹೋಟೆಲ್ ನಿರ್ಮಾಣ ಹಾಗೂ ಇತರ ಮೂಲಸೌಕರ್ಯಕ್ಕೆ ಒತ್ತು; ಮುದ್ರಾ ಯೋಜನೆ ಮೂಲಕವೂ ಪ್ರವಾಸಿ ತಾಣಗಳ ಅಭಿವೃದ್ಧಿ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಖಾಸಗಿ ಪಾಲುದಾರಿಕೆ.

ಜೀನ್ ಬ್ಯಾಂಕ್ ಸ್ಥಾಪನೆಗೆ ಒತ್ತು. ಆ ಮೂಲಕ ಅನುವಂಶೀಯ ಕಾಯಿಲೆಗಳ ಸಂಶೋಧನೆ ಸಾಧ್ಯ. ಐಐಟಿ, ಐಐಎಸ್‌ಸಿಯಲ್ಲಿ ಹೆಚ್ಚುವರಿ ಸಂಶೋಧನೆಗೆ ಅನುದಾನ. ಭಾರತೀಯ ಜ್ಞಾನ ಸಂಪತ್ತಿನ ಬ್ಯಾಂಕ್ ಸ್ಥಾಪನೆಗೆ ಕ್ರಮ. 

ಭಾರತ್ ಟ್ರೇಡ್‌ ನೆಟ್‌ವರ್ಕ್‌ ಮೂಲಕ ಹಣಕಾಸು ಕ್ಷೇತ್ರದಲ್ಲಿ ನೆರವು. ಜಾಗತಿಕ ಪೂರೈಕೆ ಸರಪಳಿಯಲ್ಲಿ ದೇಶಿ ಉತ್ಪನ್ನಗಳ ಮಾರಾಟದಲ್ಲಿ ತೊಡಗುವವರಿಗೆ ಈ ಯೋಜನೆ ಮೂಲಕ ಸಹಕಾರ. 

ವಿಮಾ ಕ್ಷೇತ್ರದಲ್ಲಿ ಶೇ 100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ. ಸಾರ್ವಜನಿಕ ಬ್ಯಾಂಕ್‌ಗಳ ಮೂಲಕ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸೌಲಭ್ಯಗಳ ವಿಸ್ತರಣೆ

ಎಲ್ಲಾ ಸರ್ಕಾರಿ ಶಾಲೆಗಳಿಗೂ ಬ್ರಾಂಡ್‌ಬ್ಯಾಂಡ್‌ ಸಂಪರ್ಕ; ಜಲಜೀವನ ಮಿಷನ್ ಯೋಜನೆ ಇನ್ನಷ್ಟು ವಿಸ್ತರಣೆ

ಕ್ಯಾನ್ಸರ್, ಅಪರೂಪದ ಕಾಯಿಲೆಗಳಿಗೆ ಸಂಬಂಧಿಸಿದ 36 ಔಷಧಗಳಿಗೆ ಆಮದು ಮೇಲಿನ ಅಬಕಾರಿ ಸಂಕದಿಂದ ರಿಯಾಯಿತಿ. 

ಮೊಬೈಲ್ ಫೋನ್‌ಗಳಲ್ಲಿ ಬಳಸುವ ಲಿಥಿಯಂ ಅಯಾನ್ ಬ್ಯಾಟರಿ ತಯಾರಕರಿಗೆ ಹೆಚ್ಚಿನ ಉತ್ತೇಜ. ಸಮುದ್ರ ಉತ್ಪನ್ನಗಳನ್ನು ಉತ್ತೇಜಿಸಲು ಅಬಕಾರಿ ಸುಂಕವನ್ನು ಶೇ 30ರಿಂದ ಶೇ 5ಕ್ಕೆ ಇಳಿಕೆ

ಹೊಸ ಆದಾಯ ತೆರಿಗೆ ಮಸೂದೆಯು ಮಂಡನೆ ಮಾಡಲಾಗುವುದು. ಇದರಿಂದ ತೆರಿಗೆದಾರರಿಗೆ ಹೆಚ್ಚು ಪ್ರಯೋಜನವಾಗಲಿದೆ. ಶಿಕ್ಷಣ ಕುರಿತ ಪಾವತಿಗೆ ಟಿಡಿಎಸ್ ಕಡಿತ ಇಲ್ಲ. 

ಹಿರಿಯ ನಾಯಕರಿಗೆ ₹1ಲಕ್ಷ ವರೆಗೆ ಟಿಡಿಎಸ್ ವಿನಾಯಿತಿ. ಆದಾಯಮೂಲದಿಂದ ತೆರಿಗೆ ಸಂಗ್ರಹ ₹7 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಳ. ವಿದೇಶದಿಂದ ರವಾನಿಸುವ ಹಣದ ಮೇಲಿನ ಟಿಡಿಎಸ್‌ ಕಡಿತ

₹12 ಲಕ್ಷದವರೆಗೂ ಆದಾಯ ತೆರಿಗೆ ಇಲ್ಲ; ₹0–₹4ಲಕ್ಷ ತೆರಿಗೆ ಇಲ್ಲ; ₹4ಲಕ್ಷದಿಂದ ₹8ಲಕ್ಷವರೆಗೆ ಶೇ4; ₹8ಲಕ್ಷದಿಂದ ₹11ಲಕ್ಷ– ಶೇ 10; ₹12ಲಕ್ಷದಿಂದ ರಿಂದ ₹15ಲಕ್ಷ– ಶೇ 15; ₹ 16 ಲಕ್ಷದಿಂದ ₹20 ಲಕ್ಷವರೆಗೆ ಶೇ 20; ₹21ಲಕ್ಷದಿಂದ ₹24ಲಕ್ಷವರೆಗೆ ಶೇ 25ರಷ್ಟು ತೆರಿಗೆ. 

ಬಜಟ್ ಮಂಡನೆ ಮುಕ್ತಾಯ; ಸಂಸತ್ತಿನ ಅನುಮೋದನೆ; ಲೋಕಸಭೆ ಕಾರ್ಯಕಲಾಪ ಸೋಮವಾರಕ್ಕೆ ಮುಂದೂಡಿದ ಸ್ಪೀಕರ್ ಓಂ ಬಿರ್ಲಾ

ರಾಜ್ಯಗಳಿಗೆ 50 ವರ್ಷಗಳ ಅವಧಿಗೆ ಬಡ್ಡಿ ರಹಿತವಾಗಿ ₹1.5 ಲಕ್ಷ ಕೋಟಿ ನೆರವನ್ನು ಮೂಲಸೌಕರ್ಯ ಅಭಿವೃದ್ಧಿಗೆ ನೀಡುವುದಾಗಿ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ. 2021ರಲ್ಲಿ ಈ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತರಲಾಗಿತ್ತು. ಅದರ ಯಶಸ್ಸಿನ ಆಧಾರದ ಮೇಲೆ 2ನೇ ಯೋಜನೆಯನ್ನು 2025–30ಕ್ಕೆ ವಿಸ್ತರಿಸಲಾಗಿದೆ. ಹೊಸ ಯೋಜನೆಗಳಿಗಾಗಿ ₹10 ಲಕ್ಷ ಕೋಟಿ ಮೀಸಲಿಡಲಾಗಿದೆ ಎಂದಿದ್ದಾರೆ.

ಮೊಬೈಲ್ ಫೋನ್‌, ಬ್ಯಾಟರಿ ಚಾಲಿತ ವಾಹನಗಳು, ಕ್ಯಾನ್ಸರ್‌ ಔಷಧ ಸೇರಿದಂತೆ ವಿವಿಧ ವಸ್ತುಗಳ ಮೇಲಿನ ತೆರಿಗೆ ಮತ್ತು ಅಬಕಾರಿ ಸುಂಕವನ್ನು ಕೇಂದ್ರ ಬಜೆಟ್‌ನಲ್ಲಿ ಇಳಿಸಲಾಗಿದೆ. ಯಾವುದು ಏರಿಕೆ ಹಾಗೂ ಯಾವುದು ಇಳಿಕೆ ಎಂಬುದರ ಮಾಹಿತಿ ಇಲ್ಲಿದೆ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2025–26ನೇ ಸಾಲಿನ ಆಯವ್ಯಯದಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಹಂಚಿಕೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ...

2025–26ನೇ ಸಾಲಿನ ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿ ಎಷ್ಟು ಎಂಬ ಮಾಹಿತಿ ಇಲ್ಲಿದೆ

2025-26ನೇ ಸಾಲಿನ ಬಜೆಟ್‌ನಲ್ಲಿ ರೂಪಾಯಿ ಜಮೆ, ವೆಚ್ಚ ಹೇಗೆ? ಇಲ್ಲಿದೆ ಮಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.