ನಗರದ ಆಡುಗೋಡಿ ರಸ್ತೆಯ ‘ನೋ ಪಾರ್ಕಿಂಗ್’ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಸಂಚಾರ ವಿಭಾಗದ ಪೊಲೀಸರು ಗುರುವಾರ ಟೋಯಿಂಗ್ ಮಾಡಿದರು
–ಪ್ರಜಾವಾಣಿ ಚಿತ್ರ: ರಂಜು ಪಿ.
ಬೆಂಗಳೂರು: ನಿಲುಗಡೆ ನಿಷೇಧಿತ ಸ್ಥಳಗಳಲ್ಲಿ ನಿಲ್ಲಿಸುವ ವಾಹನಗಳನ್ನು ಕೊಂಡೊಯ್ಯುವ ‘ಟೋಯಿಂಗ್’ ಕಾರ್ಯಾಚರಣೆ ಗುರುವಾರದಿಂದಲೇ ಆರಂಭವಾಗಿದೆ. ಅಧಿಕೃತ ಆದೇಶ ಹೊರಬೀಳುವ ಮುನ್ನವೇ ಕಾರ್ಯಾಚರಣೆ ಶುರುವಾಗಿದೆ.
ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳನ್ನು ಟೋಯಿಂಗ್ ಮಾಡುವ ಸಂಬಂಧ ನಿಯಮಾವಳಿ ರೂಪಿಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಹೇಳಿಕೆ ನೀಡಿ 24 ತಾಸು ಕಳೆಯುವಷ್ಟರಲ್ಲಿ ಆಡುಗೋಡಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಟೋಯಿಂಗ್ ಕಾರ್ಯಾಚರಣೆ ನಡೆದಿದೆ.
ಮೊದಲ ದಿನ 30ಕ್ಕೂ ಹೆಚ್ಚು ಪ್ರಕರಣ ದಾಖಲು ಮಾಡಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
‘ಟೋಯಿಂಗ್‌ಗೆ ಇಲಾಖೆಯ ವಾಹನಗಳನ್ನೇ ಬಳಸಬೇಕಾ ಅಥವಾ ಗುತ್ತಿಗೆದಾರರನ್ನು ನೇಮಿಸಬೇಕೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಶೀಘ್ರದಲ್ಲೇ ಅದರ ರೂಪುರೇಷೆಗಳು ಸಿದ್ಧವಾಗಲಿವೆ. ಟೋಯಿಂಗ್ ಜಾರಿ ದಿನಾಂಕ ಇನ್ನೂ ನಿಗದಿ ಆಗಿಲ್ಲ’ ಎಂದು ದಯಾನಂದ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.