ADVERTISEMENT

Lok Sabha Elections 2024 | 13 ರಾಜ್ಯಗಳ 88 ಕ್ಷೇತ್ರ; 2ನೇ ಹಂತ ಮುಕ್ತಾಯ: ಶೇ 60ರಷ್ಟು ಮತದಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಏಪ್ರಿಲ್ 2024, 14:19 IST
Last Updated 26 ಏಪ್ರಿಲ್ 2024, 14:19 IST
<div class="paragraphs"><p>ಕೇರಳದ ಕೊಯಿಕ್ಕೋಡ್‌ನ ಮತಗಟ್ಟೆಯೊಂದರಲ್ಲಿ ಸರತಿಸಾಲಿನಲ್ಲಿ ಮತದಾರರು ನಿಂತಿರುವ ದೃಶ್ಯ</p></div>

ಕೇರಳದ ಕೊಯಿಕ್ಕೋಡ್‌ನ ಮತಗಟ್ಟೆಯೊಂದರಲ್ಲಿ ಸರತಿಸಾಲಿನಲ್ಲಿ ಮತದಾರರು ನಿಂತಿರುವ ದೃಶ್ಯ

   

ಪಿಟಿಐ ಚಿತ್ರ

1,200ಕ್ಕೂ ಹೆಚ್ಚು ಅಭ್ಯರ್ಥಿಗಳು ಜನಾದೇಶ ಬಯಸಿದ್ದಾರೆ. ಮತ ಚಲಾಯಿಸಿ, ಜನತಂತ್ರ ಗೆಲ್ಲಿಸಲು ಇದು ಸಕಾಲವಾಗಿದೆ.

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭಗೊಂಡಿದ್ದು, ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ಕರ್ನಾಟಕದ 14 ಮತ್ತು ಕೇರಳದ ಎಲ್ಲ 20 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಜತೆಗೆ, ರಾಜಸ್ಥಾನದ 13, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ತಲಾ 8, ಮಧ್ಯಪ್ರದೇಶದಲ್ಲಿ 7, ಬಿಹಾರ ಮತ್ತು ಅಸ್ಸಾಂನಲ್ಲಿ ತಲಾ 5, ಛತ್ತೀಸಗಡ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 3 ಹಾಗೂ ಮಣಿಪುರ, ತ್ರಿಪುರಾ, ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 1 ಕ್ಷೇತ್ರಗಳಲ್ಲಿಯೂ ಮತದಾನ ನಡೆಯಲಿದೆ.

ಕಣದಲ್ಲಿರುವ ಪ್ರಮುಖರು

ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಶಶಿ ತರೂರ್‌, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ನಟಿ ಹೇಮಾ ಮಾಲಿನಿ ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ.

ADVERTISEMENT

ಮತ ಚಲಾಯಿಸಿದ ಸುಧಾಮೂರ್ತಿ

ಮತ ಚಲಾಯಿಸಿದ ನಾರಾಯಣಮೂರ್ತಿ 

13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಮತದಾನ ಆರಂಭ

ಮತ ಚಲಾಯಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಮತ ಚಲಾಯಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

ಮತದಾನ ಮಾಡಿದ ಪ್ರಮುಖರು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳದ ವಿಪಕ್ಷ ನಾಯಕ ವಿ.ಡಿ.ಸತೀಶ್, ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹಲೋತ್, ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ, ನಟ ಪ್ರಕಾಶ್ ರಾಜ್, ಬಿಜೆಪಿಯ ಸುರೇಶ್ ಗೋಪಿ, ಅನಿಲ್ ಆ್ಯಂಟನಿ, ವಿ. ಮುರಳೀಧರನ್, ರಾಜೀವ್ ಚಂದ್ರಶೇಖರ್ ಮತ್ತು ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಮತದಾನ ಮಾಡಿದ್ದಾರೆ.

ಮತ ಚಲಾಯಿಸಿದ ರಾಹುಲ್ ದ್ರಾವಿಡ್

9 ಗಂಟೆಗೆ ಕರ್ನಾಟಕದಲ್ಲಿ ಶೇ 9, ತ್ರಿಪುರಾ ಶೇ 16ರಷ್ಟು ಮತದಾನ

ಮತ ಚಲಾಯಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ಮತ ಚಲಾಯಿಸಿದ ಕರ್ನಾಟಕದ ಪ್ರಮುಖರು

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಮತ ಚಲಾಯಿಸಿದ್ದಾರೆ.

ಮತ ಚಲಾಯಿಸಿದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ –ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ

ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಬಲೂರ್‌ಘಾಟ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಕಾಂತ ಮಜುಂದಾರ್ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ‘ಗೋ ಬ್ಯಾಕ್ ಸುಕಾಂತ ಮಜುಂದಾರ್‌’ ಎಂದು ಟಿಎಂಸಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.

ಮತ ಚಲಾಯಿಸಿದ ಕರ್ನಾಟಕ ಸಿಎಂ ಸಿದ್ದರಾಮಯ್ಯ

LS polls: ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬ ಸಂಭ್ರಮಿಸಿದ ಗೂಗಲ್‌

11 ಗಂಟೆಗೆ ಕರ್ನಾಟಕದಲ್ಲಿ ಶೇ 22, ತ್ರಿಪುರಾ ಶೇ 36ರಷ್ಟು ಮತದಾನ

ಮತ ಚಲಾಯಿಸಿದ ಇಸ್ರೊ ಅಧ್ಯಕ್ಷ ಸೋಮನಾಥ್‌

ಮತ ಚಲಾಯಿಸಿದ ನಟ ಯಶ್, ಸುದೀಪ್

ಮಧ್ಯಾಹ್ನ 1 ಗಂಟೆವರೆಗೆ ಕರ್ನಾಟಕದಲ್ಲಿ ಶೇ 38, ತ್ರಿಪುರಾ ಶೇ 54ರಷ್ಟು ಮತದಾನ

ಮಧ್ಯಾಹ್ನದವರೆಗೂ ಮತದಾರರ ಉತ್ಸಾಹದಿಂದ ಶೇ 50ರಷ್ಟು ಮತದಾನವಾಗಿದೆ. ಪ್ರಜಾಪ್ರಭುತ್ವದಲ್ಲಿ ಇದು ಪ್ರಜೆಗಳ ಉತ್ತಮ ನಡೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತಗಟ್ಟೆಗೆ ಬಂದು ಮತ ಹಾಕುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು ಎಂದು ಮೈಸೂರಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಜಾವಗಲ್ ಶ್ರೀನಾಥ್‌ ಹೇಳಿದರು.

ಕಳಪೆ ರಸ್ತೆ ಖಂಡಿಸಿ ತ್ರಿಪರಾದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ 600ಕ್ಕೂ ಹೆಚ್ಚು ಮತದಾರರು ಚುನಾವಣೆ ಬಹಿಷ್ಕರಿಸಿದ್ದಾರೆ. ತ್ರಿಪುರಾ ಪೂರ್ವ ಲೋಕಸಭಾ ವ್ಯಾಪ್ತಿಯ ಧಲಾಯ್ ಜಿಲ್ಲೆಯ ಗ್ರಾಮದ 7 ಕಿ.ಮೀ. ಉದ್ದದ ರಸ್ತೆ ಕಳಪೆಯಾಗಿದ್ದು, ಇದರ ದುರಸ್ತಿಗೆ ಬೇಡಿಕೆ ಸಲ್ಲಿಸಿದ್ದರು. ಆದರೆ ಅದು ಈಡೇರದ ಕಾರಣ, ಇಲ್ಲಿರುವ ಜನರು ಮತದಾನದಿಂದ ದೂರ ಉಳಿದಿದ್ದಾರೆ. ಮತದಾರರ ಮನವೊಲಿಸಲು ಜಿಲ್ಲಾಧಿಕಾರಿ ಹಾಗೂ ಇತರ ಚುನಾವಣಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. 

ಸಂಜೆ 5ರವರೆಗೆ: ಕೇರಳದಲ್ಲಿ ಶೇ 64ರಷ್ಟು ಮತದಾನ...  ಕೇರಳದಲ್ಲಿ 20 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸಂಜೆಯಾಗುತ್ತಿದ್ದಂತೆ ಬಿರುಸಿನ ಮತದಾನ ನಡೆದಿದೆ. ಸಂಜೆ 5ರವರೆಗೂ ಶೇ 64.73ರಷ್ಟು ಮತದಾನವಾಗಿದೆ. 2019ರಲ್ಲಿ ರಾಜ್ಯದಲ್ಲಿ ಶೇ 77.84ರಷ್ಟು ಮತದಾನವಾಗಿತ್ತು. ದಿನದ ಆರಂಭದಲ್ಲಿ ಮೊದಲ ಒಂದು ಗಂಟೆಯಲ್ಲಿ ಆದ ಮತದಾನ ಪ್ರಮಾಣ ಶೇ 6 ಮಾತ್ರ. ರಾಜ್ಯದಲ್ಲಿ ಒಟ್ಟು 25 ಸಾವಿರ ಮತಗಟ್ಟೆಗಳಿದ್ದು, ಸಂಜೆ ಮತಗಟ್ಟೆಗಳ ಮುಂದೆ ಉದ್ದನೆಯ ಸರತಿಸಾಲಿನಲ್ಲಿ ಮತದಾರರು ನಿಂತಿದ್ದ ದೃಶ್ಯ ಕಂಡುಬಂತು. ಕೆಲವು ಮತಗಟ್ಟೆಗಳಲ್ಲಿ ಇವಿಎಂ ಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದ ಕುರಿತು ವರದಿಯಾಗಿದೆ. ಕಣ್ಣೂರಿನಲ್ಲಿ ಶೇ 68, ಅಲಪ್ಪುಳದಲ್ಲಿ ಶೇ 68ರಷ್ಟು ಮತದಾನವಾದ ಕುರಿತು ವರದಿಯಾಗಿದೆ. ಬಿಸಿಲ ಝಳ ಹೆಚ್ಚಾಗಿದೆ. ಪಾಲಕ್ಕಾಡ್‌ನಲ್ಲಿ 41.54 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗಿದೆ. 

ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಶುಕ್ರವಾರ ನಡೆದಿದ್ದು, ದಿನದ ಅಂತ್ಯದ ಹೊತ್ತಿಗೆ ಸರಾಸರಿ ಶೇ 60ರಷ್ಟು ಮತದಾನವಾಗಿದೆ. ದೇಶದ 13 ರಾಜ್ಯಗಳ 88 ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಅಲ್ಲಲ್ಲಿ ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟವು. ಕೇರಳ ಹಾಗೂ ಪಶ್ಚಿಮ ಬಂಗಾಳದ ಕೆಲವೆಡೆ ಬೋಗಸ್ ಮತದಾನ ನಡೆದ ಕುರಿತೂ ವರದಿಯಾಗಿದೆ. ಉತ್ತರಪ್ರದೇಶದ ಮಥುರಾ, ರಾಜಸ್ಥಾನದ ಬನ್ಸ್ವಾರಾ, ಮಹಾರಾಷ್ಟ್ರದ ಪರ್ಭನಿ, ತ್ರಿಪುರಾದ ಕೆಲ ಪ್ರದೇಶಗಳಲ್ಲಿ ಮತದಾನ ಬಹಿಷ್ಕರಿಸಿದ ಉದಾಹರಣೆಗಳೂ ನಡೆದವು. ಬೆಳಿಗ್ಗೆ 7ಕ್ಕೆ ಆರಂಭವಾದ ಮತದಾನ ಸಂಜೆ 6ರವರೆಗೂ ನಡೆಯಿತು. ಬಿಸಿಲ ಝಳದ ನಡುವೆಯೂ ತ್ರಿಪುರಾದಲ್ಲಿ ಅತ್ಯಧಿಕ ಶೇ 77.53ರಷ್ಟು ಮತದಾನವಾಗಿದೆ. ಉತ್ತರ ಪ್ರದೇಶದಲ್ಲಿ ಕನಿಷ್ಠ ಶೇ 52.74ರಷ್ಟು ಮತದಾನವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.