ADVERTISEMENT

ಚಿಕ್ಕಣ್ಣ ನಟನೆಯ ‘ಲಕ್ಷ್ಮೀ ಪುತ್ರ’ ಫಸ್ಟ್ ಲುಕ್ ಅನಾವರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2026, 6:21 IST
Last Updated 16 ಜನವರಿ 2026, 6:21 IST
   

ಚಿಕ್ಕಣ್ಣ ನಟನೆಯ ‘ಲಕ್ಷ್ಮೀ ಪುತ್ರ’ ಚಿತ್ರದ ಫಸ್ಟ್ ಲುಕ್ ವಿಡಿಯೊವನ್ನು ‘ಡಿ ಬೀಟ್ಸ್ ಮ್ಯೂಸಿಕ್ ವರ್ಲ್ಡ್’ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಜಾತ್ರೆ, ಉತ್ಸವ, ಹಳ್ಳಿ ಸೊಗಡಿನ ಕಥೆಯನ್ನು ಆಧರಿಸಿದ ಈ ಚಿತ್ರದಲ್ಲಿ ನಟಿ ತಾರಾ ಅವರು ಲಕ್ಷ್ಮೀ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಲಕ್ಷ್ಮೀ ಪುತ್ರ'ನಾಗಿ ಚಿಕ್ಕಣ್ಣ ನಟಿಸಿದ್ದಾರೆ.

‘ಲಕ್ಷ್ಮೀ ಪುತ್ರ' ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಿದ ಚಿತ್ರತಂಡ, ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ ಎಂದಿದೆ.

ADVERTISEMENT

ಈ ಚಿತ್ರವನ್ನು ವಿಜಯ್ ಎಸ್.ಸ್ವಾಮಿ ನಿರ್ದೇಶನ ಮಾಡಿದ್ದಾರೆ. ಎಪಿ ಅರ್ಜುನ್ ಅವರು ಚಿತ್ರಕಥೆ, ಸಾಹಿತ್ಯ ಬರೆದಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ಗಿರೀಶ್ ಆರ್. ಗೌಡ ಅವರು ಛಾಯಾಚಿತ್ರಗ್ರಹಣ ನಿರ್ವಹಿಸಿದ್ದಾರೆ.

ನಟ ಕುರಿ ಪ್ರತಾಪ್, ಶಿವರಾಜ್‌ ಕೆ.ಆರ್‌.ಪೇಟೆ ಸೇರಿ ಇತರರು ತಾರಾಬಳಗದಲ್ಲಿದ್ದಾರೆ.

ಕನ್ನಡದ ಅನೇಕ ಸಿನಿಮಾಗಳಲ್ಲಿ ಹಾಸ್ಯನಟನಾಗಿ ಕಾಣಿಸಿಕೊಳ್ಳುತ್ತಿದ್ದ ಚಿಕ್ಕಣ್ಣ ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕನಾಗಿ ಕಾಣಿಸಿಕೊಂಡಿದ್ದರು. ‘ಲಕ್ಷ್ಮೀ ಪುತ್ರ' ಎರಡನೇ ಚಿತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.