ADVERTISEMENT

ಬೀಚ್‌ನಲ್ಲಿ ದಿಶಾ ಪಟಾನಿ: ಫೋಟೊಗೆ ಕಾಮೆಂಟ್ ಮಾಡಿದ ಟೈಗರ್ ಶ್ರಾಫ್ ತಾಯಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2021, 5:29 IST
Last Updated 15 ನವೆಂಬರ್ 2021, 5:29 IST
ದಿಶಾ ಪಟಾನಿ ಫೋಟೊಗೆ ಅಭಿಮಾನಿಗಳಿಂದ ಮೆಚ್ಚುಗೆ
ದಿಶಾ ಪಟಾನಿ ಫೋಟೊಗೆ ಅಭಿಮಾನಿಗಳಿಂದ ಮೆಚ್ಚುಗೆ   

ಬೆಂಗಳೂರು: ಬಾಲಿವುಡ್ ನಟಿ ದಿಶಾ ಪಟಾನಿಗೆ ಬೀಚ್ ಮತ್ತು ಪ್ರವಾಸ ಎನ್ನುವುದು ದಿನನಿತ್ಯದ ಕೆಲಸಗಳಲ್ಲಿ ಒಂದು ಎನ್ನುವಂತೆ ಆಗಿದೆ.

ದಿಶಾ ಪಟಾನಿ ಫೋಟೊಗಳಲ್ಲಿ ಬಹುತೇಕ ಬೀಚ್ ಇದ್ದೇ ಇರುತ್ತದೆ. ಜತೆಗೆ ಅವರ ಇನ್‌ಸ್ಟಾಗ್ರಾಂ ಫೋಟೊಗಳಿಗೆ ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ ಮತ್ತು ಕಾಮೆಂಟ್ ಮಾಡುತ್ತಾ ಇರುತ್ತಾರೆ.

ದಿಶಾ ಪಟಾನಿ ಅವರು ಭಾನುವಾರ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ADVERTISEMENT

ಈ ಫೋಟೊಗೆ ಟೈಗರ್ ಶ್ರಾಫ್ ತಾಯಿ ಆಯೇಷಾ ಶ್ರಾಫ್ ಹೃದಯದ ಎಮೋಜಿ ಬಳಸಿ ಕಾಮೆಂಟ್ ಮಾಡಿದ್ದಾರೆ.

ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇರುವಂತೆಯೇ, ದಿಶಾ ಫೋಟೊಗಳನ್ನು ಆಯೇಷಾ ಅವರು ಮೆಚ್ಚಿಕೊಳ್ಳುವುದು ಮತ್ತು ಕಾಮೆಂಟ್ ಮಾಡುವುದು ಕೂಡ ಇದಕ್ಕೆ ಹೆಚ್ಚಿನ ಪುಷ್ಟಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.