ಮೋಹನ್‌ಲಾಲ್ ಹಾಗೂ ಮಮ್ಮುಟ್ಟಿ ನಟನೆಯ ಬಹುನಿರೀಕ್ಷಿತ ಮಲಯಾಳಂ ಸಿನಿಮಾ ‘ಪೇಟ್ರಿಯಾಟ್’ ಏಪ್ರಿಲ್ 23ರಂದು ತೆರೆ ಕಾಣಲಿದೆ.
‘ಮಾಲಿಕ್‘, ‘ಟೇಕ್ ಆಫ್’ ಚಿತ್ರದಿಂದ ಖ್ಯಾತಿ ಪಡೆದ ಮಹೇಶ್ ನಾರಾಯಣನ್ ಅವರು ಪೇಟ್ರಿಯಾಟ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಂಟೋ ಜೋಸೆಫ್ ಫಿಲ್ಸ್ಮ್ ಸಂಸ್ಥೆ ನಿರ್ಮಿಸಿದೆ.
ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಗಡಿ ಕಾಯುವ ಸೈನಿಕ ಹಾಗೂ ಯುದ್ಧಕ್ಕೆ ಸಂಬಂಧಿಸಿದ ಕೆಲವು ತಂತಜ್ಞಾನದ ಕುರಿತಾಗಿ ತೋರಿಸಲಾಗಿದೆ.
ಸೇನಾಧಿಕಾರಿ ಪಾತ್ರದಲ್ಲಿ ಮೋಹನ್ ಲಾಲ್, ಫೈಟರ್ ಪೈಲಟ್ ಆಗಿ ನಟ ಫಹಾದ್ ಫಾಸಿಲ್ ಹಾಗೂ ನಯನತಾರಾ ಅವರು ನಟಿಸಿದ್ದಾರೆ.
ಯುದ್ಧದ ಭೀತಿ ಸಂದರ್ಭದಲ್ಲಿ ಸೇನಾಧಿಕಾರಿ, ಫೈಟರ್ ಪೈಲಟ್ ಕೂಡ ಯುದ್ಧ ಮಾಡಲು ಸಿದ್ಧರಾಗಿರುವುದನ್ನು ಟ್ರೇಲರ್‌ನಲ್ಲಿ ಕಾಣಬಹುದು
ನಿರ್ದೇಶಕ ಮಹೇಶ್ ನಾರಾಯಣನ್ ಅವರು ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಕಥಾ ನಾಯಕರ ಗುರಿ ‘23, 04, 26’ ಸಂಖ್ಯೆಗಳು ಆಗಿರುತ್ತವೆ. ಈ ಸಂಖ್ಯೆಯ ರೋಚಕಥೆ ಸಿನಿಮಾ ತೆರೆಕಂಡ ಮೇಲೆ ತಿಳಿಯಬೇಕಿದೆ.
ನಟಿ ನಯನತಾರಾ ಅವರು 2016ರಲ್ಲಿ ಬಿಡುಗಡೆಯಾದ ಪುತಿಯಾ ನಿಯಮಂ ಚಿತ್ರದ ಬಳಿಕ ಮತ್ತೆ ಮಮ್ಮುಟ್ಟಿ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.