ADVERTISEMENT

ಆಲಿಯಾ ಭಟ್ ಜಾಗಕ್ಕೆ ರಶ್ಮಿಕಾ: ಎನ್‌ಟಿಆರ್‌ಗೆ ಜೋಡಿಯಾಗಲಿರುವ ಕೊಡಗಿನ ಕುವರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಏಪ್ರಿಲ್ 2022, 9:38 IST
Last Updated 24 ಏಪ್ರಿಲ್ 2022, 9:38 IST
ಜ್ಯೂನಿಯರ್‌ ಎನ್‌ಟಿಆರ್ ಮತ್ತು ರಶ್ಮಿಕಾ ಮಂದಣ್ಣ
ಜ್ಯೂನಿಯರ್‌ ಎನ್‌ಟಿಆರ್ ಮತ್ತು ರಶ್ಮಿಕಾ ಮಂದಣ್ಣ   

ಹೈದರಾಬಾದ್‌: ತೆಲುಗು ನಟ ಜ್ಯೂನಿಯರ್‌ ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ ಚಿತ್ರದಲ್ಲಿ ‘ನ್ಯಾಷನಲ್‌ ಕ್ರಷ್‌’ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ ಎಂಬಮಾತುಗಳು ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿವೆ.

ಇತ್ತೀಚೆಗೆ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಎನ್‌ಟಿಆರ್‌ –ರಾಮ್‌ ಚರಣ್‌ ಅಭಿನಯದ ‘ಆರ್‌ಆರ್‌ಆರ್‌’ ಸಿನಿಮಾ ವಿಶ್ವದಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಆರ್‌ಆರ್‌ಆರ್‌’ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಎನ್‌ಟಿಆರ್‌, ಕೊರಟಾಲ ಶಿವ ನಿರ್ದೇಶನದ ಹೊಸ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ.

ಈ ಚಿತ್ರದಲ್ಲಿ ಎನ್‌ಟಿಆರ್‌ಗೆ ನಾಯಕಿಯಾಗಿ ಬಾಲಿವುಡ್‌ ಬೆಡಗಿ ಆಲಿಯಾ ಭಟ್‌ ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಅವರು ಅಭಿನಯಿಸುತ್ತಿಲ್ಲ. ಅವರ ಬದಲಿಗೆ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಇತ್ತೀಚೆಗೆ ತೆರೆಕಂಡಿದ್ದ ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್‌ –ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ’ ಸಿನಿಮಾ ಯಶಸ್ಸು ಗಳಿಸಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಸಖತ್‌ ಸದ್ದು ಮಾಡಿತ್ತು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.