
ಸದಾ ಸಿನಿಮಾ ಕೆಲಸದಲ್ಲಿ ಸಕ್ರೀಯರಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರು ಕೊಂಚ ವಿರಾಮ ತೆಗೆದುಕೊಂಡಿದ್ದು, ಸ್ನೇಹಿತೆಯರ ಜತೆ ಶ್ರೀಲಂಕಾ ಪ್ರವಾಸದಲ್ಲಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಪ್ರವಾಸದ ಚಿತ್ರಗಳನ್ನು ಹಂಚಿಕೊಂಡ ರಶ್ಮಿಕಾ ಅವರು, ‘ಚಿತ್ರೀಕರಣದ ಬಿಡುವು ಇದ್ದರಿಂದ ನನ್ನ ನೆಚ್ಚಿನ ಹುಡುಗಿಯರ ಜತೆ ಶ್ರೀಲಂಕಾದ ಸುಂದರ ಕ್ಷಣಗಳನ್ನು ಆನಂದಿಸಲು ಬಂದಿದ್ದೇವೆ. ನಮ್ಮ ಪ್ರವಾಸ ಚಿಕ್ಕದಾಗಿದ್ದರೂ ಸಾಕಷ್ಟು ಸಂತಸದ ಕ್ಷಣಗಳಿಗೆ ಸಾಕ್ಷಿಯಾಗಿದೆ ಎಂದು ಬರೆದಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಜತೆ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ನಟನೆ ಆರಂಭಿಸಿದ್ದ ನಟಿ ರಶ್ಮಿಕಾ ಮಂದಣ್ಣ ಅವರು ತೆಲುಗು, ತಮಿಳು, ಬಾಲಿವುಡ್‌ನ ಸಾಲು ಸಾಲು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.
ಬಳಿಕ ದರ್ಶನ್ ಅವರ ‘ಯಜಮಾನ’, ಪುನೀತ್ ರಾಜ್‌ಕುಮಾರ್ ಜತೆ ‘ಅಂಜನಿಪುತ್ರ’, ಧ್ರುವ ಸರ್ಜಾ ಅವರ ‘ಪೊಗರು’ ಚಿತದಲ್ಲಿ ನಟಿಸಿದ್ದರು. ‘ಪುಷ್ಪ‘, ‘ಅನಿಮಲ್‘, 'ಗೀತಾ ಗೋವಿಂದಂ, ‘ಡಿಯರ್ ಕಾಮ್ರೆಡ್‘ ಹಾಗೂ ಇತ್ತಿಚೇಗೆ ‘ಗರ್ಲ್ಫ್ ಫ್ರೆಂಡ್‘ ಸೇರಿದಂತೆ ಅನೇಕ ಬಹುಭಾಷಾ ಚಿತ್ರಗಳಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.