ADVERTISEMENT

ದೇವರಕೊಂಡ–ರಶ್ಮಿಕಾ ಮದುವೆ ವದಂತಿ: ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2026, 10:55 IST
Last Updated 2 ಫೆಬ್ರುವರಿ 2026, 10:55 IST
<div class="paragraphs"><p>ವಿಜಯ್‌ ದೇವರಕೊಂಡ–ರಶ್ಮಿಕಾ</p></div>

ವಿಜಯ್‌ ದೇವರಕೊಂಡ–ರಶ್ಮಿಕಾ

   

ಮುಂಬೈ: ನಟ ವಿಜಯ್‌ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಫೆಬ್ರುವರಿಯಲ್ಲಿ ಮದುವೆಯಾಗುತ್ತಿದ್ದಾರೆ. ಹೀಗಾಗಿ ಮದುವೆ ಸಿದ್ಧತೆ ಜೋರಾಗಿದೆ ಎಂಬ ವದಂತಿಗಳು ಸಿಕ್ಕಾಪಟ್ಟೆ ಹರಿದಾಡುತ್ತಿವೆ.

ಫೆಬ್ರುವರಿ 26ರಂದು ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಈ ಜೋಡಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ADVERTISEMENT

ಇತ್ತೀಚೆಗೆ ನಟಿ ಮಂದಣ್ಣ ವಿಮಾನ ನಿಲ್ಧಾಣದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಛಾಯಾಗ್ರಾಹಕರು ಮೇಡಂ, ನಮ್ಮನ್ನು ಆಹ್ವಾನನಿಸುವುದಿಲ್ಲವೇ? ಎಂದರು. ಇದಕ್ಕೆ ನಗುತ್ತಲೇ ಉತ್ತರಿಸಿದ ರಶ್ಮಿಕಾ, ಯಾವ ಕಾರಣಕ್ಕೆ ನಿಮ್ಮನ್ನು ಆಹ್ವಾನಿಸಬೇಕು ಎಂದರು. ಇದಕ್ಕೆ ಛಾಯಾಗ್ರಾಹಕರು ಮೇಡಂ, ನಿಮಗೆ ನಾನು ಹೇಳಿದ್ದು ಅರ್ಥವಾಗಿದೆ ಎಂದಾಗ, ಹಾ, ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗುತ್ತಿದೆ ಎಂದು ಹೇಳಿದ್ದರು.

ಛಾಯಾಗ್ರಾಹಕರು ಹಾಗೂ ರಶ್ಮಿಕಾ ಮಂದಣ್ಣ ನಡುವಿನ ಈ ಸಂಭಾಷಣೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ರಶ್ಮಿಕಾ ನಗುತ್ತಾ ಉತ್ತರಿಸಿದ್ದನ್ನು ಕಂಡು ನೆಟ್ಟಿಗರು ಮದುವೆಯಾಗುತ್ತಿರುವುದು ನಿಜ ಎನ್ನುವಂತಿದೆ ಎಂದು ಕಾಮೆಂಟ್‌ ಮಾಡಿದ್ದಾರೆ.

ಈ ತಾರಾ ಜೋಡಿ ಕಳೆದ ಆಕ್ಟೋಬರ್‌ನಲ್ಲಿ ಕುಟುಂಬದ ಮತ್ತು ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.