ADVERTISEMENT

ಯಶ್ ಅವರ ‘ಟಾಕ್ಸಿಕ್’ ಸೇರಿ ಈ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2026, 11:49 IST
Last Updated 3 ಜನವರಿ 2026, 11:49 IST
   

2025ರಲ್ಲಿ ಅನೇಕ ಸಿನಿಮಾಗಳು ವಿಶ್ವದಾದ್ಯಂತ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಕಂಡಿದ್ದವು. 2026ರಲ್ಲಿ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳ ಪಟ್ಟಿ ಇಲ್ಲಿದೆ

ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಚಿತ್ರ ಮಾರ್ಚ್ 19ಕ್ಕೆ ತೆರೆಗೆ ಬರಲು ಸಜ್ಜಾಗಿದೆ.

ರಣವೀರ್ ಸಿಂಗ್ ನಟನೆಯ 'ಧುರಂಧರ್‌’ ಡಿ.5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ವಿಶ್ವದಾದ್ಯಂತ ₹1000 ಕೋಟಿ ಗಳಿಸಿತ್ತು. ಇದರ ಮುಂದುವರಿದ ಭಾಗ 'ಧುರಂಧರ್‌2’ ಮಾರ್ಚ್ 19ರಂದು ಬಿಡುಗಡೆಯಾಗಲಿದೆ.

ADVERTISEMENT

ಸಲ್ಮಾನ್ ಖಾನ್ ನಟನೆಯ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರವು ಏಪ್ರಿಲ್ 17ರಂದು, ರಾಮ್ ಚರಣ್ ಹಾಗೂ ಜಾಹ್ನವಿ ಕಪೂ‌ರ್ ನಟನೆಯ 'ಪೆದ್ದಿ' ಸಿನಿಮಾ ಮಾರ್ಚ್ 27ಕ್ಕೆ ತೆರೆಗೆ ಬರಲಿದೆ.

ಹೆಚ್ಚಿನ ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟ ನಿತೇಶ್ ತಿವಾರಿ ನಿರ್ದೇಶನ ರಣಬೀರ್ ಕಪೂರ್, ಯಶ್ ನಟನೆಯ ‘ರಾಮಾಯಣ’ ಚಿತ್ರ ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗಲಿದೆ.

ಇನ್ನು ಉಳಿದಂತೆ, ಶಾರುಖ್​ ಖಾನ್ ಅವರ ‘ಕಿಂಗ್’, ಅಜಯ್ ದೇವಗನ್ ನಟಿಸಿರುವ 'ದೃಶ್ಯಂ 3', ಅಕ್ಷಯ್ ಕುಮಾರ್‌ ನಟನೆಯ ‘ವೆಲ್‌ಕಮ್‌ ಟು ದ ಜಂಗಲ್’ ಸೇರಿ ಅನೇಕ ಚಿತ್ರಗಳು ಈ ವರ್ಷ ವಿಶ್ವದಾದ್ಯಂತ ಬಿಡುಗಡೆಯಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.