ADVERTISEMENT

ರೆಸಿಪಿ| ದೀಪಾವಳಿ ಹಬ್ಬದ ವಿಶೇಷ: ಮನೆಯಲ್ಲೇ ಬೇಸನ್ ಲಡ್ಡು ಹೀಗೆ ತಯಾರಿಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2025, 7:54 IST
Last Updated 10 ಅಕ್ಟೋಬರ್ 2025, 7:54 IST
   

ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತೇವೆ. ಹಾಗೆಯೇ ಹಬ್ಬದ ದಿನದಂದು ವಿವಿಧ ಬಗೆಯ ಸಿಹಿ ತಿನಿಸುಗಳನ್ನು ಮಾಡುವುದು ಸಾಮಾನ್ಯ ಸಂಗತಿ. ಈ ಬಾರಿಯ ದೀಪಾವಳಿಗೆ ಮನೆಯಲ್ಲಿಯೇ ಸುಲಭವಾಗಿ ರುಚಿಕರವಾದ ಬೇಸನ್ ಲಾಡು ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

ಸಿಹಿ ಖಾದ್ಯಗಳಲ್ಲಿ ಒಂದಾದ ಲಾಡನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಲಾಡುಗಳು ದೊರೆಯುತ್ತವೆ. ಆದರೆ ಮನೆಯಲ್ಲಿಯೇ ತಯಾರು ಮಾಡಿ ಸವಿಯುವುದು ಆರೊಗ್ಯಕ್ಕೂ ಒಳ್ಳೆಯದು. 

ಬೇಸನ್ ಲಾಡು ಮಾಡಲು ಬೇಕಾಗುವ ಸಾಮಗ್ರಿಗಳು: 

ADVERTISEMENT
  • ಕಡಲೆ ಹಿಟ್ಟು - 2 ಬಟ್ಟಲು

  • ತುಪ್ಪ - 1 ಕಪ್

  • ಸಕ್ಕರೆ - 1 ಕಪ್

  • ಗೋಡಂಬಿ - 10 ಪೀಸ್

  • ಬಾದಾಮಿ - 10 ಪೀಸ್ 

  • ಪಿಸ್ತಾ

  • ಏಲಕ್ಕಿ ಪುಡಿ -1 ಚಮಚ

ಮಾಡುವ ವಿಧಾನ?  

  • ಮೊದಲಿಗೆ ಒಂದು ಬೇಸನ್‌ ತೆಗೆದುಕೊಳ್ಳಿ. ಅದರಲ್ಲಿ ತುಪ್ಪ ಹಾಕಿ, ತುಪ್ಪ ಬಿಸಿಯಾದ ಮೇಲೆ ಕಡಲೆ ಹಿಟ್ಟನ್ನು ಸೇರಿಸಿ ಸಣ್ಣ ಉರಿಯಲ್ಲಿ 12 ರಿಂದ 13 ನಿಮಿಷಗಳ ಕಾಲ ಚೆನ್ನಾಗಿ ಕಾಯಿಸಿ.

  • ಹಿಟ್ಟು ಕಂದು ಬಣ್ಣಕ್ಕೆ ತಿರುಗಿದ ನಂತರ, ಸಣ್ಣದಾಗಿ ಕತ್ತರಿಸಿಟ್ಟುಕೊಂಡಿದ್ದ ಗೋಡಂಬಿ ಮತ್ತು ಬಾದಾಮಿಯನ್ನು ಹಿಟ್ಟಿನೊಂದಿಗೆ ಮಿಶ್ರಣ ಮಾಡಿ. 

  • ಬಳಿಕ ಬೇಸನ್‌ಗೆ ಸ್ವಲ್ಪ ನೀರು ಹಾಕಿ ಪುನಃ ಸಣ್ಣ ಉರಿಯಲ್ಲಿ ಬೇಯಿಸಿ. ಸ್ವಲ್ಪ ಸಮಯದ ಬಳಿಕ ಹಿಟ್ಟು ಹದವಾಗುತ್ತದೆ.

  • ನಂತರ ಒಂದು ತಟ್ಟೆಗೆ ಹಿಟ್ಟನ್ನು ಹಾಕಿ ಚೆನ್ನಾಗಿ ಆರಲು ಬಿಡಿ. ನಂತರ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಅದಕ್ಕೆ ಸೇರಿಸಿ.

  • ಬಳಿಕ ‌ಜಾಮೂನಿನ ಗಾತ್ರದಂತೆ ಉಂಡೆ ಕಟ್ಟಿರಿ. ನಂತರ ಕೊನೆಗೆ ‌ಉಂಡೆಯ ಮೇಲೆ ಗೋಡಂಬಿ ಮತ್ತು ಬಾದಾಮಿಯನ್ನು ಇಡಿ. ಬೇಸನ್ ಲಾಡು ಸವಿಯಲು ಸಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.