
ಗೆಟ್ಟಿ ಚಿತ್ರ
ಮನುಷ್ಯನಿಗೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಪ್ರತಿ 7 ಮಂದಿ ಯುವಜನರಲ್ಲಿ ಒಬ್ಬರು ಮಾನಸಿಕ ಖಿನ್ನತೆಯಿಂದ (Depression) ಬಳಲುತ್ತಿದ್ದಾರೆ. ಶೇ 80ರಷ್ಟು ಯುವಜನರು ಮಾನಸಿಕ ಸಮಸ್ಯೆಯನ್ನು ಹೊಂದಿರುತ್ತಾರೆ ಎಂದು ಮನೋವಿಜ್ಞಾನ ಹೇಳುತ್ತದೆ.
ಯುವಜನರಲ್ಲಿ ಖಿನ್ನತೆ ಹೆಚ್ಚಾಗಲು ಕಾರಣಗಳು, ಲಕ್ಷಣಗಳು ಹಾಗೂ ದೂರ ಮಾಡುವುದು ಹೇಗೆ ಎಂಬುದನ್ನು ಮನೋವಿಜ್ಞಾನದ ಪ್ರಾಧ್ಯಾಪಕಿ ಕಾವ್ಯಾ ಅವರು ತಿಳಿಸಿದ್ದಾರೆ.
ಖಿನ್ನತೆಗೆ ಕಾರಣಗಳೇನು?
ಸ್ಪರ್ಧಾತ್ಮಕ ಜಗತ್ತು ಕೂಡಾ ಯುವಜನರ ಒತ್ತಡಕ್ಕೆ ಕಾರಣವಾಗಿದೆ.
ಸಮಾಜದೊಂದಿಗೆ ತಮ್ಮನ್ನು ತಾವು ಹೋಲಿಕೆ ಮಾಡಿಕೊಳ್ಳುವುದು.
ಅತಿಯಾದ ನಿರೀಕ್ಷೆ ಹಾಗೂ ಗುರಿ ಸಾಧಿಸುವ ಒತ್ತಡ.
ಸಂಬಂಧಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದು.
ಸೋಲು, ಪ್ರೇಮ ವೈಫಲ್ಯ ಹಾಗೂ ಉದ್ಯೋಗದ ಅಸ್ಥಿರತೆ.
ನಿದ್ರಾಹೀನತೆ, ವಿಶ್ರಾಂತಿಯ ಕೊರತೆ ಹಾಗೂ ಆತ್ಮಸಂತೃಪ್ತಿಯ ಕೊರತೆ.
ರೋಗ ವರ್ಗೀಕರಣಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಂಸ್ಥೆ (ICD)ಯ ವರದಿಯ ಪ್ರಕಾರ, ಖಿನ್ನತೆ ಪತ್ತೆ ಮಾಡಲು ವ್ಯಕ್ತಿಯು ಕನಿಷ್ಠ 2 ವಾರಗಳ ಕಾಲ ಈ ಕೆಳಗಿನ ಲಕ್ಷಣಗಳನ್ನು ಹೊಂದಿರಬೇಕು ಎಂದು ಹೇಳುತ್ತದೆ.
ನಿರಂತರ ದುಃಖ ಅಥವಾ ಮಾನಸಿಕ ಖಿನ್ನತೆ.
ಆಸಕ್ತಿ ಕ್ಷೀಣಿಸುವುದು ಮತ್ತು ಉತ್ಸಾಹದ ಕೊರತೆ.
ಸಾಮಾನ್ಯ ಲಕ್ಷಣಗಳು:
ಆತ್ಮನಿಂದನೆ ಹಾಗೂ ಅತಿಯಾದ ಅಪರಾಧ ಭಾವನೆ ಮೂಡುವುದು.
ನಿದ್ರಾಹೀನತೆ, ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸವಾಗುವುದು.
ಗಮನ ಒಂದೆಡೆ ಕೇಂದ್ರಿಕರಿಸಲು ಸಾಧ್ಯವಾಗದಿರುವುದು.
ಭವಿಷ್ಯದ ಕುರಿತು ನಿರಾಶೆ ವ್ಯಕ್ತ ಪಡಿಸುವುದು.
ಆತ್ಮಹತ್ಯೆ ಆಲೋಚನೆ ಮೂಡುವುದು.
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗಗಳು:
ಧ್ಯಾನ, ಯೋಗ ಮತ್ತು ವ್ಯಾಯಾಮ ಮಾಡುವುದು.
ನಿಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. (ಮಾತನಾಡುವುದು ಚಿಕಿತ್ಸೆಯ ಮೊದಲ ಹೆಜ್ಜೆ)
ಇತರರೊಂದಿಗೆ ಹೋಲಿಕೆಯ ಸ್ವಭಾವ ಬಿಟ್ಟು, ತಮ್ಮನ್ನು ತಾವು ಪ್ರೀತಿಸುವುದು.
ಸರಿಯಾದ ನಿದ್ರೆ, ಪೌಷ್ಟಿಕ ಆಹಾರ ಮತ್ತು ಸಮಯ ನಿರ್ವಹಣೆಗೆ ಆದ್ಯತೆ ನೀಡಿ.
ಖಿನ್ನತೆ ಹೀಗೆ ಮುಂದುವರಿದರೆ ಮನೋವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎಂದು ಮನೋವಿಜ್ಞಾನದ ಪ್ರಾಧ್ಯಾಪಕಿ ಕಾವ್ಯಾ ಅವರು ಹೇಳುತ್ತಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.