ಭಾರತದ ಯುವಜನತೆ ಗಂಭೀರವಾದ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಯುವಕರ ಮಾನಸಿಕ ಆರೋಗ್ಯ ಸ್ಥಿತಿಗಿಂತಲೂ 55 ವರ್ಷ ಮೇಲ್ಪಟ್ಟವರ ಮಾನಸಿಕ ಆರೋಗ್ಯ ಉತ್ತಮವಾಗಿದೆ ಎಂದು ‘ಗ್ಲೋಬಲ್ ಮೈಂಡ್ ಹೆಲ್ತ್‘ ವರದಿ ನೀಡಿದೆ.
‘ಗ್ಲೋಬಲ್ ಮೈಂಡ್ ಹೆಲ್ತ್ 2025ರ ವರದಿ ಪ್ರಕಾರ, ಮಾನಸಿಕ ಆರೋಗ್ಯ ಸಮೀಕ್ಷೆಯಲ್ಲಿ 84 ದೇಶಗಳ ಪೈಕಿ ಭಾರತದ ಯುವಕರು 33 ಅಂಕಗಳನ್ನು ಗಳಿಸಿ 60ನೇ ಸ್ಥಾನ ಪಡೆದಿದ್ದಾರೆ. 55 ವರ್ಷ ಮೇಲ್ಪಟ್ಟವರು 96 ಅಂಕಗಳನ್ನು ಗಳಿಸಿ 49ನೇ ಸ್ಥಾನದಲ್ಲಿದ್ದಾರೆ. ಈ ಸಮಿಕ್ಷೆಯಲ್ಲಿ ಜಗತ್ತಿನಾದ್ಯಾಂತ ವಯಸ್ಕರ ಮಾನಸಿಕ ಆರೋಗ್ಯವು ಸ್ಥಿರತೆಯಲ್ಲಿದೆ ಎಂದು ವರದಿ ಹೇಳಿದೆ.
ಯುವಕರ ಮಾನಸಿಕ ಆರೋಗ್ಯ ಕುಗ್ಗಲು ಕಾರಣಗಳು
ಕುಟುಂಬದ ಪ್ರಭಾವ: ಕುಟುಂಬದ ಜೊತೆ ಭಾವನಾತ್ಮಕ ಸಂಬಂಧ ಹೊಂದಿಲ್ಲದಿದ್ದರೆ ಅಂತವರು ಮಾನಸಿಕ ಸಮಸ್ಯೆಗೆ ಒಳಗಾಗುತ್ತಾರೆ.
ಆಹಾರ ಪದ್ಧತಿ: ಯುವಕರು ಹೆಚ್ಚಾಗಿ ಪೌಷ್ಟಿಕಾಂಶ ರಹಿತ ಆಹಾರ ಸೇವನೆ ಮಾಡುವುದರಿಂದ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಸ್ಮಾರ್ಟ್‌ಫೋನ್ ಬಳಕೆ: ಇತ್ತೀಚಿನ ದಿನಗಳಲ್ಲಿ ಅನೇಕರು ಚಿಕ್ಕ ವಯಸ್ಸಿನಲ್ಲೇ ಸ್ಮಾರ್ಟ್‌ಫೋನ್, ಕಂಪ್ಯೂಟರ್ ಬಳಕೆ ಮಾಡುವುದು ಕೂಡ ಮಾನಸಿಕ ಆರೋಗ್ಯಕ್ಕೆ ಅಡ್ಡಿ ಉಂಟುಮಾಡುತ್ತದೆ.
ಹೆಚ್ಚಿನ ಆದಾಯ ಗಳಿಕೆಕ್ಕಿಂತ ಕುಟುಂಬದ ಜೊತೆ ಉತ್ತಮ ಬಾಂಧವ್ಯ ಹೊಂದುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದು ವರದಿ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.