ADVERTISEMENT

ಹೊಸ ವರ್ಷಾಚರಣೆ: ನಿಮ್ಮ ಸಂಭ್ರಮ ಹೆಚ್ಚಿಸಲು ಹೇಳಿ ಮಾಡಿಸಿದ ರೆಸಾರ್ಟ್‌ಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಡಿಸೆಂಬರ್ 2025, 7:38 IST
Last Updated 26 ಡಿಸೆಂಬರ್ 2025, 7:38 IST
   

2026ರ ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. 2025ಕ್ಕೆ ವಿದಾಯ ಹೇಳಿ ಹೊಸ ವರ್ಷ ಬರಮಾಡಿಕೊಳ್ಳಲು ಅನೇಕರು ಕಾದು ಕುಳಿತಿದ್ದಾರೆ. ಇನ್ನೂ ಕೆಲವರು ಸುಧೀರ್ಘ ರಜೆ ಪಡೆದು ವಿಶೇಷ ಸ್ಥಳಗಳಿಗೆ ತೆರಳಿ ಸಂಭ್ರಮಿಸುತ್ತಾರೆ. ಹಾಗಿದ್ದರೆ, ಕರ್ನಾಟಕದಲ್ಲಿ ಹೊಸ ವರ್ಷಾಚರಣೆಗೆ ಉತ್ತಮ ಸ್ಥಳಗಳು ಯಾವುವು ಎಂಬುದನ್ನು ತಿಳಿಯೋಣ.

<div class="paragraphs"><p>ಚಿತ್ರ ಕೃಪೆ:&nbsp;ಕ್ಯಾಲಮಂಡಿನ್ ಬಂಗಲೆ</p><p><br></p></div>

ಕ್ಯಾಲಮಂಡಿನ್ ಬಂಗಲೆ

ಕ್ಯಾಲಮಂಡಿನ್ ಬಂಗಲೆ, ಕೊಡಗು:

ADVERTISEMENT

ಮಂಜು ಮುಸುಕಿದ ವಾತಾವರಣ ಹಾಗೂ ಕಾಫಿ ತೋಟಗಳಿಗೆ ಪ್ರಸಿದ್ಧವಾಗಿರುವ ಕೊಡಗು, ಸುಂದರ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ. ಕಾಫಿ ತೋಟಗಳ ನಡುವೆ ಕ್ಯಾಲಮಂಡಿನ್ ಬಂಗಲೆ ಇದೆ. ಈ ಬಂಗಲೆಯಲ್ಲಿ 5 ಮಲಗುವ ಕೋಣೆಗಳಿವೆ. ಈ ಬಂಗಲೆ ಹಳೆಯ ಮಾದರಿಯಲ್ಲಿದ್ದು, ರಾಜ ವೈಭವದ ಅನುಭವ ನೀಡುತ್ತದೆ. 

ಈ ಬಂಗಲೆಗೆ ಮತ್ತಿಗೋಡು ಆನೆ ಶಿಬಿರದಿಂದ 20 ನಿಮಿಷಗಳಲ್ಲಿ ತಲುಪಬಹುದು. ಬಿಸಿಬಿಸಿ ಕಾಫಿಯೊಂದಿಗೆ ಪ್ರಕೃತಿಯ ಜೊತೆಗೆ ಕಾಲ ಕಳೆಯಬಹುದು. ಬಂಗಲೆಯ ಕಲಾಕೃತಿ ಹಾಗೂ ಚಿತ್ರಕಲೆಗಳು ಮನಸ್ಸಿಗೆ ಮುಧ ನೀಡುತ್ತವೆ. ಜನಜಂಗುಳಿಯಿಂದ ದೂರ ಇರಲು ಬಯಸುವವರು ವರ್ಷಾಂತ್ಯಕ್ಕೆ ಈ ಸ್ಥಳಕ್ಕೆ ಭೇಟಿ ನೀಡಬಹುದು. 

ಸುರಭಿ ವಿಲ್ಲಾ

ಸುರಭಿ ವಿಲ್ಲಾ, ಬೆಂಗಳೂರು:

ಬೆಂಗಳೂರಿಗರಿಗೆ ಈ ರೆಸಾರ್ಟ್‌ ಉತ್ತಮ ಆಯ್ಕೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ 30 ನಿಮಿಷ ಪ್ರಯಾಣಿಸಿದರೆ ಈ  ರೆಸಾರ್ಟ್‌ಗೆ ತಲುಪಬಹುದು. ಇದು ಅರಣ್ಯ ಪ್ರದೇಶದ ನಡುವೆ ಇರುವ ಈ ವಿಲ್ಲಾದಲ್ಲಿ 4 ಮಲಗುವ ಕೋಣೆಗಳಿವೆ. ಪ್ರಶಾಂತವಾದ ಈ ಸ್ಥಳದಲ್ಲಿ ಈಜುಕೊಳ, 14 ಆಸನಗಳ ಹೋಮ್ ಥಿಯೇಟರ್, ಕ್ರೀಡೆಗಳನ್ನು ಆಡಲು ವಿಸ್ತಾರವಾದ ಮೈದಾನವಿದೆ. ಸಂಜೆಯ ಸೂರ್ಯಾಸ್ತವನ್ನು ಕೂಡ ವೀಕ್ಷಣೆ ಮಾಡಬಹುದು.  

ತಂಜಾವೂರು

ತಂಜಾವೂರು, ಸ್ಯಾಫ್ರನ್‌ಸ್ಟೇಸ್, ಕೂರ್ಗ್:

ಹಳೆಯದಾದ ರೆಸಾರ್ಟ್‌ ಕೂರ್ಗ್‌ನಲ್ಲಿದೆ. ಇದರಲ್ಲಿ 5 ಮಲಗುವ ಕೋಣೆಗಳಿವೆ. ಈ ರೆಸಾರ್ಟ್‌ ಪ್ರಕೃತಿಯ ನಡುವೆ ಕುಟುಂಬದೊಂದಿಗೆ ಹೊಸ ವರ್ಷಾಚರಣೆಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ನೈಸರ್ಗಿಕ ಜಲಮೂಲಗಳಾದ ಜರಿಗಳು ವಿಭಿನ್ನ ಅನುಭವ ನೀಡುತ್ತವೆ.  

ಕಬಿನ್ ಟಸ್ಕರ್, ಥಾಲಿ

ಕಬಿನ್ ಟಸ್ಕರ್, ಥಾಲಿ ಕೃಷ್ಣಗಿರಿ: 

ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿರುವ 3 ಕೋಣೆಗಳುಳ್ಳ, ವಿಲ್ಲಾವಾದ ಕ್ಬಿನ್ ಟಸ್ಕರ್‌ನಲ್ಲಿ ಐಷಾರಾಮಿ ಅನುಭವ ಪಡೆಯಬಹುದು. ಕಾವೇರಿ ವನ್ಯಜೀವಿ ಅಭಯಾರಣ್ಯದ ಸಮೀಪವಿರುವ ಈ ವಿಲ್ಲಾ ಮಾವಿನ ತೋಟದ ನಡುವೆ ಇದೆ. ಇದು ಹೊಸ ವರ್ಷದ ಸಂಭ್ರಮಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ.

ಕೂರ್ಗ್ ವೈಲ್ಡರ್ನೆಸ್ ರೆಸಾರ್ಟ್ & ಸ್ಪಾ

ಕೂರ್ಗ್ ವೈಲ್ಡರ್‌ನೆಸ್ ರೆಸಾರ್ಟ್ ಮತ್ತು ಸ್ಪಾ

ಕೂರ್ಗ್‌ನಿಂದ 3 ಕಿ.ಮೀ ದೂರದಲ್ಲಿದೆ. ಭವ್ಯ ಬೆಟ್ಟಗಳ ಹೃದಯಭಾಗದಲ್ಲಿರುವ ‘ವೈಲ್ಡರ್ನೆಸ್ ರೆಸಾರ್ಟ್ ಅಂಡ್ ಸ್ಪಾ’ ಅದ್ಭುತವಾದ ನೈಸರ್ಗಿಕ ಸೌಂದರ್ಯ ಮತ್ತು ಶಾಂತ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಹೊಸ ವರ್ಷಾಚರಣೆ ಜೊತೆಗೆ ವಿಶ್ರಾಂತಿ ಪಡೆಯಲು ಇಲ್ಲಿಗೆ ಭೇಟಿ ನೀಡುವುದು ಉತ್ತಮ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.