ADVERTISEMENT

‘ಇಂಡಿಯಾ’ ಬಣದಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು: RJD ಪ್ರಸ್ತಾಪ ತಿರಸ್ಕರಿಸಿದ CPI

ಶಮಿನ್‌ ಜಾಯ್‌
Published 7 ಅಕ್ಟೋಬರ್ 2025, 7:19 IST
Last Updated 7 ಅಕ್ಟೋಬರ್ 2025, 7:19 IST
<div class="paragraphs"><p>ಇಂಡಿಯಾ ಬಣದ ನಾಯಕರು</p></div>

ಇಂಡಿಯಾ ಬಣದ ನಾಯಕರು

   

–ಪಿಟಿಐ ಚಿತ್ರ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಮುಹೂರ್ತ ನಿಗದಿಪಡಿಸಿದೆ. ನವೆಂಬರ್ 6 ಹಾಗೂ 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ನಡುವೆ ನೇರ ಹಣಾಹಣಿಗೆ ಕಣ ಸಜ್ಜಾಗಿದೆ.

ADVERTISEMENT

ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಪಿಐ (ಎಂಎಲ್‌) ಪಕ್ಷವು ಆರ್‌ಜೆಡಿಯ ಸೀಟು ಹಂಚಿಕೆ ಪ್ರಸ್ತಾಪವನ್ನು ತಿರಸ್ಕರಿಸಿದ ಬೆನ್ನಲೇ ಇಂಡಿಯಾ ಬಣದಲ್ಲಿ ಬಿಕ್ಕಟ್ಟು ಉಂಟಾಗಿದೆ ಎಂದು ವರದಿಯಾಗಿದೆ.

ಸೀಟು ಹಂಚಿಕೆ ಸಂಬಂಧ ಆರ್‌ಜೆಡಿ ನಾಯಕತ್ವದ ವಿರುದ್ಧ ಸಿಪಿಐ (ಎಂಎಲ್‌) ಅಸಮಾಧಾನ ವ್ಯಕ್ತಪಡಿಸಿದೆ. ಜತೆಗೆ, 30 ಸ್ಥಾನಗಳನ್ನು ಒಳಗೊಂಡ ಹೊಸ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.

2020ರಲ್ಲಿ ಸಿಪಿಐ (ಎಂಎಲ್‌) ಸ್ಪರ್ಧಿಸಿದ 19 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಹೆಚ್ಚಿನ ಸ್ಥಾನಗಳನ್ನು ನಿರೀಕ್ಷಿಸುತ್ತಿದೆ. ಹಾಗೆಯೇ ಮೈತ್ರಿಯು ಸೀಟು ಹಂಚಿಕೆ ಸಂಬಂಧ ಆರ್‌ಜೆಡಿ ತೆಗೆದುಕೊಳ್ಳುವ ನಿರ್ಧಾರವನ್ನು ಅವಲಂಬಿಸಿರುತ್ತದೆ ಎಂದು ಸಿಪಿಐ (ಎಂಎಲ್‌) ಮೂಲಗಳು ತಿಳಿಸಿವೆ.

‘ನಾವು ಈ ಬಾರಿ 30 ಸ್ಥಾನಗಳಲ್ಲಿ ಸ್ಪರ್ಧಿಸಲು ಎದುರು ನೋಡುತ್ತಿದ್ದೇವೆ. ಪಕ್ಷದ ಘನತೆಯ ಬಗ್ಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಸಿಪಿಐ (ಎಂಎಲ್‌) ನಾಯಕರೊಬ್ಬರು ‘ಡೆಕ್ಕನ್‌ ಹೆರಾಲ್ಡ್‌’ಗೆ ತಿಳಿಸಿದ್ದಾರೆ.

‘ನಮಗೆ ಸೀಟುಗಳನ್ನು ನೀಡುವುದು ಎಂದರೇ ಗೆಲುವು ಖಚಿತ ಎಂದರ್ಥ. ಆಶ್ಚರ್ಯಕರ ಸಂಗತಿಯೆಂದರೆ ಆರ್‌ಜೆಡಿ ಅದನ್ನು ಅರ್ಥಮಾಡಿಕೊಳ್ಳುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.