ADVERTISEMENT

ಭಾರತಕ್ಕೆ ಎಷ್ಟು ಯುದ್ಧ ವಿಮಾನ ನಷ್ಟ? ಪ್ರಧಾನಿ ಶರಣಾಗಿದ್ದು ಯಾರಿಗೆ?: ಕಾಂಗ್ರೆಸ್

ಪಿಟಿಐ
Published 28 ಜುಲೈ 2025, 13:26 IST
Last Updated 28 ಜುಲೈ 2025, 13:26 IST
<div class="paragraphs"><p>ಗೌರವ್ ಗೊಗೋಯಿ</p></div>

ಗೌರವ್ ಗೊಗೋಯಿ

   

(ಪಿಟಿಐ ಚಿತ್ರ)

ನವದೆಹಲಿ: 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯಲ್ಲಿ ಭಾರತದ ಎಷ್ಟು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಮತ್ತು ಪಾಕಿಸ್ತಾನದ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಯಾರ ಮುಂದೆ ಶರಣಾಗಿದ್ದರು ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ADVERTISEMENT

ಲೋಕಸಭೆಯಲ್ಲಿ ಆಪರೇಷನ್ ಸಿಂಧೂರು ಕುರಿತು ಇಂದು (ಸೋಮವಾರ) ನಡೆದ ಚರ್ಚೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕರು, ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಉಂಟಾದ ಭದ್ರತಾ ಲೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊಣೆ ಹೊರಬೇಕು ಎಂದು ಒತ್ತಾಯಿಸಿದ್ದಾರೆ.

'ಸರ್ಕಾರದ ಪ್ರಕಾರ ಪಾಕ್ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುವುದು ಭಾರತದ ಇರಾದೆಯಾಗಿರಲಿಲ್ಲ. ಹಾಗಿದ್ದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವುದಾದರೂ ಯಾವಾಗ' ಎಂದು ಲೋಕಸಭೆಯ ಕಾಂಗ್ರೆಸ್‌ನ ಉಪ ನಾಯಕ ಗೌರವ್ ಗೊಗೋಯಿ ಪ್ರಶ್ನಿಸಿದ್ದಾರೆ.

'ವ್ಯಾಪಾರ ವಿಷಯವನ್ನು ಮುಂದಿಟ್ಟುಕೊಂಡು ಭಾರತ ಹಾಗೂ ಪಾಕಿಸ್ತಾನ ನಡುವೆ ಕದಮ ವಿರಾಮದ ಒಪ್ಪಂದ ಏರ್ಪಟ್ಟಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕನಿಷ್ಠ 26 ಸಲ ಹೇಳಿಕೆ ನೀಡಿದ್ದಾರೆ. ಐದರಿಂದ ಆರು ಯುದ್ಧ ವಿಾನ ನಷ್ಟವಾಗಿದೆ ಎಂದೂ ಟ್ರಂಪ್ ಹೇಳಿದ್ದಾರೆ. ನಿಜಕ್ಕೂ ಎಷ್ಟು ಯುದ್ಧ ವಿಮಾನ ನಷ್ಟವಾಗಿದೆ ಎಂಬುದಕ್ಕೆ ಸ್ಪಷ್ಟವಾಗಿ ತಿಳಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.

'ಈ ಮಾಹಿತಿ ಕೇವಲ ನಾಗರಿಕರಿಗಷ್ಟೇ ಅಲ್ಲ, ಯೋಧರಿಗೂ ಪ್ರಾಮುಖ್ಯವೆನಿಸುತ್ತದೆ. ಅವರ ಮುಂದೆಯೂ ಸುಳ್ಳನ್ನು ಹೇಳಲಾಗುತ್ತಿದೆ' ಎಂದು ಅವರು ಆರೋಪಿಸಿದ್ದಾರೆ.

'ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ, ಪಾಕಿಸ್ತಾನ ಮತ್ತೆ ದಾಳಿ ನಡೆಸಿದರೆ ಮುಂದುವರಿಯಲಿದೆ ಎಂದು ಸರ್ಕಾರ ಹೇಳುತ್ತದೆ. ಹಾಗಾದರೆ ಇದು ಹೇಗೆ ಯಶ ಕಾಣುತ್ತದೆ? ನಮ್ಮ ಉದ್ದೇಶ ಯುದ್ಧವಲ್ಲ ಎಂದು ಅವರೇ ಹೇಳುತ್ತಾರೆ. ಮತ್ತೇನು? ಪಾಕ್ ಆಕ್ರಮಿತ ಪ್ರದೇಶವನ್ನು ಯಾವಾಗ ಮರಳಿ ಪಡೆಯುತ್ತೇವೆ? ಈವಾಗ ಅಲ್ಲದಿದ್ದರೆ ಇನ್ನೆಂದು? ನಿಮ್ಮ ಅಧಿಕಾರದ ಅವಧಿಯಲ್ಲೇ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ನಡೆದಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.