ಮತದಾನ ( ಚಿತ್ರ ಕೃಪೆ istock)
ದೆಹಲಿ ವಿಧಾನಸಭೆ ಚುನಾವಣೆಗೆ ಬುಧವಾರ ಬೆಳಿಗ್ಗೆ 7ರಿಂದ ಮತದಾನ ಆರಂಭವಾಗಿದ್ದು ಸಂಜೆ 6ರವರೆಗೆ ಮತದಾನ ನಡೆಯಲಿದೆ. ಪ್ರಮುಖವಾಗಿ ಆಮ್ ಆದ್ಮಿ ಪಕ್ಷ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನದ ಕ್ಷಣ ಕ್ಷಣದ ಮಾಹಿತಿಯ ವಿವರ ಇಲ್ಲಿದೆ.
ಪ್ರಮುಖಾಂಶಗಳು...
ಬೆಳಿಗ್ಗೆ 7ರಿಂದ ಆರಂಭವಾದ ಮತದಾನ ಸಂಜೆ 6ರವರೆಗೆ ನಡೆಯಲಿದೆ.
* ಮತದಾನಕ್ಕಾಗಿ ಚುನಾವಣೆ ಆಯೋಗವು 13,766 ಮತಗಟ್ಟೆಗಳನ್ನು ತೆರೆದಿದೆ.
* ಶಾಂತಿಯುತ ಮತದಾನಕ್ಕಾಗಿ ಅರೆ ಸೇನಾ ಪಡೆಯ 220 ತುಕಡಿ, 35,626 ಪೊಲೀಸರು, ಗೃಹ ರಕ್ಷಕ ದಳದ 19 ಸಾವಿರ ಸಿಬ್ಬಂದಿ ಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
* ಎಎಪಿ ಶಾಸಕ ಹಾಗೂ ಅಭ್ಯರ್ಥಿ ಅಮಾನತುಲ್ಲಾ ಖಾನ್ ವಿರುದ್ಧ ದೆಹಲಿ ಪೊಲೀಸರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಪ್ರಕರಣ ದಾಖಲಿಸಿದ್ದಾರೆ.
* ದೆಹಲಿ ವಿಧಾನಸಭಾ ಚುನಾವಣೆ 2025: 92 ವರ್ಷದ ವೃದ್ಧೆಯೊಬ್ಬರು ತಮ್ಮ ಮಗ ಮತ್ತು ಸೊಸೆಯೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು...
* ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ನಿರ್ಮಾಣ್ ಭವನದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
* ದೆಹಲಿ ಮುಖ್ಯಮಂತ್ರಿ ಅತಿಶಿ ಮತದಾನ ಮಾಡಿದರು
* ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾ.ರಾಜೇಂದ್ರ ಪ್ರಸಾದ್ ಕೇಂದ್ರೀಯ ವಿದ್ಯಾಲಯದಲ್ಲಿ ಮತ ಚಲಾಯಿಸಿದ ನಂತರ ಶಾಯಿ ಹಾಕಿದ ಬೆರಳನ್ನು ತೋರಿಸಿದರು.
* ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬುಧವಾರ ಬೆಳಿಗ್ಗೆ 9 ಗಂಟೆಯವರೆಗೆ ಶೇ.8.10 ರಷ್ಟು ಮತದಾನ ದಾಖಲಾಗಿದೆ.
* ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು
ಬೆಳಗ್ಗೆ 11.30ರವರೆಗೆ ಮತದಾನ ಮಾಡಿದ ಪ್ರಮುಖರು...
ರಾಷ್ಟ್ರಪತಿ ದ್ರೌಪದಿ ಮುರ್ಮು
ಉಪರಾಷ್ಟ್ರಪತಿ ಜಗದೀಪ್ ಧನಕರ್
ಮುಖ್ಯಮಂತ್ರಿ ಅತಿಶಿ
ವಿದೇಶಾಂಗ ಸಚಿವ ಜೈಶಂಕರ್
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ
ಸಂಸದೆ ಪ್ರಿಯಾಂಕ ಗಾಂಧಿ... ಸೇರಿ ಇತರರು ಮತದಾನ ಮಾಡಿದರು.
* ಬೆಳಗ್ಗೆ 11ರವರೆಗೆ ಶೇ.19.95ರಷ್ಟು ಮತದಾನ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಯವರೆಗೆ ಶೇ.19.95ರಷ್ಟು ಮತದಾನ ದಾಖಲಾಗಿದೆ.
* ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ಸಿಜೆಐ ಚಂದ್ರಚೂಡ್ ಮತದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.