ADVERTISEMENT

ಬೆಂಗಳೂರು–ಕಡಪ–ವಿಜಯವಾಡ ಆರ್ಥಿಕ ಕಾರಿಡಾರ್‌: ಎನ್‌ಎಚ್‌ಎಐನಿಂದ 4 ಗಿನ್ನೆಸ್ ದಾಖಲೆ

ಅಜಿತ್ ಅತ್ರಾಡಿ
Published 12 ಜನವರಿ 2026, 2:24 IST
Last Updated 12 ಜನವರಿ 2026, 2:24 IST
<div class="paragraphs"><p>ಬೆಂಗಳೂರು–ಕಡಪ–ವಿಜಯವಾಡ ಆರ್ಥಿಕ ಕಾರಿಡಾರ್‌ನಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ</p></div>

ಬೆಂಗಳೂರು–ಕಡಪ–ವಿಜಯವಾಡ ಆರ್ಥಿಕ ಕಾರಿಡಾರ್‌ನಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ

   

ನವದೆಹಲಿ: ಆಂಧ್ರಪ್ರದೇಶದಲ್ಲಿ ಬೆಂಗಳೂರು–ಕಡಪ–ವಿಜಯವಾಡ ಆರ್ಥಿಕ ಕಾರಿಡಾರ್‌ (ಎನ್‌ಎಚ್‌–544ಜಿ) ನಿರ್ಮಾಣದ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಾಲ್ಕು ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ.

ಹೆದ್ದಾರಿ ಎಂಜಿನಿಯರಿಂಗ್‌ನಲ್ಲಿ ಹೊಸ ಜಾಗತಿಕ ಮಾನದಂಡಗಳನ್ನು ಅಳವಡಿಸಿಕೊಂಡು ನಿರಂತರ ಬಿಟುಮಿನಸ್ ಕಾಂಕ್ರೀಟ್ ಹಾಕುವ ಮೂಲಕ ಎನ್‌ಎಚ್‌ಎಐ ಹೊಸ ಸಾಧನೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್‌ನಲ್ಲಿ ಆರು ಪಥಗಳ ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿಯಲ್ಲಿ ಜಾಗತಿಕವಾಗಿ ಮೊದಲ ಬಾರಿಗೆ ಎರಡೂ ಗಿನ್ನೆಸ್‌ ದಾಖಲೆಗಳನ್ನು ನಿರ್ಮಿಸಿದೆ ಎಂದೂ ಅವರು ಹೇಳಿದ್ದಾರೆ.

‘ದಾಖಲೆಯ 156 ಕಿ.ಮೀ. ಕಲ್ಲುಹಾಸು ಮತ್ತು 57,500 ಮೆಟ್ರಿಕ್ ಟನ್ ಬಿಟುಮಿನಸ್ ಕಾಂಕ್ರೀಟ್ ಅನ್ನು ನಿರಂತರವಾಗಿ ಹಾಕಲಾಗಿದೆ. ಈ ಮೂಲಕ ಹಿಂದಿನ 84.4 ಕಿ.ಮೀ. ವಿಶ್ವ ದಾಖಲೆಯನ್ನು ಮೀರಿಸಿದೆ. ಪುಟ್ಟಪರ್ತಿ ಬಳಿ ಆರು ಪಥಗಳ ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್‌ನ ಪ್ಯಾಕೇಜ್-2 ಮತ್ತು ಪ್ಯಾಕೇಜ್-3ರಲ್ಲಿ ಸಾಧಿಸಲಾದ ಈ ಮೈಲಿಗಲ್ಲು ಸುಧಾರಿತ ಯಂತ್ರೋಪಕರಣಗಳು, ಬಲವಾದ ಲಾಜಿಸ್ಟಿಕ್ಸ್ ಮತ್ತು ಉತ್ತಮ ಗುಣಮಟ್ಟದ ನಿಯಂತ್ರಣದಿಂದ ಐಐಟಿ ಬಾಂಬೆಯಂತಹ ಪ್ರಮುಖ ಸಂಸ್ಥೆಗಳ ಬೆಂಬಲದೊಂದಿಗೆ ಇದು ಸಾಧ್ಯವಾಗಿದೆ’ ಎಂದು ಗಡ್ಕರಿ ವಿವರಿಸಿದ್ದಾರೆ.

ಇದಕ್ಕೂ ಮುನ್ನ ಜನವರಿ 6ರಂದು ಆಂಧ್ರಪ್ರದೇಶದ ಪುಟ್ಟಪರ್ತಿ ಬಳಿ 29.95 ಕಿ.ಮೀ ಉದ್ದಕ್ಕೆ ನಿರಂತರವಾಗಿ 24 ಗಂಟೆಗಳ ಕಾಲ ಬಿಟುಮಿನಸ್ ಕಾಂಕ್ರೀಟ್‌ ಹಾಕುವ ಮೂಲಕ ಎನ್‌ಎಚ್‌ಎಐ ಎರಡು ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸಿತ್ತು ಎಂದೂ ಅವರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ವಿಶ್ವ ದರ್ಜೆಯ ಹೆದ್ದಾರಿ ಮೂಲಸೌಕರ್ಯ ಮತ್ತು ದೊಡ್ಡ ಪ್ರಮಾಣದ ಯೋಜನೆಗಳ ಅನುಷ್ಠಾನದಲ್ಲಿ ಹೊಸ ಸಾಧನೆಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.