ADVERTISEMENT

ಮಹಾನಗರಗಳಲ್ಲಿ ಶೇ 70ರಷ್ಟು AI ಆಧಾರಿತ ಉದ್ಯೋಗಾವಕಾಶ; ಬೆಂಗಳೂರಿನಲ್ಲೇ ಗರಿಷ್ಠ

ಪಿಟಿಐ
Published 18 ಫೆಬ್ರುವರಿ 2026, 13:14 IST
Last Updated 18 ಫೆಬ್ರುವರಿ 2026, 13:14 IST
ಎಐ
ಎಐ   

ಕೃತಕ ಬುದ್ದಿಮತ್ತೆ ಆಧಾರಿಸಿರುವ ಶೇ 70ರಷ್ಟು ಉದ್ಯೋಗಾವಕಾಶಗಳು ಬೆಂಗಳೂರು, ದೆಹಲಿ ಮತ್ತು ಮುಂಬೈನಲ್ಲಿವೆ ಎಂದು ಸಿಬಿಆರ್‌ಇನ ಇತ್ತೀಚಿನ ವರದಿ ಬಹಿರಂಗಪಡಿಸಿದೆ.

ಈ ಅಧ್ಯಯನವನ್ನು 2025ರ ಡಿಸೆಂಬರ್‌ವರೆಗೆ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿರುವ Naukri.com ನಲ್ಲಿ 64,500 ಕ್ಕೂ ಹೆಚ್ಚು ಸಕ್ರಿಯ ಉದ್ಯೋಗ ಪಟ್ಟಿಗಳನ್ನು ಆಧರಿಸಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವರದಿ ಪ್ರಕಾರ ಬೆಂಗಳೂರು, ಎಐ ತಂತ್ರಜ್ಞಾನದ ಪ್ರಾಥಮಿಕ ಕೇಂದ್ರವಾಗಿದೆ. ಒಟ್ಟು ಎಐ ಸಂಬಂಧಿತ ಉದ್ಯೋಗಗಳಲ್ಲಿ ಶೇ 25.4ರಷ್ಟು ಪಾಲನ್ನು ಬೆಂಗಳೂರು ಹೊಂದಿದೆ. ನಂತರದ ಸ್ಥಾನದಲ್ಲಿ ದೆಹಲಿ ಇದ್ದು, ಶೇ 24.8 ರಷ್ಟು ಉದ್ಯೋಗದ ಅವಕಾಶಗಳಿವೆ. ಮುಂಬೈನಲ್ಲಿ ಶೇ 19.2 ರಷ್ಟು ಉದ್ಯೋಗ ಅವಕಾಶಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಹೈದರಾಬಾದ್‌ನಲ್ಲಿ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಉದ್ಯೋಗಾವಕಾಶಗಳು ಶೇ. 12.5 ರಷ್ಟಿದೆ. ಪುಣೆಯಲ್ಲಿ ಶೇ 9.6, ಚೆನ್ನೈನಲ್ಲಿ ಶೇ 6.4 ಮತ್ತು ಕೋಲ್ಕತ್ತದಲ್ಲಿ ಶೇ 2.1 ರಷ್ಟು ಉದ್ಯೋಗಗಳಿವೆ. 

ಅದರಲ್ಲಿಯೂ ಪ್ರಮುಖವಾಗಿ ಎಂಜಿನಿಯರಿಂಗ್, ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ವಿಭಾಗದಲ್ಲಿ ಹೆಚ್ಚಿನ ಉದ್ಯೋಗದ ಅವಕಾಶಗಳಿವೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.