
ಮುಖ 10 ಸುದ್ದಿಗಳು
ರಾಷ್ಟ್ರೀಯ, ರಾಜ್ಯ, ವಿದೇಶಕ್ಕೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
ಕಾರವಾರ: ಎಂಡೊಸಲ್ಫಾನ್ ಕೀಟನಾಶಕದ ಪರಿಣಾಮ 4ನೇ ತಲೆಮಾರಿನವರ ಮೇಲೂ ಬೀರಿದೆ ಎಂಬುದು ಉತ್ತರಕನ್ನಡ ಜಿಲ್ಲೆಯಲ್ಲಿ ಈಚೆಗೆ ನಡೆದ ಬಾಧಿತರ ಮರುಸಮೀಕ್ಷೆಯಿಂದ ದೃಢಪಟ್ಟಿದೆ. ಬಾಧಿತರ ಪೈಕಿ 18 ವರ್ಷದೊಳಗಿನ ಮಕ್ಕಳನ್ನು ಆರೈಕೆ ಮೂಲಕ ಸಹಜಸ್ಥಿತಿಗೆ ತರಲು ‘ಆರೈಕೆ ಕೇಂದ್ರ’ ಆರಂಭವಾಗಿದೆ.
ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) ದರ ಏರಿಕೆಗೆ ಸಿದ್ಧತೆ ನಡೆಸಿದ್ದು, ಬರುವ ಏಪ್ರಿಲ್‌ನಿಂದ ಗೃಹ ಬಳಕೆ ವಿದ್ಯುತ್ ದರ ಯೂನಿಟ್‌ಗೆ ಸುಮಾರು 50 ಪೈಸೆ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ.
ಬೆಂಗಳೂರು: ‘ಉಸಿರು ಇರುವವರೆಗೆ ರಾಜಕೀಯ ಷಡ್ಯಂತ್ರ, ದ್ವೇಷ–ಅಸೂಯೆಯ ರಾಜಕಾರಣದ ವಿರುದ್ಧ ಹೋರಾಡುತ್ತೇನೆ. ಇದು ಸತ್ಯ, ನ್ಯಾಯ ಮತ್ತು ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟ. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಹೋರಾಟವನ್ನು ನನ್ನ ಉಸಿರು ಇರುವವರೆಗೆ ನಡೆಸುತ್ತೇನೆ, ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ಆಗಲಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ 2024ಕ್ಕೆ ಹೋಲಿಸಿದರೆ ಕಳೆದ ವರ್ಷ (2025) ಪೋಕ್ಸೊ, ಹಲ್ಲೆ, ಮಾದಕವಸ್ತು ನಿಯಂತ್ರಣ, ಅಬಕಾರಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಳವಾಗಿವೆ.
ವಾಷಿಂಗ್ಟನ್: ಭಾರತ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆಯಿಲ್ಲ. ಒಪ್ಪಂದದ ಪ್ರಕಾರವೇ ಅದು ಮುಂದುವರೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಸುಂಕದ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಅಮೆರಿಕದ ಸುಪ್ರೀಂ ಕೋರ್ಟ್, ಹೆಚ್ಚುವರಿ ಪ್ರತಿಸುಂಕವನ್ನು ರದ್ದುಗೊಳಿಸಿ 6:3 ಬಹುಮತದ ತೀರ್ಪು ನೀಡಿದೆ.
ಬೆಂಗಳೂರು: ನಮ್ಮ ಮೆಟ್ರೊದಲ್ಲಿ ಮದ್ಯ ಸಾಗಾಟಕ್ಕೆ ಅವಕಾಶ ನೀಡಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿರುವುದು ಹಾಸ್ಯಾಸ್ಪದ ಎಂದು ಮೆಟ್ರೊ ಪ್ರಯಾಣಿಕರ ವೇದಿಕೆ ಟೀಕಿಸಿದೆ.
ಜಮಖಂಡಿ: ಇಲ್ಲಿನ ಮುಧೋಳ ರಸ್ತೆಯ ಮೌಲಾನಾ ಅಬ್ದುಲ್ ಕಲಾಂ ವೃತ್ತದ ಹತ್ತಿರ ರಾತ್ರಿ ಒಂದು ಗಂಟೆ ಸುಮಾರಿಗೆ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಮಗು ಸೇರಿ ನಾಲ್ವರು ಮೃತರಾಗಿದ್ದಾರೆ.
ನವದೆಹಲಿ: ದೇಶದ ರಫ್ತು ವಹಿವಾಟು ಜಾಸ್ತಿ ಮಾಡಲು ಇ–ವಾಣಿಜ್ಯ ಕ್ಷೇತ್ರದ ರಫ್ತುದಾರರಿಗೆ ಸಾಲದ ನೆರವು ಸೇರಿದಂತೆ ಹಲವು ಕ್ರಮಗಳನ್ನು ಕೇಂದ್ರ ಸರ್ಕಾರವು ಶುಕ್ರವಾರ ಪ್ರಕಟಿಸಿದೆ.
ಅಡಿಲೇಡ್: ಆಸ್ಟ್ರೇಲಿಯಾದ ನೆಲದಲ್ಲಿ ಮೊದಲ ಬಾರಿಗೆ ಮಹಿಳೆಯರ ಟಿ20 ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡುವ ಅವಕಾಶದ ಹೊಸ್ತಿಲಲ್ಲಿ ಭಾರತ ತಂಡ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.