ADVERTISEMENT

ಅಮೆರಿಕ ಸೇನಾ ನೆರವು ಹಿಂಪಡೆದ ಬೆನ್ನಲ್ಲೇ ಉಕ್ರೇನ್ ಸಹಾಯಕ್ಕೆ ಧಾವಿಸಿದ ಫ್ರಾನ್ಸ್‌

ರಾಯಿಟರ್ಸ್
Published 6 ಮಾರ್ಚ್ 2025, 9:54 IST
Last Updated 6 ಮಾರ್ಚ್ 2025, 9:54 IST
<div class="paragraphs"><p>ವೊಲೊಡಿಮಿರ್‌ ಝೆಲೆನ್‌ಸ್ಕಿ ಹಾಗೂ&nbsp;ಎಮಾನ್ಯುಯೆಲ್ ಮ್ಯಾಕ್ರನ್‌</p></div>

ವೊಲೊಡಿಮಿರ್‌ ಝೆಲೆನ್‌ಸ್ಕಿ ಹಾಗೂ ಎಮಾನ್ಯುಯೆಲ್ ಮ್ಯಾಕ್ರನ್‌

   

ಪ್ಯಾರಿಸ್: ರಷ್ಯಾದೊಂದಿಗಿನ ಯುದ್ಧದಲ್ಲಿ ಉಕ್ರೇನ್‌ಗೆ ಸೇನಾ ನೆರವನ್ನು ತಾತ್ಕಾಲಿಕವಾಗಿ ಅಮೆರಿಕ ಹಿಂಪಡೆದ ಬೆನ್ನಲ್ಲೇ, ತಾನು ನೆರವಾಗುವುದಾಗಿ ಫ್ರಾನ್ಸ್‌ ಹೇಳಿದೆ.

ಸೇನಾ ನೆರವಿಗೆ ಬದಲಾಗಿ ಉಕ್ರೇನ್‌ನಲ್ಲಿರುವ ಅಪರೂಪದ ಖನಿಜ ನಿಕ್ಷೇಪ ನೀಡಬೇಕೆಂಬ ಅಮೆರಿಕದ ಬೇಡಿಕೆಯನ್ನು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ನಿರಾಕರಿಸಿದ್ದರು. ಕಳೆದ ವಾರ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ, ಝೆಲೆನ್‌ಸ್ಕಿ ಅವರು ಡೊನಾಲ್ಡ್‌ ಟ್ರಂಪ್‌ಗೆ ನೇರವಾಗಿಯೇ ತಿರುಗೇಟು ನೀಡಿ ಸ್ವದೇಶಕ್ಕೆ ಮರಳಿದ್ದರು. ಇದರ ಬೆನ್ನಲ್ಲೇ ಸೇನಾ ನೆರವು ಹಿಂಪಡೆದಿರುವುದಾಗಿ ಅಮೆರಿಕ ಹೇಳಿದೆ.

ADVERTISEMENT

2022ರ ಫೆಬ್ರುವರಿಯಲ್ಲಿ ಉಕ್ರೇನ್‌ ಮೇಲೆ ರಷ್ಯಾ ದಾಳಿ ಆರಂಭಿಸಿತು. ರಷ್ಯಾದೊಂದಿಗೆ ಶಾಂತಿಯ ಮಾತುಕತೆ ನಡೆಸಲು ಸಹಕರಿಸುವಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರನ್ನು ಕೋರಲು ಝೆಲೆನ್‌ಸ್ಕಿಗೆ ಹೇಳಲಾಗಿತ್ತು. ಆದರೆ ಅಮೆರಿಕದ ಬೇಡಿಕೆಯನ್ನು ಝೆಲೆನ್‌ಸ್ಕಿ ಸಾರಾಸಗಟಾಗಿ ತಳ್ಳಿಹಾಕಿದ ನಂತರ, ಸೇನಾ ನೆರವನ್ನು ಅಮೆರಿಕ ಹಿಂಪಡೆದಿತ್ತು.

ಇದರ ಬೆನ್ನಲ್ಲೇ ಉಕ್ರೇನ್‌ಗೆ ಸೇನಾ ನೆರವು ನೀಡಲು ಫ್ರಾನ್ಸ್ ಸಿದ್ಧವಿರುವುದಾಗಿ ಅಲ್ಲಿನ ರಕ್ಷಣಾ ಸಚಿವ ಸೆಬೆಸ್ಟೀನ್‌ ಲೆಕೊರ್ನು ಹೇಳಿದ್ದಾರೆ.

‘ಫ್ರಾನ್ಸ್‌ನ ಈ ನಿರ್ಧಾರವು ಅಮೆರಿಕದ ಸಖ್ಯದಲ್ಲಿರುವ ನಮ್ಮ ಬ್ರಿಟಿಷ್ ಸ್ನೇಹಿತರಿಗೆ ಅರಗಿಸಿಕೊಳ್ಳಲು ಕಷ್ಟವೆನಿಸುತ್ತಿರಬಹುದು. ಫ್ರಾನ್ಸ್‌ನ ಪರಮಾಣು ಅಸ್ತ್ರವು ಶೀಥಲ ಸಮರ ಆರಂಭದ ದಿನಗಳಲ್ಲೇ ಸಿದ್ಧಗೊಂಡಿದೆ. ಪರಮಾಣು ಅಸ್ತ್ರಗಳ ತಯಾರಿಕೆಯಲ್ಲಿ ಪ್ರಬಲರಾದ ವಾಷಿಂಗ್ಟನ್‌ ಮತ್ತು ಮಾಸ್ಕೊ ನೆರವಿಲ್ಲದೆ ಫ್ರಾನ್ಸ್‌ ಸ್ವತಂತ್ರವಾಗಿ ಅಭಿವೃದ್ಧಿಪಡಿಸಿದೆ. ಪ್ರತಿರೋಧ ಎದುರಿಸಲು ಅದು ಸಾಕಾಗಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ರಷ್ಯಾದಿಂದ ಐರೋಪ್ಯ ಖಂಡದ ಒಂದು ರಾಷ್ಟ್ರಕ್ಕೆ ಎದುರಾಗಿರುವ ಸಂಕಷ್ಟದಲ್ಲಿ ರಕ್ಷಣೆ ನೀಡುವ ಉದ್ದೇಶದೊಂದಿಗೆ ಫ್ರಾನ್ಸ್‌ ಚರ್ಚೆಗೆ ಸಿದ್ಧವಿದೆ’ ಎಂದು ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್‌ ಬುಧವಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.