ADVERTISEMENT

Ukraine War: ಸೌದಿ ಅರೇಬಿಯಾದಲ್ಲಿ ಪುಟಿನ್ ಜೊತೆ ಟ್ರಂಪ್ ಮಾತುಕತೆ ಸಾಧ್ಯತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2025, 4:15 IST
Last Updated 13 ಫೆಬ್ರುವರಿ 2025, 4:15 IST
<div class="paragraphs"><p>ಡೊನಾಲ್ಡ್ ಟ್ರಂಪ್,&nbsp;ವ್ಲಾಡಿಮಿರ್ ಪುಟಿನ್</p></div>

ಡೊನಾಲ್ಡ್ ಟ್ರಂಪ್, ವ್ಲಾಡಿಮಿರ್ ಪುಟಿನ್

   

(ರಾಯಿಟರ್ಸ್ ಸಂಗ್ರಹ ಚಿತ್ರ)

ವಾಷಿಂಗ್ಟನ್: ಉಕ್ರೇನ್‌ನಲ್ಲಿ ಯುದ್ಧ ನಿಲ್ಲಿಸಲು ಶಾಂತಿ ಮಾಕುಕತೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗುವ ಸಾಧ್ಯತೆಯಿದೆ.

ADVERTISEMENT

ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಚುನಾಯಿತರಾದ ಬಳಿಕ ಟ್ರಂಪ್, ರಷ್ಯಾ-ಉಕ್ರೇನ್ ನಡುವಣ ಯುದ್ಧ ನಿಲ್ಲಿಸಲು ಮಾತುಕತೆ ನಡೆಸುವುದಾಗಿ ಹೇಳಿದ್ದರು.

ಈಗ ಸೌದಿ ಅರೇಬಿಯಾದಲ್ಲಿ ಪುಟಿನ್ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ ಎಂದು ಟ್ರಂಪ್ ಹೇಳಿದ್ದಾರೆ.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಸಂಬಂಧ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದಾಗಿ ಟ್ರಂಪ್ ಹೇಳಿಕೆ ನೀಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

'ನಾನು ಅಲ್ಲಿಗೆ (ಸೌದಿ ಅರೇಬಿಯಾ) ಹೋಗುತ್ತೇನೆ. ಅವರು (ಪುಟಿನ್) ಸಹ ಬರುವ ನಿರೀಕ್ಷೆಯಿದೆ. ಬಹುಶಃ ಸೌದಿ ಅರೇಬಿಯಾದಲ್ಲಿ ಮೊದಲ ಬಾರಿಗೆ ಭೇಟಿಯಾಗಲಿದ್ದೇವೆ' ಎಂದು ಅವರು ತಿಳಿಸಿದ್ದಾರೆ.

ಎರಡು ಸೂಪರ್ ಪವರ್‌ಗಳ ನಡುವಣ ಮಾತುಕತೆಯಿಂದ ಉಕ್ರೇನ್ ಅನ್ನು ಹೊರಗಿಡಲಾಗುತ್ತದೆ ಎಂಬ ವರದಿಯನ್ನು ಟ್ರಂಪ್ ಅಲ್ಲಗಳೆದಿದ್ದಾರೆ.

ನ್ಯಾಟೊದಲ್ಲಿ ಉಕ್ರೇನ್ ಸೇರ್ಪಡೆ ಪ್ರಾಯೋಗಿಕ ಅನಿಸದಿದ್ದರೂ ಈ ಪ್ರದೇಶದಲ್ಲಿ ಯುದ್ಧ ನಿಲ್ಲಿಸಿ ಶಾಂತಿ ನೆಲೆಸಲು ಟ್ರಂಪ್ ಆದ್ಯತೆ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಉಕ್ರೇನ್ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.