ಜಸ್‌ಪ್ರಿತ್ ಬೂಮ್ರಾ
ಚಿತ್ರಕೃಪೆ: ರಾಯಿಟರ್ಸ್
ಮುಂಬೈ: ವಿಶ್ವಶ್ರೇಷ್ಠ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರು, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಅತಿಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡರು.
ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಏಡನ್ ಮಾರ್ಕ್ರಂ ವಿಕೆಟ್ ಪಡೆಯುವ ಮೂಲಕ ಅವರು ಈ ಸಾಧನೆ ಮಾಡಿದರು.
2013ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಮುಂಬೈ ಪರ ಆಡುತ್ತಿರುವ ಬೂಮ್ರಾ, ಈವರೆಗೆ 139 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಪ್ರತಿ ಓವರ್‌ಗೆ 7.32ರ ದರದಲ್ಲಿ ರನ್ ಬಿಟ್ಟುಕೊಟ್ಟಿರುವ ಅವರು, 174 ವಿಕೆಟ್‌ಗಳನ್ನು ಜೇಬಿಗಿಳಿಸಿಕೊಂಡಿದ್ದಾರೆ.
ಎರಡು ಸಲ ಐದು ವಿಕೆಟ್ ಗೊಂಚಲು ಸಾಧನೆ ಮಾಡಿರುವ ಅವರು, ಇನಿಂಗ್ಸ್‌ವೊಂದರಲ್ಲಿ ಕೇವಲ 10 ರನ್‌ಗೆ 5 ವಿಕೆಟ್ ಪಡೆದ ಶ್ರೇಷ್ಠ ರೆಕಾರ್ಡ್ ಹೊಂದಿದ್ದಾರೆ.
ಮುಂಬೈ ಪರ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಿವರು
ಹಾರ್ದಿಕ್ ಪಾಂಡ್ಯ: 65 ವಿಕೆಟ್
ಕೀರನ್ ಪೊಲಾರ್ಡ್: 69 ವಿಕೆಟ್
ಮಿಚೇಲ್ ಮೆಕ್‌ಲೆಂಗನ್: 71 ವಿಕೆಟ್
ಹರ್ಭಜನ್ ಸಿಂಗ್: 127 ವಿಕೆಟ್
ಲಸಿತ್ ಮಾಲಿಂಗ: 170 ವಿಕೆಟ್
ಜಸ್‌ಪ್ರೀತ್ ಬೂಮ್ರಾ: 174 ವಿಕೆಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.