ADVERTISEMENT

IPL 2025: ಪ್ಲೇ ಆಫ್‌ನಲ್ಲಿ ಕನಿಷ್ಠ ಮೊತ್ತಕ್ಕೆ ಮುಗ್ಗರಿಸಿದ ತಂಡಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮೇ 2025, 16:17 IST
Last Updated 29 ಮೇ 2025, 16:17 IST
<div class="paragraphs"><p>ಪಂಜಾಬ್‌ ಕಿಂಗ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಔಟಾದಾಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಆಟಗಾರರ ಸಂಭ್ರಮ</p></div>

ಪಂಜಾಬ್‌ ಕಿಂಗ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಔಟಾದಾಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಆಟಗಾರರ ಸಂಭ್ರಮ

   

ಪಿಟಿಐ ಚಿತ್ರ

ಮುಲ್ಲನಪುರ, ಚಂಡೀಗಡ: ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಮೊದಲ ಕ್ವಾಲಿಫೈಯರ್‌ ಪಂದ್ಯ ಚಂಡೀಗಢದ ಮುಲ್ಲನಪುರದಲ್ಲಿ ನಡೆಯುತ್ತಿದೆ.

ADVERTISEMENT

ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದ ಪಂಜಾಬ್‌ ಕಿಂಗ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೆಣಸಾಟ ನಡೆಸುತ್ತಿವೆ.

ಟಾಸ್‌ ಗೆದ್ದ ಚಾಲೆಂಜರ್ಸ್‌ ನಾಯಕ ರಜತ್ ಪಾಟೀದಾರ್‌ ಬೌಲಿಂಗ್‌ ಆಯ್ದುಕೊಂಡರು. ನಾಯಕನ ನಿರ್ಧಾರ ಸಮರ್ಥಿಸಿಕೊಳ್ಳುವಂತೆ ಶಿಸ್ತಿನ ದಾಳಿ ಸಂಘಟಿಸಿದ ಬೌಲರ್‌ಗಳು, ಎದುರಾಳಿ ಪಡೆಯನ್ನು 14.1 ಓವರ್‌ಗಳಲ್ಲಿ ಕೇವಲ 101 ರನ್‌ಗೆ ಕಟ್ಟಿಹಾಕಿದ್ದಾರೆ.

ಇದು, ಐಪಿಎಲ್‌ ಪ್ಲೇ ಆಫ್‌ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ದಾಖಲಾದ ನಾಲ್ಕನೇ ಕನಿಷ್ಠ ಮೊತ್ತವಾಗಿದೆ.

ಪ್ಲೇ ಆಫ್‌ ಹಂತದಲ್ಲಿ ಐದು ಕನಿಷ್ಠ ಮೊತ್ತಗಳ ಪಟ್ಟಿ ಇಲ್ಲಿದೆ.

  • ಡೆಕ್ಕನ್‌ ಚಾರ್ಜರ್ಸ್‌ 82 ರನ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 2010

  • ಡೆಲ್ಲಿ ಡೇರ್‌ಡೆವಿಲ್ಸ್‌ 87 ರನ್‌ vs ರಾಜಸ್ಥಾನ ರಾಯಲ್ಸ್‌ – 2008

  • ಲಖನೌ ಸೂಪರ್‌ಜೈಂಟ್ಸ್‌ 101 ರನ್‌ vs ಮುಂಬೈ ಇಂಡಿಯನ್ಸ್‌ – 2023

  • ಪಂಜಾಬ್‌ ಕಿಂಗ್ಸ್‌ 101 ರನ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 2025

  • ಡೆಕ್ಕನ್‌ ಚಾರ್ಜರ್ಸ್‌ 104 ರನ್‌ vs ಚೆನ್ನೈ ಸೂಪರ್‌ ಕಿಂಗ್ಸ್‌ – 2010

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.