ADVERTISEMENT

IPL 2025 | ಮೂರು ಬಾರಿ ಫೈನಲ್ ತಲುಪಿದಾಗ ಆರ್‌ಸಿಬಿಯ 'ಹನ್ನೊಂದರ ಬಳಗ' ಹೇಗಿತ್ತು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಮೇ 2025, 14:10 IST
Last Updated 31 ಮೇ 2025, 14:10 IST
<div class="paragraphs"><p>ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು</p></div>

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

   

ರಾಯಿಟರ್ಸ್‌ ಚಿತ್ರ

ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯ ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಮೊದಲ ತಂಡವಾಗಿ ಫೈನಲ್‌ ಪ್ರವೇಶಿಸಿದೆ. 'ಅಗ್ರಸ್ಥಾನಿ' ಪಂಜಾಬ್‌ ಕಿಂಗ್ಸ್‌ ಪಡೆಯನ್ನು ಮೊದಲ ಕ್ವಾಲಿಫೈಯರ್‌ ಸೆಣಸಾಟದಲ್ಲಿ ಮಣಿಸಿ ಈ ಸಾಧನೆ ಮಾಡಿದೆ.

ADVERTISEMENT

ಚಂಡೀಗಢದ ಮುಲ್ಲನಪುರದಲ್ಲಿರುವ ಮಹಾರಾಜ ಯಾದವೇಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೇ 29ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಕಿಂಗ್ಸ್‌, ಕೇವಲ 101 ರನ್‌ಗೆ ಆಲೌಟ್‌ ಆಗಿತ್ತು. ಈ ಗುರಿ, ಚಾಲೆಂಜರ್ಸ್‌ಗೆ ಸವಾಲೇ ಆಗಲಿಲ್ಲ. ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು 10 ಓವರ್‌ಗಳಲ್ಲೇ ಗುರಿ ತಲುಪಿತ್ತು.

ಕೇವಲ 27 ಎಸೆತಗಳಲ್ಲಿ 56 ರನ್‌ ಬಾರಿಸಿದ ಫಿಲ್‌ ಸಾಲ್ಟ್‌, ಆರ್‌ಸಿಬಿ ಪಡೆಯು ಬರೋಬ್ಬರಿ 9 ವರ್ಷಗಳ ಬಳಿಕ ಈ ಟೂರ್ನಿಯ ಫೈನಲ್‌ ತಲುಪಲು ನೆರವಾದರು.

ಬೆಂಗಳೂರು ತಂಡ ಈ ಹಿಂದೆ 2009, 2011 ಹಾಗೂ 2016ರಲ್ಲಿ ಫೈನಲ್‌ಗೇರಿತ್ತಾದರೂ, ಒಮ್ಮೆಯೂ 'ಚಾಂಪಿಯನ್‌' ಎನಿಸಿಕೊಂಡಿಲ್ಲ. ಹಾಗಾಗಿ, 'ಈ ಸಲ ಕಪ್‌' ತಮ್ಮದಾಗಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.

ಇಷ್ಟು ಬಾರಿ ಆರ್‌ಸಿಬಿಯ ಬ್ಯಾಟಿಂಗ್‌ ವಿಭಾಗ ತುಸು ಬಲಿಷ್ಠವಾಗಿರುತ್ತಿತ್ತು. ಈ ಸಲ ಬೌಲಿಂಗ್‌ ವಿಭಾಗವೂ ಸದೃಢವಾಗಿದೆ.

ಆರಂಭಿಕರಾದ ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌ ಜೊತೆಗೆ ನಾಯಕ ರಜತ್‌ ಪಟೀದಾರ್‌ ಹಾಗೂ ಗಾಯಗೊಂಡು ಹೊರಬಿದ್ದಿರುವ ದೇವದತ್ತ ಪಡಿಕ್ಕಲ್‌ ಬದಲು ತಂಡ ಕೂಡಿಕೊಂಡಿರುವ ಮಯಂಕ್‌ ಅಗರವಾಲ್‌ ಅಗ್ರ ಕ್ರಮಾಂಕಕ್ಕೆ ಬಲ ತುಂಬುತ್ತಿದ್ದಾರೆ. ಜಿತೇಶ್‌ ಶರ್ಮಾ, ರೊಮಾರಿಯೊ ಶೆಫರ್ಡ್‌ ಹಾಗೂ ಕೃಣಾಲ್‌ ಪಾಂಡ್ಯ ಮಧ್ಯಮ ಕ್ರಮಾಂಕದ ಹೊಣೆ ಹೊತ್ತಿದ್ದಾರೆ. ಒಂದು ಪಂದ್ಯದಲ್ಲಿ ಅರ್ಧಶತಕ ಬಾರಿಸಿ ನಂತರ ವೈಫಲ್ಯ ಅನುಭವಿಸುತ್ತಿರುವ ಅನುಭವಿ ಲಿಯಾಮ್‌ ಲಿವಿಂಗ್‌ಸ್ಟೋನ್‌ ಲಯಕ್ಕೆ ಮರಳಿದರೆ, ಬ್ಯಾಟಿಂಗ್‌ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗಲಿದೆ.

ಬೌಲಿಂಗ್‌ ವಿಭಾಗದಲ್ಲಿ ವೇಗಿ ಜೋಶ್‌ ಹ್ಯಾಜಲ್‌ವುಡ್‌ಗೆ ಅನುಭವಿ ಭುವನೇಶ್ವರ್‌ ಕುಮಾರ್‌ ಮತ್ತು ಯಶ್ ದಯಾಳ್ ಸಾಥ್‌ ನೀಡುತ್ತಿದ್ದಾರೆ. ಅವರಿಗೆ ಶೆಫರ್ಡ್‌ ಕೂಡ ಕೈಜೋಡಿಸಿದ್ದಾರೆ. ಸ್ಪಿನ್ನರ್‌ ಸುಯಾಶ್‌ ಶರ್ಮಾ ಕೆಲವು ಪಂದ್ಯಗಳಲ್ಲಿ ಚಮತ್ಕಾರ ಮಾಡಿದ್ದು, ಅವರೊಂದಿಗೆ ಎಡಗೈ ಆಟಗಾರ ಕೃಣಾಲ್‌ ಪಾಂಡ್ಯ ಸ್ಪಿನ್‌ ಬಲೆ ಹೆಣೆಯುತ್ತಿದ್ದಾರೆ. ಹೀಗಾಗಿ, ತಂಡ ಸಮತೋಲನ ಹೊಂದಿರುವುದರಿಂದ 18ನೇ ಆವೃತ್ತಿಯಲ್ಲಿ ಮೊದಲ ಪ್ರಶಸ್ತಿಯ ಆಸೆ ಚಿಗುರೊಡೆದಿದೆ.

ಆರ್‌ಸಿಬಿ ಈ ಹಿಂದೆ ಆಡಿದ ಮೂರು ಫೈನಲ್‌ಗಳಲ್ಲಿ ಕ್ರಮವಾಗಿ ಡೆಕ್ಕನ್‌ ಚಾರ್ಜರ್ಸ್‌ (6 ರನ್‌ ಅಂತರ), ಚೆನ್ನೈ ಸೂಪರ್‌ ಕಿಂಗ್ಸ್‌ (58 ರನ್‌ ಅಂತರ) ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ಎದುರು (8 ರನ್‌ ಅಂತರ) ಸೋಲಿನ ನಿರಾಸೆ ಅನುಭವಿಸಿತ್ತು.

ಆ ವರ್ಷಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಯಾರೆಲ್ಲ ಇದ್ದರು ಎಂಬುದು ಇಲ್ಲಿದೆ.

ಈ ಬಾರಿಯ ಪ್ಲೇ ಆಫ್‌ (ಮೊದಲ ಕ್ವಾಲಿಫೈಯರ್‌) ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಆಡಿದ ತಂಡ 

ರಜತ್‌ ಪಾಟೀದಾರ್‌ (ನಾಯಕ), ಫಿಲ್‌ ಸಾಲ್ಟ್‌, ವಿರಾಟ್‌ ಕೊಹ್ಲಿ, ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಿತೇಶ್‌ ಶರ್ಮಾ, ರೊಮಾರಿಯೊ ಶೆಫರ್ಡ್‌, ಕೃಣಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಯಶ್‌ ದಯಾಳ್‌, ಜೋಶ್‌ ಹ್ಯಾಜಲ್‌ವುಡ್‌, ಸುಯಾಶ್‌ ಶರ್ಮಾ

ಬ್ಯಾಟಿಂಗ್‌ ವೇಳೆ, ಸುಯಾಶ್‌ ಶರ್ಮಾ ಬದಲು ಮಯಂಕ್‌ ಅಗರವಾಲ್‌ 'ಇಂಪ್ಯಾಕ್ಟ್‌' ಪ್ಲೇಯರ್‌ ಆಗಿ ಕಣಕ್ಕಿಳಿದಿದ್ದರು.

ಪಂಜಾಬ್‌ ಇಲ್ಲವೇ ಮುಂಬೈ ಸವಾಲು
ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಆರ್‌ಸಿಬಿ ಎದುರು ಸೋತಿರುವ ಪಂಜಾಬ್‌ ಕಿಂಗ್ಸ್‌ ಹಾಗೂ ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್ ಟೈಟನ್ಸ್‌ ವಿರುದ್ಧ ಗೆದ್ದಿರುವ ಮುಂಬೈ ಇಂಡಿಯನ್ಸ್‌ ನಾಳೆ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಅಹಮದಾಬಾದ್‌ನಲ್ಲಿ ನಡೆಯುವ ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ, ಜೂನ್‌ 3ರಂದು ನಡೆಯುವ ಫೈನಲ್‌ನಲ್ಲಿ ಆರ್‌ಸಿಬಿಗೆ ಸವಾಲೊಡ್ಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.