ADVERTISEMENT

ದಿಗ್ಗಜರ ಸಮಾಗಮ: ಮೆಸ್ಸಿಯನ್ನು ಭೇಟಿಯಾಗಲಿದ್ದಾರೆ ಸಚಿನ್, ಕೊಹ್ಲಿ, ರೋಹಿತ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2025, 4:10 IST
Last Updated 14 ಡಿಸೆಂಬರ್ 2025, 4:10 IST
<div class="paragraphs"><p>ಸಚಿನ್‌ ತೆಂಡೂಲ್ಕರ್‌, ರೋಹಿತ್‌ ಶರ್ಮಾ, ಲಿಯೊನೆಲ್‌ ಮೆಸ್ಸಿ,&nbsp;ವಿರಾಟ್‌ ಕೊಹ್ಲಿ,&nbsp;</p></div>

ಸಚಿನ್‌ ತೆಂಡೂಲ್ಕರ್‌, ರೋಹಿತ್‌ ಶರ್ಮಾ, ಲಿಯೊನೆಲ್‌ ಮೆಸ್ಸಿ, ವಿರಾಟ್‌ ಕೊಹ್ಲಿ, 

   

ಕೃಪೆ: ಪಿಟಿಐ

ಮುಂಬೈ: 'GOAT Tour of India' ಪ್ರವಾಸ ಆರಂಭಿಸಿರುವ ಅರ್ಜೆಂಟೀನಾದ ಫುಟ್‌ಬಾಲ್‌ ದಿಗ್ಗಜ ಲಿಯೋನೆಲ್‌ ಮೆಸ್ಸಿ ಅವರು ಇಂದು ಮುಂಬೈಗೆ ಭೇಟಿ ನೀಡಲಿದ್ದಾರೆ.

ADVERTISEMENT

ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿಯ ಬಳಿಕ ಲಂಡನ್‌ಗೆ ತೆರಳಿದ್ದ ವಿರಾಟ್‌ ಕೊಹ್ಲಿ, ಶನಿವಾರ ಮುಂಬೈಗೆ ವಾಪಸ್‌ ಆಗಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅವರು, ಅಲ್ಲಿಂದ ತೆರಳುವಾಗ ಅಭಿಮಾನಿಗಳತ್ತ ಕೈಬೀಸಿದ್ದಾರೆ.

ಇದರ ಬೆನ್ನಲ್ಲೇ, ದಂಪತಿಯು ಮೆಸ್ಸಿ ಅವರನ್ನು ಭಾನುವಾರ ಮುಂಬೈನಲ್ಲಿ ಭೇಟಿಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಕೊಹ್ಲಿ ದಂಪತಿಯಷ್ಟೇ ಅಲ್ಲದೆ, ದಿಗ್ಗಜ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್, ಸುನಿಲ್‌ ಗವಾಸ್ಕರ್‌, ರೋಹಿತ್‌ ಶರ್ಮಾ ಅವರೂ ಮೆಸ್ಸಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.

ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾ (ಸಿಸಿಐ), ಸಚಿನ್‌ ಸೇರಿದಂತೆ ಖ್ಯಾತನಾಮರನ್ನು ಒಳಗೊಂಡಂತೆ ಮಧ್ಯಾಹ್ನ 3.30ಕ್ಕೆ ಪ್ಯಾಡಲ್‌ ಪಂದ್ಯ ಆಯೋಜಿಸಲಿದೆ. ನಂತರ, ಬಾಲಿವುಡ್‌ ಸೆಲೆಬ್ರಿಟಿಗಳೊಂದಿಗೆ ಸೌಹಾರ್ದ ಫುಟ್‌ಬಾಲ್ ಪಂದ್ಯ (ಸಂಜೆ 4ಕ್ಕೆ) ನಡೆಯಲಿದೆ.

ಅದಾದ ಬಳಿಕ, ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜೆ 5ಕ್ಕೆ ನಿಗದಿಯಾಗಿರುವ ಚಾರಿಟಿ ಫ್ಯಾಷನ್‌ ಶೋನಲ್ಲಿ ಮೆಸ್ಸಿ ಹೆಜ್ಜೆ ಇಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.