ADVERTISEMENT

ಬಿಜೆಪಿ ಪರ ಧೋರಣೆ ವಿವಾದ: ಹುದ್ದೆ ತ್ಯಜಿಸಿದ ಫೇಸ್‌ಬುಕ್‌ ಅಧಿಕಾರಿ ಅಂಕಿದಾಸ್‌

ರಾಯಿಟರ್ಸ್
Published 27 ಅಕ್ಟೋಬರ್ 2020, 14:57 IST
Last Updated 27 ಅಕ್ಟೋಬರ್ 2020, 14:57 IST
ಅಧಿಕಾರಿ ಅಂಕಿದಾಸ್ (ಚಿತ್ರ: facebook.com/ankhid)
ಅಧಿಕಾರಿ ಅಂಕಿದಾಸ್ (ಚಿತ್ರ: facebook.com/ankhid)   

ನವದೆಹಲಿ:ಸಾಮಾಜಿಕ ಮಾಧ್ಯಮಫೇಸ್‌ಬುಕ್ ಇಂಡಿಯಾದ ಉನ್ನತ ಅಧಿಕಾರಿ ಅಂಕಿದಾಸ್ ಅವರು ತಮ್ಮ ಹುದ್ದೆ ತ್ಯಜಿಸಿದ್ದಾರೆ ಎಂದು ಸಂಸ್ಥೆ ಮಂಗಳವಾರ ತಿಳಿಸಿದೆ.

ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ ದೇಶದಲ್ಲಿ ರಾಜಕೀಯ ವಿಷಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದು ಇತ್ತೀಚಿನ ಪತ್ರಿಕಾ ವರದಿಯೊಂದರ ಮೂಲಕ ಬಹಿರಂಗವಾಗಿತ್ತು. ಇದಾದ ತಿಂಗಳುಗಳಲ್ಲೇ ಅಂಕಿದಾಸ್‌ ಅವರು ಪದತ್ಯಾಗ ಮಾಡಿದ್ದಾರೆ.

ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಫೇಸ್‌ಬುಕ್‌ನ ಸಾರ್ವಜನಿಕ ನೀತಿ ಮುಖ್ಯಸ್ಥರಾಗಿದ್ದ ಅಂಕಿದಾಸ್ ಅವರು ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ ವಹಿಸುವ ಉದ್ದೇಶದಿಂದಾಗಿ ಹುದ್ದೆಯಿಂದ ನಿರ್ಗಮಿಸಲು ತೀರ್ಮಾನಿಸಿದ್ದಾರೆ ಎಂದು ಫೇಸ್‌ಬುಕ್‌ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಭಾರತದ ಫೇಸ್‌ಬುಕ್‌ನ ಉನ್ನತ ಅಧಿಕಾರಿಯಾಗಿರುವ ಅಂಕಿ ದಾಸ್ ಎಂಬುವವರು, ಆಡಳಿತ ಪಕ್ಷದೊಂದಿಗಿನ ಕಂಪನಿಯ ಸಂಬಂಧ ಹಾಳಾಗುವ ಭಯದಿಂದ ತೆಲಂಗಾಣದ ಹಿಂದೂ ರಾಷ್ಟ್ರವಾದಿ ಸಂಘನೆ, ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರ ವಿರುದ್ಧ ದ್ವೇಷ ಭಾಷಣ ನಿಯಮಗಳನ್ನು ಅನ್ವಯಿಸುವುದನ್ನು ವಿರೋಧಿಸಿದ್ದರು,’ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿಯಲ್ಲಿ ಉಲ್ಲೇಖಿಸಲಾಗಿತ್ಸಿತು.ವರದಿಪರಿಣಾಮವಾಗಿ ಫೇಸ್‌ಬುಕ್‌ ಮತ್ತು ಅಂಕಿದಾಸ್‌ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು.

ವರದಿಯ ನಂತರವೂ, ಫೇಸ್‌ಬುಕ್ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್ ದಾಸ್ ಮತ್ತು ಕಂಪನಿಯ ನೀತಿಗಳನ್ನು ಸಮರ್ಥಿಸಿಕೊಂಡಿದ್ದರು ಎಂದು ರಾಯಿಟರ್ಸ್‌ ವರದಿ ಮಾಡಿತ್ತು.

ಇದಿಷ್ಟೆ ಅಲ್ಲದೆ, ಕೇಂದ್ರದ ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿ ಇದೇ ವಿಚಾರವಾಗಿ ಅಂಕಿದಾಸ್‌ ಅವರನ್ನು ವಿಚಾರಣೆಗೂ ಒಳಪಡಿಸಿತ್ತು.

ವಿವಾದಕ್ಕೆ ಸಂಬಂಧಿಸಿದ ಈ ವರೆಗಿನ ಬೆಳವಣಿಗೆಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.